ಯೂಟ್ಯೂಬ್‌ನಲ್ಲಿ 'ಕಾಂತಾರ ಚಾಪ್ಟರ್- 1' ಟೀಸರ್ ಸೆಟ್ಟಿಂಗ್ಸ್ ಚೆಕ್ ಮಾಡಿದ್ರಾ? ಹೊಂಬಾಳೆ ಐಡಿಯಾ ಸಿಂಪ್ಲಿ ಸೂಪರ್

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ' ಪ್ರೀಕ್ವೆಲ್ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಟೀಸರ್ ಸಮೇತ ಚಿತ್ರದ ಮುಹೂರ್ತ ನೆರವೇರಿಸಿದೆ ಚಿತ್ರತಂಡ. ಕನ್ನಡ ಸೇರಿದಂತೆ 7 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಹೊಂಬಾಳೆ ಸಂಸ್ಥೆ ಬಹಳ ಅದ್ಧೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡಲಿದೆ.

ಕಳೆದ ವರ್ಷ ಬಿಡುಗಡೆಯಾಗಿದ್ದ 'ಕಾಂತಾರ' ಸಿನಿಮಾ 350 ಕೋಟಿ ರೂ. ಗಳಿಕೆ ಕಂಡು ಬಾಕ್ಸಾಫೀಸ್ ಶೇಕ್ ಮಾಡಿತ್ತು. 'KGF' ಸರಣಿ ಬಳಿಕ ಕನ್ನಡದ ಮತ್ತೊಂದು ಹೆಮ್ಮೆಯ ಸಿನಿಮಾ ಎನಿಸಿಕೊಂಡಿತ್ತು. ಹೊರದೇಶಗಳಲ್ಲೂ ಜನ ಕ್ಯೂ ನಿಂತು ಟಿಕೆಟ್ ಖರೀದಿಸಿ ಸಿನಿಮಾ ನೋಡಿದ್ದರು. ಪ್ರೀಕ್ವೆಲ್ ಬರುತ್ತದೆ ಎಂದಾಗಲೇ ನಿರೀಕ್ಷೆ ಮೂಡಿತ್ತು. ಟೀಸರ್ ನೋಡಿದ ಮೇಲೆ ಆ ನಿರೀಕ್ಷೆ ದುಪ್ಪಟ್ಟಾಗಿದೆ. ರಿಷಬ್ ಶೆಟ್ಟಿ ಈ ಬಾರಿ ಮತ್ತೊಂದು ಅದ್ಭುತ ಪ್ರಪಂಚ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ.

Did you check Rishab shettys Kantara Chapter -1 First Look teaser released in 6 languages

ಕದಂಬರ ಸಾಮ್ರಾಜ್ಯದ ಕಾಲಘಟ್ಟಕ್ಕೆ ಕರೆದುಕೊಂಡು ಹೋಗಿ ಪಂಜುರ್ಲಿ, ಗುಳಿಗ ದೈವಗಳ ಹುಟ್ಟಿನ ಕತೆ ಹೇಳುವ ಪ್ರಯತ್ನ ಮಾಡುತ್ತಿರುವಂತೆ ಕಾಣುತ್ತಿದೆ. ಚಾಪ್ಟರ್‌-1ರಲ್ಲಿ ರಿಷಬ್ ಲುಕ್ ಅಂತೂ ಮೈ ಜುಮ್ ಎನಿಸುವಂತಿದೆ. ಫಸ್ಟ್‌ಲುಕ್‌ನಲ್ಲಿ ರಿಷಬ್ ಕಿವಿಗೆ ತೊಟ್ಟಿರುವ ಓಲೆ ಪಂಜರ್ಲಿ ದೈವದ ಕೊಂಬಿನಂತೆ ಕಾಣುತ್ತಿದೆ. ಇನ್ನು ತ್ರಿಶೂಲ, ಕೊಡಲಿ ಹಿಡಿದ ಖಡಕ್ ಲುಕ್ ಅಂತೂ ಹುಬ್ಬೇರಿಸುವಂತಿದೆ. ಅಜನೀಶ್ ಲೋಕನಾಥ್ ಬಿಜಿಎಂ ಕಾಡುವಂತಿದೆ. ಒಟ್ಟಾರೆ ಟೀಸರ್ ಟೆಸ್ಟ್‌ನಲ್ಲಿ ರಿಷಬ್ ಫಸ್ಟ್‌ ಕ್ಲಾಸ್‌ನಲ್ಲಿ ಪಾಸ್ ಆಗಿದ್ದಾರೆ.

ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಬೆಂಗಾಳಿ ಹಾಗೂ ಇಂಗ್ಲೀಷ್‌ ಭಾಷೆಗಳಲ್ಲಿ 'ಕಾಂತಾರ-1' ಸಿನಿಮಾ ಏಕಕಾಲಕ್ಕೆ ರಿಲೀಸ್ ಆಗಲಿದೆ. ಆದರೆ ಹೊಂಬಾಳೆ ಯೂಟ್ಯೂಬ್‌ ಚಾನಲ್‌ನಲ್ಲಿ ಒಂದೇ ಒಂದು ಟೀಸರ್ ರಿಲೀಸ್ ಮಾಡಿದ್ದಾರೆ. ಕನ್ನಡದಲ್ಲಿ ಟೀಸರ್ ನೋಡಲು ಸಿಗುತ್ತಿದೆ. ಪರಭಾಷಿಕರು ನಮ್ಮ ಭಾಷೆಯಲ್ಲಿ ಟೀಸರ್ ಯಾಕೆ ರಿಲೀಸ್ ಮಾಡಿಲ್ಲ ಎಂದು ಕೇಳುತ್ತಿದ್ದಾರೆ. ಆದರೆ ಹೊಂಬಾಳೆ ಸಂಸ್ಥೆ 6 ಭಾಷೆಗಳಲ್ಲಿ ಟೀಸರ್ ಅಪ್‌ಲೋಡ್ ಮಾಡಿದೆ.

Did you check Rishab shettys Kantara Chapter -1 First Look teaser released in 6 languages

ಸಾಕಷ್ಟು ಜನರಿಗೆ ಎಲ್ಲಾ ಭಾಷೆಗಳಲ್ಲಿ ಟೀಸರ್ ಬಂದಿರೋದು ಗೊತ್ತಾಗುತ್ತಿಲ್ಲ. ಸೆಟ್ಟಿಂಗ್ಸ್‌ನಲ್ಲಿ ಭಾಷೆ ಬದಲಾವಣೆಯ ಅವಕಾಶ ನೀಡಲಾಗಿದೆ. ಹಾಗಾಗಿ ಇಂಗ್ಲೀಷ್ ಬಿಟ್ಟು 6 ಭಾಷೆಗಳಲ್ಲಿ ಸೆಟ್ಟಿಂಗ್ಸ್ ಬದಲಿಸಿಕೊಂಡು ಟೀಸರ್ ನೋಡಬಹುದಾಗಿದೆ. ಹೊಂಬಾಳೆ ಸಂಸ್ಥೆ ಪ್ಯಾನ್ ಇಂಡಿಯಾ ಸಿನಿಮಾಗಳ ಟೀಸರ್‌ ಅನ್ನು ಒಂದೇ ಭಾಷೆಯಲ್ಲಿ ರಿಲೀಸ್ ಮಾಡುವ ಪ್ರಯತ್ನ ಮಾಡುತ್ತಿದೆ. ಇಂಗ್ಲೀಷ್ ಡೈಲಾಗ್ ಜೊತೆಗೆ 'KGF-2' ಟೀಸರ್ ಬಂದಿತ್ತು. ಇತ್ತೀಚೆಗೆ 'ಸಲಾರ್' ಟೀಸರ್ ವಿಚಾರದಲ್ಲೂ ಇದೇ ಪ್ರಯತ್ನ ನಡೆದಿತ್ತು.

5 ಭಾಷೆಗಳಿಗೆ 5 ಬೇರೆ ಬೇರೆ ವಿಡಿಯೋಗಳನ್ನು ಶೇರ್ ಮಾಡುವ ಬದಲು ಒಂದೇ ವಿಡಿಯೋದಲ್ಲಿ 5 ಭಾಷೆಗಳ ಟೀಸರ್ ತೋರಿಸುವ ಪ್ರಯತ್ನ ಈಗ 'ಕಾಂತಾರ' ಟೀಸರ್‌ನಲ್ಲಿ ನೋಡಬಹುದು. ಮುಂದೆ ಇದೇ ಪ್ರಯತ್ನವನ್ನು 'ಸಲಾರ್' ಟ್ರೈಲರ್‌ನಲ್ಲೂ ಮಾಡುವಂತೆ ಕಾಣುತ್ತಿದೆ. ಒಂದೇ ಟ್ರೈಲರ್ ವಿಡಿಯೋ ಶೇರ್ ಮಾಡಿ 5 ಭಾಷೆಗಳಲ್ಲಿ ಆಡಿಯೋ ಸೆಟ್ಟಿಂಗ್ಸ್ ಬದಲಿಸಿಕೊಂಡು ನೋಡುವ ಕೊಡುವಂತೆ ಕಾಣುತ್ತಿದೆ. ಆ ಮೂಲಕ ಹೊಸ ಬೆಳವಣಿಗೆಗೆ ಹೊಂಬಾಳೆ ಸಂಸ್ಥೆ ಕೈಹಾಕಿದೆ.

'ಕಾಂತಾರ' ಚಾಪ್ಟರ್-1 ಫಸ್ಟ್ ಲುಕ್ ಟೀಸರ್ ಕೇವಲ 6 ಗಂಟೆಗಳಲ್ಲಿ 3.8 ಮಿಲಿಯನ್ ವೀವ್ಸ್ ಸಾಧಿಸಿದೆ. ಹಿಂದಿನ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ ಪ್ರೀಕ್ವೆಲ್‌ಗೂ ಕೆಲಸ ಮಾಡಲಿದೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ, ಪ್ರಗತಿ ಶೆಟ್ಟಿ ಕಾಸ್ಟ್ಯೂಮ್ ಡಿಸೈನ್ ಚಿತ್ರಕ್ಕಿರಲಿದೆ. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.

More from Filmibeat

English summary
Kantara A Legend Chapter-1 First Look Teaser out in 6 languages;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X