ಅಭಿಮಾನಿಯ ಮಗುವಿಗೆ 'ಪುನೀತ್‌ ರಾಜ್‌ಕುಮಾರ್' ಎಂದು ನಾಮಕರಣ ಮಾಡಿದ ರಾಘಣ್ಣ!

ತಿಂಗಳುಗಳೇ ಕಳೆದರೂ ನಟ ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವು ಕರಗುತ್ತಿಲ್ಲ. ಅಭಿಮಾನಿಗಳು ಮನೆ ಮನಗಳಲ್ಲಿ ಅಪ್ಪುನ ಪೂಜಿಸುತ್ತಲೇ ಇದ್ದಾರೆ. ನಿನ್ನೆಯಷ್ಟೆ(ಆಗಸ್ಟ್ 29) ಕುಟುಂಬ ಸದಸ್ಯರು ಪುನೀತ್ ರಾಜ್‌ಕುಮಾರ್ 10ನೇ ತಿಂಗಳಿನ ಪುಣ್ಯಸ್ಮರಣೆ ನಿಮಿತ್ತ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಇದೇ ದಿನ ಗದಗದ ಅಪ್ಪು ಅಭಿಮಾನಿ ದಂಪತಿ ತಮ್ಮ ಮಗುವಿಗೆ ಪುನೀತ್ ರಾಜ್‌ಕುಮಾರ್ ಎಂದು ನಾಮಕರಣ ಮಾಡಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್ ನಿವಾಸಕ್ಕೆ ಅಪ್ಪು ಪುಣ್ಯಸ್ಮರಣೆ ದಿನದಂದೇ ಗದಗ ಜಿಲ್ಲೆಯ ನರಗುಂದದಿಂದ ದಂಪತಿಗಳು ಭೇಟಿ ನೀಡಿದ್ದರು. ನಾವು ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು. ನಮ್ಮ ಮಗನಿಗೆ ಅಪ್ಪು ಸ್ಮರಣಾರ್ಥವಾಗಿ ಪುನೀತ್ ರಾಜ್‌ಕುಮಾರ್ ಎಂದು ಹೆಸರಿಡಲು ಕೋರಿದ್ದಾರೆ. ಇದಕ್ಕೆ ಒಪ್ಪಿದ ರಾಘಣ್ಣ 22 ದಿನಗಳ ಪುಟ್ಟ ಕಂದನ ಕಿವಿಯಲ್ಲಿ 'ಪುನೀತ್ ರಾಜ್‌ಕುಮಾರ್' ಕೂಗಿ ನಾಮಕರಣ ಮಾಡಿದ್ದಾರೆ. ಈ ವಿಡಿಯೋವನ್ನು ರಾಘಣ್ಣ ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ಈಗಾಗಲೇ ಸಾಕಷ್ಟು ಜನ ಅಭಿಮಾನಿಗಳು ತಮ್ಮ ಮಕ್ಕಳಿಗೆ ಪುನೀತ್ ರಾಜ್‌ಕುಮಾರ್ ಎಂದು ನಾಮಕರಣ ಮಾಡಿದ್ದಾರೆ. ಗದಗ ಜಿಲ್ಲೆಯ ನರಗುಂದ ಪಟ್ಟಣದ ಕಸಬಾ ಓಣಿಯ ನಿವಾಸಿಯಾದ ಮಾರುತಿ ಬೆಳವಣಿಕಿ ಮತ್ತು ಸಂಗೀತ ದಂಪತಿಗೆ ಗಂಡು ಮಗು ಜನನವಾಗಿತ್ತು. ದಂಪತಿಗೆ ತಮ್ಮ ಮಗುವಿಗೆ ಅಪ್ಪು ಅಂತ ನಾಮಕರಣ ಮಾಡಬೇಕು ಎನ್ನುವ ಹಂಬಲ ಇತ್ತು. ಬೆಂಗಳೂರಿನ ಅಪ್ಪು ಅವರ ಮನೆಯಲ್ಲಿಯೇ ನಮ್ಮ ಮಗುವಿನ ನಾಮಕರಣ ಮಾಡಬೇಕು. ಶಿವರಾಜ್‌ಕುಮಾರ್ ಅಥವಾ ರಾಘಣ್ಣ ಯಾರಾದರೂ ಒಬ್ಬರು ನಮ್ಮ ಮಗುವಿಗೆ ಅಪ್ಪು ಎಂದು ಹೆಸರಿಡಬೇಕು ಎನ್ನುವ ಹಂಬಲ ಅವರದ್ದಾಗಿತ್ತು. ಕೊನೆಗೂ ಅವರ ಆಸೆ ಈಗ ಈಡೇರಿದೆ.

