ಸುಬ್ಬ-ಸುಬ್ಬಿ ಲವ್ ಸ್ಟೋರಿ ; ಐರಾವತನನ್ನು ಖೆಡ್ಡಾಗೆ ಕೆಡವಿದ್ದು ಹೇಗೆ ಪವಿತ್ರಾ ಗೌಡ..?
ದರ್ಶನ್ ಪಾಲಿಗೆ ಮಗ್ಗಲ ಮುಳ್ಳು ಆದವಳು ಪವಿತ್ರಾ ಗೌಡ. ಮಾಡಬಾರದ್ದನ್ನೆಲ್ಲ ಮಾಡಿ ಒಂದು ಸುಂದರ ಸಂಸಾರವನ್ನು ಹಾಳುಗೆಡುವುದರ ಜೊತೆ ಒಬ್ಬ ಸೂಪರ್ ಸ್ಟಾರ್‌ನ ದುರಹಂಕಾರವನ್ನೆಲ್ಲ ಮಣ್ಣು ಮುಕ್ಕಿಸಿದ ಕುಖ್ಯಾತಿ ಹೊಂದಿರುವ ಈ ಪವಿತ್ರಾ ಗೌಡ, ದರ್ಶನ್‌ನಂತಹ ನಂಬರ್ ಓನ್ ನಟನ ಸಾಂಗತ್ಯ ಬೆಳೆಸಿಕೊಂಡಿದ್ಹೇಗೆ ಎನ್ನುವ ಪ್ರಶ್ನೆ ಮೊದಲಿಂದ ಅನೇಕರಲ್ಲಿದೆ. ಈ ಪ್ರಶ್ನೆಗೆ ಈಗ ಖುದ್ದು ಪವಿತ್ರಾ ಗೌಡ ನಿಖರವಾದ ಉತ್ತರ ನೀಡಿದ್ದಾಳೆ. ಐರಾವತನನ್ನು ಖೆಡ್ಡಾಗೆ ಕೆಡವಿದ್ಹೇಗೆ ಎನ್ನುವುದನ್ನು ಪೊಲೀಸರ ಎದುರು ಸ್ವಇಚ್ಛಾ ಹೇಳಿಕೆಯಲ್ಲಿ ದಾಖಲಿಸಿದ್ದಾಳೆ.
ಹೌದು, ಅಸಲಿಗೆ ಪವಿತ್ರಾ ಗೌಡ ಹೆಸರು ಕೇಳಿದ ತಕ್ಷಣ ಮೊದಲೆಲ್ಲ ಯಾರಾಕೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುತ್ತಿತ್ತು. ಯಾಕೆಂದರೆ ತನ್ನನ್ನು ತಾನು ನಟಿಯೆಂದು ಹೇಳಿಕೊಳ್ಳುತ್ತಿದ್ದ ಈಕೆ ಚಿತ್ರರಂಗದಲ್ಲಿ ಸಾಧಿಸಿ-ಬೇಧಿಸಿದ್ದು ಅಷ್ಟರಲ್ಲಿಯೇ ಇದೆ. ಅಗಮ್ಯ ಎನ್ನುವ ಪರಮತೋಪು ಚಿತ್ರದಲ್ಲಿ ನಟಿಸಿದ್ದ ಈಕೆ ಆ ನಂತರ ಛತ್ರಿಗಳು ಸಾರ್ ಛತ್ರಿಗಳು, ಸಾಗುವ ದಾರಿಯಲ್ಲಿ ಎಂಬ ಚಿತ್ರದಲ್ಲಿ ನಟಿಸಿದ್ದಳು. ಈ ಚಿತ್ರಕ್ಕೆ ಈಕೆಗೆ ಸಿಕ್ಕಿದ್ದ ಸಂಭಾವನೆ ಕೇವಲ 20 ಸಾವಿರ ಮಾತ್ರ. ಇದಲ್ಲದೇ ಬತ್ತಾಸ್ ಮತ್ತು ತಮಿಳಿನಲ್ಲಿ 54312 ಎಂಬ ಚಿತ್ರಗಳಿಗೆ ಕೂಡ ಪವಿತ್ರಾ ಗೌಡ ಮುಖಕ್ಕೆ ಬಣ್ಣ ಹಚ್ಚಿದ್ದಳು.

