ಬೆನ್ನಮೇಲೆ ದರ್ಶನ್ ಟ್ಯಾಟು ಹಾಕಿಕೊಂಡ ಅಭಿಮಾನಿ
Recommended Video
ಚಾಲೆಂಜಿ ಸ್ಟಾರ್, ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದರ್ಶನ್ ಅಂದ್ರೆ ಅಭಿಮಾನಿಗಳಿಗೆ ಪಂಚಪ್ರಾಣ. ನೆಚ್ಚಿನ ನಟನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುವ ಅಭಿಮಾನಿಗಳು ಹೇಗೆಲ್ಲ ಅಭಿಮಾನ ಮೆರೆಯುತ್ತಾರೆ ಅಂತ ನೋಡಿದ್ರೆ ಅಚ್ಚರಿಯಾಗುತ್ತೆ.
ತರಹೇವಾರಿ ರೀತಿಯಲ್ಲಿ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ಹೊರಹಾಕುತ್ತಾರೆ. ಫೋಟೋವನ್ನು ಇಟ್ಟುಕೊಂಡು ಆರಾಧಿಸುವುದು, ಸೆಲ್ಫಿ ತೆಗೆದುಕೊಳ್ಳುವುದು, ಅವರ ಹೆಸರನ್ನು ಟ್ಯಾಟು ಹಾಕಿಕೊಳ್ಳುವುದು ಹೀಗೆ ವಿಭಿನ್ನ ರೀತಿಯಲ್ಲಿ ಪೂಜಿಸುತ್ತಾರೆ.
ಇಲ್ಲೊಬ್ಬ ಅಭಿಮಾನಿ ದರ್ಶನ್ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ ರೀತಿ ನೋಡಿದ್ರೆ ನಿಜಕ್ಕು ಶಾಕ್ ಆಗುತ್ತೆ. ಯಾಕೆಂದ್ರೆ ಬೆನ್ನಮೇಲೆ ದೊಡ್ಡದಾಗಿ ಟ್ಯಾಟು ಹಾಕಿಕೊಂಡಿದ್ದಾರೆ. ದರ್ಶನ್ ಅಭಿನಯದ 'ಸಂಗೊಳ್ಳಿ ರಾಯಣ್ಣ' ಚಿತ್ರದ ಟ್ಯಾಟು ಇದಾಗಿದೆ. ಚಿತ್ರದ ಕೆಳಗೆ ಡಿ ಬಾಸ್ ಎಂದು ಅಷ್ಟೆ ದೊಡ್ಡದಾಗಿ ಬರೆದುಕೊಂಡಿದ್ದಾರೆ.

ಈ ಟ್ಯಾಟು ನೋಡಿದ್ರೆ ಗೊತ್ತಾಗುತ್ತೆ ದರ್ಶನ್ ಅವರನ್ನು ಹೆಷ್ಟು ಇಷ್ಟಪಡುತ್ತಾರೆ ಎಂದು. ದಚ್ಚು ಹೋದಲ್ಲೆಲ್ಲ ಬಂದಲ್ಲೆಲ್ಲ ಅಭಿಮಾನಿಗಳ ಬಾಯಲ್ಲಿ ಕೇಳಿ ಬರುವುದು ಒಂದೇ ಶಬ್ದ. ಅದೂ ಡಿ ಬಾಸ್. ಹೌದು, ಎಲ್ಲಿ ಹೋದ್ರು ಅಭಿಮಾನಿಗಳು ಡಿ ಬಾಸ್ ಎಂದು ಕೂಗುತ್ತಿರುತ್ತಾರೆ. ಅದೆಷ್ಟೊ ಮಂದಿ ಡಿ ಬಾಸ್ ಎಂದು ಟ್ಯಾಟು ಹಾಕಿಕೊಂಡಿದ್ದಾರೆ. ಆದ್ರೆ ಈತ ಮಾತ್ರ ದೊಡ್ಡದಾಗಿ ದರ್ಶನ್ ಚಿತ್ರವನ್ನೆ ಬಿಡಿಸಿಕೊಂಡಿದ್ದಾರೆ.


Click it and Unblock the Notifications