Die Hard Fan Couple Named Their Child As Puneeth Rajkumar

ಮಾರುತಿ ಬೆಳವಣಿಕಿ ನರಗುಂದದಲ್ಲಿ ಅಪ್ಪು ಅಂತಾನೆ ಪ್ರಸಿದ್ಧಿ ಆಗಿದ್ದಾರೆ. ಮಾರುತಿಗೆ ಅಪ್ಪು ಅಂದರೆ ಅಪಾರ ಪ್ರೀತಿ. ಚಿಕ್ಕಂದಿನಿಂದಲೂ ಇವರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ. ಪುನೀತ್ ಅವರ ಚಿತ್ರಗಳು ಬಿಡುಗಡೆಯಾದರೆ ಹಬ್ಬದ ರೀತಿಯಲ್ಲಿ ಆಚರಣೆ ಮಾಡಿ ಸಂಭ್ರಮಿಸುತ್ತಿದ್ದರು. ಅಪ್ಪು ಅವರ ಅಗಲಿಕೆಯಿಂದ ಮಾರುತಿ ಬಹಳಷ್ಟು ನೊಂದುಕೊಂಡಿದ್ದರು. ಇದೀಗ ರಾಘಣ್ಣ ತಮ್ಮ ಮಗುವಿಗೆ ಪುನೀತ್ ರಾಜ್‌ಕುಮಾರ್ ಎಂದು ನಾಮಕರಣ ಮಾಡಿರುವುದು ಸಂತಸ ತಂದಿದೆ.

Die Hard Fan Couple Named Their Child As Puneeth Rajkumar

ಅಭಿಮಾನಿಗಳು ಎಲ್ಲಾ ಕಡೆ ಪುನೀತ್‌ ರಾಜ್‌ಕುಮಾರ್‌ನ ಕಾಣುತ್ತಿದ್ದಾರೆ. ಈ ವರ್ಷ ಗಣೇಶನ ಜೊತೆಗೆ ಪುನೀತ್ ರಾಜ್‌ಕುಮಾರ್ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲು ಮುಂದಾಗಿದ್ದಾರೆ. ಕಳೆದೊಂದು ತಿಂಗಳಿನಿಂದ ರಾಜ್ಯಾದ್ಯಂತ ಅಪ್ಪು ಗಣೇಶ ಮೂರ್ತಿಗಳಿಗೆ ಭಾರೀ ಡಿಮ್ಯಾಂಡ್ ಶುರುವಾಗಿತ್ತು. ಈಗಾಗಲೇ ಸಾಕಷ್ಟು ಜನ ಅಪ್ಪು ಗಣೇಶ ಮೂರ್ತಿಗಳನ್ನು ಕೊಂಡುಕೊಂಡಿದ್ದಾರೆ. ಗಣೇಶ ಯುವಕರ ಸಂಘಗಳು ಕೂಡ ಅಪ್ಪು ಗಣೇಶ ಮೂರ್ತಿ ಪೂಜಿಸಲು ಮುಂದಾಗಿದ್ದಾರೆ. ಅಪ್ಪು ಗಲ್ಲ ಹಿಡಿದ ಗಣೇಶ, ಗಣೇಶನ ಪಕ್ಕ ನಿಂತ ಅಪ್ಪು, ಅಪ್ಪುಗೆ ಮೋದಕ ತಿನ್ನಿಸುತ್ತಿರುವ ಗಣೇಶ ಹೀಗೆ ಭಿನ್ನ ವಿಭಿನ್ನ ಕಲ್ಪನೆಯಲ್ಲಿ ಗಣೇಶ ಮೂರ್ತಿಗಳು ಸಿದ್ಧವಾಗಿವೆ. ಇನ್ನು ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಸಿನಿಮಾ 'ಲಕ್ಕಿಮ್ಯಾನ್' ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

More from Filmibeat

English summary
Die Hard Fan Couple Named Their Child As Puneeth Rajkumar. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X