ಹೀಗೆ ನಾಲ್ಕೈದು ಚಿತ್ರದಲ್ಲಿ ನಟಿಸಿದ ಪವಿತ್ರಾ ಗೌಡ ಕುರಿತು ಆಕೆ ನಟನೆಯಲ್ಲಿ ವೀಕು. ಆ ಚೆಂದದ ಮುಖದಲ್ಲಿ ಭಾವನೆಗಳನ್ನೇ ಹೊಮ್ಮಿಸಲಾಗದ ಸ್ಥಿತಿ ಆಕೆಯದ್ದು ಎಂದು ಗಾಂಧಿನಗರ ಈ ಹಿಂದೆ ಮಾತನಾಡಿಕೊಂಡಿತ್ತು. ಒಟ್ಟಾರೆಯಾಗಿ ಆ ನಂತರ ಅವಕಾಶಗಳಿಗೇ ಬರ ಬಡಿದುಕೊಂಡಿತ್ತು.
ಇಂಥಾ ಪವಿತ್ರಾ ಎಲ್ಲಿ, ಛಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲಿ? ಇವರಿಬ್ಬರ ನಡುವೆ ಸಂಬಂಧ ಕುದುರೋದಾದರೂ ಹೇಗೆ ಸಾಧ್ಯ ಮುಂತಾದ ಪ್ರಶ್ನೆಗಳು ಸಹಜವೇ. ಈ ಪ್ರಶ್ನೆಗಳಿಗೆ ಪೊಲೀಸರ ಎದುರು ಉತ್ತರ ನೀಡಿರುವ ಪವಿತ್ರಾ ಗೌಡ ಬುಲ್ ಬುಲ್ ಚಿತ್ರದ ಆಡಿಷನ್ ಸಮಯದಲ್ಲಿ ನನಗೆ ದರ್ಶನ್ ಪರಿಚಯವಾಯಿತು ಎಂದಿದ್ದಾಳೆ. 2014ರಲ್ಲಿ ಬುಲ್ ಬುಲ್ ಚಿತ್ರದ ಆಡಿಷನ್‌ಗೆ ನಾನು ತೆರಳಿದ್ದೆ ಆಗ ನನ್ನ ಮಾಡೆಲಿಂಗ್ ಪ್ರೊಫೈಲ್ ಮತ್ತು ಫೋಟೋಗಳನ್ನು ದರ್ಶನ್ ಅವರಿಗೆ ನೀಡಿದ್ದೆ ಎಂದಿರುವ ಪವಿತ್ರಾ ಗೌಡ ಆ ನಂತರ ದರ್ಶನ್ ಮೊಬೈಲ್‌ಗೆ ಕರೆ ಮಾಡಿ ಮೊದಲ ಬಾರಿ ಮಾತನಾಡಿದ್ದೆ ಎಂದಿದ್ದಾಳೆ. ಆದರೆ, ದುರಾದೃಷ್ಟವಶಾತ್ ತಮ್ಮ ಚಿತ್ರದ ಆಡಿಷನ್ ಮುಗಿದಿದೆ ಎಂದಿದ್ದ ದರ್ಶನ್, ಮುಂದಿನ ಚಿತ್ರಕ್ಕೆ ಅವಶ್ಯಕತೆ ಇದ್ದರೆ ನಾನೇ ತಿಳುಸುವೆ ಎಂದು ಹೇಳಿದ್ದರು ಎಂದು ಕೂಡ ಪವಿತ್ರಾ ಗೌಡ ಹೇಳಿದ್ದಾಳೆ.

