For Quick Alerts
  ALLOW NOTIFICATIONS  
  For Daily Alerts

  ಅತಿಥಿಗಳ ಕೈ ಸೇರಿದ ರಮಣ್ ಮದುವೆ ಆಮಂತ್ರಣ ಪತ್ರಿಕೆ

  By Pavithra
  |

  ರಾಧಾ ರಮಣ ಧಾರಾವಾಹಿ ಖ್ಯಾತಿಯ ಸ್ಕಂದ ಅಶೋಕ್ ಮದುವೆಗೆ ಕ್ಷಣಗಣನೆ ಆರಂಭವಾಗಿದೆ .ನಿನ್ನೆಯಷ್ಟೇ ಅಶೋಕ್ ಹಾಗೂ ಶಿಖಾ ಪ್ರಸಾದ್ ಅವರ ಹಳದಿ ಶಾಸ್ತ್ರಗಳು ನಡೆದಿದ್ದು ನಾಳೆ ಮೆಹಂದಿ ಹಾಗೂ ಸಂಗೀತ್ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆದಿದೆ .

  ಅದ್ಧೂರಿ ಹಾಗೂ ವಿಭಿನ್ನವಾಗಿ ನಡೆಯುತ್ತಿರುವ ಸ್ಕಂದ ಅಶೋಕ್ ಅವರ ಮದುವೆಗೆ ಸಾಕಷ್ಟು ಗಣ್ಯರು ಹಾಗೂ ರಾಜಕೀಯ ವ್ಯಕ್ತಿಗಳು ಭಾಗಿ ಆಗಲಿದ್ದಾರೆ.

  ಈಗಾಗಲೇ ಆಮಂತ್ರಣ ಪತ್ರಗಳನ್ನು ಗಣ್ಯರಿಗೆ ಹಾಗೂ ಸ್ನೇಹಿತರಿಗೆ ತಲುಪಿಸಿದ್ದು ಆಮಂತ್ರಣ ಪತ್ರವು ಕೂಡ ತುಂಬಾ ವಿಶೇಷವಾಗಿದೆ.

  6 ದಿನಗಳ ಕಾಲ ನಡೆಯಲಿದೆ ರಮಣನ ಕಲ್ಯಾಣ 6 ದಿನಗಳ ಕಾಲ ನಡೆಯಲಿದೆ ರಮಣನ ಕಲ್ಯಾಣ

  ಐದು ವಿಭಿನ್ನ ರೀತಿಯಲ್ಲಿ ರಮಣ್-ಶಿಖಾ ವಿವಾಹ ಆಮಂತ್ರಣವನ್ನು ಪ್ರಿಂಟ್ ಮಾಡಿಸಿದ್ದು ನೋಡುಗರನ್ನು ಆಕರ್ಷಣೆ ಮಾಡುತ್ತಿದೆ .ಹಾಗಾದರೆ ರಮಣ ಹಾಗೂ ಶಿಖಾ ಪ್ರಸಾದ್ ಅವರ ಮದುವೆ ಇನ್ವಿಟೇಷನ್ ವಿಶೇಷತೆಗಳು ಇಲ್ಲಿದೆ ಮುಂದೆ ಓದಿ..

  ಆಕರ್ಷಕವಾಗಿದೆ ಆಮಂತ್ರಣ ಪತ್ರಿಕೆ

  ಆಕರ್ಷಕವಾಗಿದೆ ಆಮಂತ್ರಣ ಪತ್ರಿಕೆ

  ಇತ್ತೀಚಿನ ದಿನಗಳಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ವಿಭಿನ್ನವಾಗಿ ಪ್ರಿಂಟ್ ಮಾಡಿಸುವುದು ಚಾಲ್ತಿಯಲ್ಲಿದೆ. ಎಲ್ಲರಿಗಿಂತಲೂ ವಿಭಿನ್ನವಾಗಿರುವ ಇನ್ವಿಟೇಶನ್ ಕೊಟ್ಟು ಮದುವೆಗೆ ಸ್ನೇಹಿತರನ್ನು ಹಾಗೂ ಬಂಧುಗಳನ್ನು ಆಹ್ವಾನ ಮಾಡಬೇಕೆನ್ನುವುದು ಎಲ್ಲರ ಆಸೆಯಾಗಿರುತ್ತದೆ .ಅದೇ ರೀತಿಯಲ್ಲಿ ಸ್ಕಂದ ಅಶೋಕ್ ಅವರ ಮದುವೆ ಆಮಂತ್ರಣ ಪತ್ರಿಕೆ ಕೂಡ ತುಂಬಾ ಸ್ಪೆಷಲ್ ಆಗಿದೆ.

