ದರ್ಶನ್ ಎಂದರೆ 'ಹುಚ್ಚು' ಅಭಿಮಾನ ; ಮಹಿಳಾ ಅಭಿಮಾನಿ 'ಎದೆ' ಮೇಲೆ ಚಾಲೆಂಜಿಂಗ್ ಸ್ಟಾರ್..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಏನೇ ತಂಟೆ ತಕರಾರುಗಳಿರಲಿ. ಆದರೆ ಅಭಿಮಾನಿಗಳ ಪಾಲಿಗೆ ದರ್ಶನ್ ಯಾವತ್ತಿದ್ದರೂ ಆರಾಧ್ಯ ದೈವನೇ. ಇದಕ್ಕೆ ಮಂಗಳಾ ಅತ್ಯುತ್ತಮ ಸಾಕ್ಷಿ.

ಹೌದು, ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲಿರೋ ಅಭಿಮಾನದ ತೀವ್ರತೆ ಎಂಥಾದ್ದೆಂಬುದಕ್ಕೆ ಪಕ್ಕಾ ಉದಾಹರಣೆಯಂತಿರೋ ಸ್ಟೋರಿ. ನಿಂತಲ್ಲಿ ಕುಂತಲ್ಲಿ ದರ್ಶನ್ ಜಪ ಮಾಡೋ ಮಂಗಳಾ ಇದರ ಕೇಂದ್ರ ಬಿಂದು. ಸದಾ ಕಾಲ ದರ್ಶನ್ ಅವರನ್ನೇ ಧ್ಯಾನಿಸುವ ಮಂಗಳಾ, ಅಭಿಮಾನದ ಹಚ್ಚೆಯನ್ನ ತಮ್ಮ ಎದೆಯ ಮೇಲೆ ಹಾಕಿಸಿಕೊಂಡಿದ್ದಾರೆ. ದರ್ಶನ್ ಅವರ ಮುಖವನ್ನ ಹಾಕಿಸಿಕೊಂಡು ಡಿ-ಬಾಸ್ ಎಂದು ಬರೆಸಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನದ ಪ್ರದರ್ಶನವನ್ನ ಮಾಡಿದ್ದಾರೆ. ಇವರ ಈ ಅಭಿಮಾನವನ್ನ ನೀವು ಹುಚ್ಚು ಅಭಿಮಾನ ಎಂದುಕೊಳ್ಳಬಹುದು. ಆದರೆ ಮಂಗಳಾ ಪಾಲಿಗೆ ಇದು ಒಬ್ಬ ಅಭಿಮಾನಿಯಾಗಿ ತನ್ನ ನೆಚ್ಚಿನ ನಟನಿಗೆ ಕೊಟ್ಟಿರುವ ಅಭಿಮಾನದ ಕೊಡುಗೆ.

Die Hard Fan Of Darshan Gets Tatoo On Her Chest

ಕೇವಲ ಎದೆ ಮೇಲಷ್ಟೇ ಅಲ್ಲ, ಮಂಗಳಾ ಅವರ ಕೈ ಮೇಲೂ ಕಾಣಿಸುವುದು ಕೇವಲ ದರ್ಶನ್ ಮಾತ್ರ. ಇನ್ನೂ ಇವರ ಇನ್ಸ್ಟಾ ಗ್ರಾಂ ಅಕೌಂಟ್ ತೆರೆದರೆ ಅಲ್ಲಿ ನಿಮಗೆ ದರ್ಶನ್ ಅವರ ವಿರಾಟ ರೂಪಗಳ ದರ್ಶನವಾಗುತ್ತೆ. ದರ್ಶನ್ ಅವರ ಸಿನಿಮಾದ ಹಾಡುಗಳಿಗೆ ಮಂಗಳಾ ಮಾಡಿರುವ ರೀಲ್ಸ್ ಗಳು ಕಣ್ಣು ಕುಕ್ಕುತ್ತವೆ. ಕೇವಲ ದರ್ಶನ್ ಸಿನಿಮಾದ ಹಾಡಷ್ಟೇ ಅಲ್ಲ ಕನ್ನಡದ ಹಳೆಯ ಚಿತ್ರಗೀತೆಗಳಿಗೂ ಮಂಗಳಾ ರೀಲ್ಸ್ ಮಾಡಿದ್ದಾರೆ. ಆದರೆ ಮಂಗಳಾ ಅವರ ಕಲ್ಪನೆಯಲ್ಲಿ ಆ ಹಾಡುಗಳ ಕಥಾನಾಯಕ ಬೇರೆ ಯಾರು ಅಲ್ಲ, ಬದಲಿಗೆ ದರ್ಶನ್ ಮಾತ್ರ