ಆ ನಂತರ ಇದೇ ನೆಪದಲ್ಲಿ ದರ್ಶನ್ ಅವರಿಗೆ ನಾನು ಮೇಲಿಂದ ಮೇಲೆ ಕರೆ ಮಾಡಲು ಶುರು ಮಾಡಿದೆ ಎಂದಿರುವ ಪವಿತ್ರಾ ಗೌಡ, ವಾಟ್ಸಾಫ್‌ನಲ್ಲಿ ಇಬ್ಬರು ಚ್ಯಾಟಿಂಗ್ ಮಾಡಲು ನಾವು ಶುರು ಮಾಡಿದ್ದೇವು ಎಂದು ಹೇಳಿದ್ದಾಳೆ. ಆ ನಂತರ ನೇರವಾಗಿ ಭೇಟಿ ಮಾಡಲು ಕೂಡ ಶುರು ಮಾಡಿದೆವು ಎಂದು ಕೂಡ ಹೇಳಿದ್ದಾಳೆ. ಮುಂದುವರೆದು ದರ್ಶನ್ ಗೆ ಮದುವೆಯಾಗಿರುವ ವಿಚಾರ ನನಗೆ ಗೊತ್ತಿದ್ದರೂ ನಾನು ಅವರನ್ನು ಪ್ರೀತಿ ಮಾಡಲು ಶುರು ಮಾಡಿದೆ ಎಂದಿರುವ ಪವಿತ್ರಾ ಗೌಡ, ದರ್ಶನ್ ಜೆಪಿ ನಗರದಲ್ಲಿರುವ ನನ್ನ ಮನೆಗೆ ಬರುತ್ತಿದ್ದರು. ನಮ್ಮ ಮನೆಯಿಂದ ಇಬ್ಬರೂ ಲಾಂಗ್ ಡ್ರೈವ್‌ಗೆ ಕೂಡ ಹೋಗುತ್ತಿದ್ದೇವು ಎಂದಿದ್ದಾಳೆ. ಇನ್ನೂ ಆರ್.ಆರ್.ನಗರದಲ್ಲಿ ದರ್ಶನ್ ಮನೆಯಿಂದ ಕೂಗಳತೆಯ ದೂರದಲ್ಲಿಯೇ ರಾಮಮೂರ್ತಿ ಎಂಬುವರಿಂದ 2018ರಲ್ಲಿ ಸೌಂದರ್ಯ ಜಗದೀಶ್ ಅವರ ಸಹಾಯದಿಂದ ದರ್ಶನ್ ನನ್ನ ಹೆಸರಿನಲ್ಲಿ ಮನೆ ಖರೀದಿಸಿದ ನಂತರ ನಾನು ನನ್ನ ಮಗಳು ಮತ್ತು ದರ್ಶನ್ ಜೊತೆಯಲ್ಲಿಯೇ ಆ ಮನೆಯಲ್ಲಿ ವಾಸ ಮಾಡಲು ಶುರು ಮಾಡಿದ್ದೇವು ಎಂದು ಕೂಡ ಪವಿತ್ರಾ ಗೌಡ ಪೊಲೀಸರ ಮುಂದೆ ಹೇಳಿಕೆಯನ್ನೂ ದಾಖಲಿಸಿದ್ದಾಳೆ.
ಹೀಗೆ ದರ್ಶನ್ ಬದುಕಿನ ಬಹುಮುಖ್ಯವಾದ ಭಾಗವಾದ ಪವಿತ್ರಾ ಗೌಡ ಆ ನಂತರ ''ರೆಡ್ ಕಾರ್ಪೆಟ್ 777'' ಎಂಬ ಡಿಸೈನರ್ ಸ್ಟುಡಿಯೋದ ಒಡತಿಯಾದಳು. ದರ್ಶನ್ ಕೃಪೆಯಿಂದ ಸಿಕ್ಕ
ಮೂರು ಫ್ಲೋರ್‌ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ ಮಾಡಲು ಶುರು ಮಾಡಿದ್ದಳು. ಪವಿತ್ರಾ ಬಳಿ ವೊಲ್ಸ್ ವ್ಯಾಗೆನ್ ಮತ್ತು ರೇಂಜ್ ರೋವರ್ ಕಾರುಗಳಲ್ಲಿ ಓಡಾಡಲು ಆರಂಭಿಸಿದಳು. ಆ ನಂತರ ಕೈಗೊಬ್ಬರು ಕಾಲಿಗೊಬ್ಬರು ಸಹಾಯಕರು ಬಂದರು. ಹೀಗೆ ಬಂದ ಸಹಾಯಕರಲ್ಲಿ ಪವನ್ ಕೂಡ ಒಬ್ಬ. ಈ ಪವನ್ ಬೇರೆ ಯಾರು ಅಲ್ಲ ಬದಲಿಗೆ ರೇಣುಕಾಸ್ವಾಮಿ ಬಗ್ಗೆ ದರ್ಶನ್ ಕಿವಿ ಕಚ್ಚಿದ್ದ ಮನೆ ಕೆಲಸದವನು ಅನ್ನುವುದು ನಿಮಗೆ ಗೊತ್ತಿರಲಿ.


Click it and Unblock the Notifications