  ಇನ್ವಿಟೇಶನ್ ಜತೆಯಲ್ಲಿ ಸುಗಂಧ ಬೀರುವ ಹೂಗಳು

  ಇನ್ವಿಟೇಶನ್ ಜತೆಯಲ್ಲಿ ಸುಗಂಧ ಬೀರುವ ಹೂಗಳು

  ರಮಣ್ ಮದುವೆಯ ಆಮಂತ್ರಣ ಪತ್ರಿಕೆ ತುಂಬಾ ಸ್ಪೆಷಲ್ ಆಗಿದೆ. ಐದು ರೀತಿಯ ವಿಭಿನ್ನ ಕಾರ್ಡ್ ಗಳು ಹಾಗೂ ಸಿಹಿ ತಿನಿಸು ಮತ್ತು ಇನ್ವಿಟೇಶನ್ ಬಾಕ್ಸ್ ಓಪನ್ ಮಾಡಿದ ತಕ್ಷಣ ಸುಗಂಧ ಬೀರುವಂತಹ ಹೂವುಗಳನ್ನು ಅದರಲ್ಲಿ ಇರಿಸಲಾಗಿದೆ.

  ಶಾಸ್ತ್ರಕ್ಕೆ ಸಂಬಂಧಿಸಿದಂತೆ ಕಾರ್ಡ್ಗಳ ಬಣ್ಣಗಳು

  ಶಾಸ್ತ್ರಕ್ಕೆ ಸಂಬಂಧಿಸಿದಂತೆ ಕಾರ್ಡ್ಗಳ ಬಣ್ಣಗಳು

  ರಾಮಣ್ ಹಾಗೂ ಶಿಖಾ ಪ್ರಸಾದ್ ಮದುವೆ ಬೆಂಗಳೂರಿನ ಪ್ರಮುಖ ಐದು ಸ್ಥಳಗಳಲ್ಲಿ ನಡೆಯುತ್ತಿದೆ .ಆಯಾ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಮದುವೆಯ ಆಮಂತ್ರಣ ಪತ್ರಿಕೆಗಳ ಬಣ್ಣವನ್ನು ಬದಲಿಸಲಾಗಿದೆ .ಹಳದಿ, ಮೆಹೆಂದಿ, ಸಂಗೀತ್, ವರಪೂಜೆ, ರಿಸೆಪ್ಷನ್ ಹಾಗೂ ಮುಹೂರ್ತ ಆರು ಕಾರ್ಯಕ್ರಮಗಳಿಗೆ ಬೇರೆ ಬೇರೆ ಕಾರ್ಡ್ ಗಳನ್ನು ಪ್ರಿಂಟ್ ಮಾಡಿಸಲಾಗಿದ್ದು ವಿಭಿನ್ನ ರೀತಿಯ ಬಣ್ಣಗಳನ್ನು ಹೊಂದಿದೆ.

  ಎಲ್ಲರನ್ನು ಆಕರ್ಷಿಸುವ ಆಮಂತ್ರಣ ಪತ್ರಿಕೆ

  ಎಲ್ಲರನ್ನು ಆಕರ್ಷಿಸುವ ಆಮಂತ್ರಣ ಪತ್ರಿಕೆ

  ಸ್ಕಂದ ಅಶೋಕ್ ಹಾಗೂ ಶಿಖಾ ಪ್ರಸಾದ್ ಅವರ ಮದುವೆ ಆಮಂತ್ರಣ ಪತ್ರಿಕೆ ಒಂದು ಕೆಜಿ ತೂಕದಷ್ಟು ಭಾರವಿದ್ದು ಸುಂದರವಾಗಿ ವಿನ್ಯಾಸವನ್ನು ಮಾಡಲಾಗಿದೆ. ಹೊರಗಿಂದ ನೋಡಿದ ತಕ್ಷಣವೇ ಸೆಳೆಯುವಂತಹ ಬಣ್ಣಗಳಿಂದ ಪ್ರಿಂಟ್ ಮಾಡಿಸಲಾಗಿದೆ.

  English summary
  Kannada Radha Ramana serial actor Skanda Ashok is getting married. Skanda is getting married on May 31 with her fiance Shika Prasad, A different invitation magazine has been made for Raman's wedding.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X