ಇವರ ಅಭಿಮಾನ ಇಷ್ಟಕ್ಕೇ ನಿಂತಿಲ್ಲ. ಟ್ಯಾಟೂ ಹಾಗೂ ರೀಲ್ಸ್ ಗಳಿಗಷ್ಟೇ ಸೀಮಿತವಾಗಿಲ್ಲ. ದರ್ಶನ್ ಅವರ ಸುತ್ತ ಸುತ್ತಿಕೊಳ್ಳುವ ವಾದ ವಿವಾದಗಳ ಬಗ್ಗೆಯೂ ಇವರು ಚರ್ಚೆ ಮಾಡ್ತಾರೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಡಿ ಬಾಸ್ ಅಂದರೆ ಜೀವ ಬಿಡೋವಷ್ಟು ಪ್ರೀತಿ ಅಭಿಮಾನ ಹೊಂದಿರೋ ಇವರನ್ನ, ಇನ್ಸ್ಟಾ ಗ್ರಾಂನಲ್ಲಿ ಹೆಚ್ಚು ಕಡಿಮೆ 39000 ಜನ ಫಾಲೋ ಮಾಡ್ತಿದ್ದಾರೆ. ದರ್ಶನ್ ಅವರ ಮೇಲೆ ಇವರಿಗೆ ಇರುವ ಅಭಿಮಾನಕ್ಕೆ ಮನ ಸೋತಿದ್ದಾರೆ. ಮಂಗಳಾ ಅವರ ಈ ಅಭಿಮಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಖುಷಿಯನ್ನ ಇಮ್ಮಡಿಗೊಳಿಸುವುದರಲ್ಲಿ ಅನುಮಾನ ಇಲ್ಲ.

Die Hard Fan Of Darshan Gets Tatoo On Her Chest

ತಮ್ಮ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ ದರ್ಶನ್..!

ಕಳೆದ ವರ್ಷ ಹುಟ್ಟುಹಬ್ಬದ ಸಮಯದಲ್ಲಿ, ಅಭಿಮಾನಿಗಳ ಅಭಿಮಾನಕ್ಕೆ ತಲೆ ಬಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ನೆಚ್ಚಿನ ಸೆಲೆಬ್ರಿಟೀಸ್‌ಗಳ ಹೆಸರಲ್ಲಿ ತಮ್ಮ ಎದೆಯ ದರ್ಶನ್ ಮೇಲೆ ಟ್ಯಾಟು ಹಾಕಿಸಿಕೊಂಡಿದ್ದರು. ಈ ಮೂಲಕ ಅಭಿಮಾನಿಗಳಿಗೆ ಗೌರವ ಸೂಚಿಸಿದ್ದರು. "ನನ್ನ ಸೆಲೆಬ್ರೆಟಿಗಳಿಗೆ ಕೊಡುತ್ತಿರುವ ಗೌರವವಿದು. ಹೌದಪ್ಪ, ನೀವೆಲ್ಲಾ ಇಲ್ಲಿ ಇದ್ದೀರಾ ಅಂತ. ಅವರು ನಮಗೆಲ್ಲ ಅಷ್ಟು ಮಾಡ್ತಾರೆ ಅಂದ್ರೆ, ನಾನು ಇಷ್ಟು ಮಾಡ್ಲಿಲ್ಲ ಅಂದ್ರೆ ಹೇಗೆ?" ಎಂದು ಟ್ಯಾಟೂ ಹಾಕಿಸಿಕೊಳ್ಳುವ ಸಮಯದಲ್ಲಿ ದರ್ಶನ್ ಮಾತನಾಡಿದ್ದರು. ದರ್ಶನ್ ಟ್ಯಾಟು ವಿಡಿಯೋ ನೋಡಿ ಕೆಲ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ರೆ ಗೆದ್ದಿರೋ ಮನಸ್ಸನ್ನು ಇನ್ನು ಎಷ್ಟು ಅಂತ ಗೆಲ್ತೀರಾ ಬಾಸ್ ಎಂದು ಅಭಿಮಾನಿಗಳು ದರ್ಶನ್ ಅವರಿಗೆ ಬಹುಪರಾಕ್ ಹಾಕಿದ್ದರು

More from Filmibeat

English summary
Die Hard Fan Of Challenging Star Darshan, Mangala Gets Tatoo On Her Chest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X