ಇಂದಿನಿಂದ ಶುರು ದಿಗಂತ್ - ಐಂದ್ರಿತಾ ಕಲ್ಯಾಣ ಸಂಭ್ರಮ
ಇಷ್ಟು ವರ್ಷಗಳು ತೆರೆ ಮೇಲೆ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದ ದಿಗಂತ್ ಹಾಗೂ ಐಂದ್ರಿತಾ ರೇ ಜೋಡಿ ಈಗ ನಿಜ ಜೀವನದಲ್ಲಿಯೂ ಒಂದಾಗಲಿದ್ದಾರೆ. ಇಂದಿನಿಂದ ಅವರ ಕಲ್ಯಾಣ ಮಹೋತ್ಸವ ನಡೆಯಲಿದೆ.
ಇಂದು ಮತ್ತು ನಾಳೆ (ಡಿಸೆಂಬರ್ 11 ಹಾಗೂ 12) ದಿಗಂತ್ ಮತ್ತು ಐಂದ್ರಿತಾ ಜೋಡಿಯ ಮದುವೆ ನಡೆಯಲಿದೆ. ಬೆಂಗಳೂರಿನ ನಂದಿ ಬೆಟ್ಟದ ಸಮೀಪ ಇರುವ ರೆಸಾರ್ಟ್ ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ನಿಸರ್ಗದ ಮಧ್ಯೆ ನವ ಬದುಕಿನ ಕಾಲಿಡುವ ಆಸೆ ಹೊಂದಿದ್ದ ಈ ಜೋಡಿ ಅದೇ ರೀತಿ ನಂದಿ ಬೆಟ್ಟದಲ್ಲಿ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ.

ಇಂದು ಸಂಗೀತ ಕಾರ್ಯಕ್ರಮ ಹಾಗೂ ಅರಿಶಿಣ ಶಾಸ್ತ್ರ ಕಾರ್ಯಕ್ರಮಗಳು ನಡೆಯಲಿದೆ. ಸಂಗೀತ ಕಾರ್ಯಕ್ರಮದಲ್ಲಿ ತಮ್ಮ ಸಿನಿಮಾದ ಹಾಡುಗಳಿಗೆ ದಿಗಂತ್ - ಐಂದ್ರಿತಾ ಹೆಜ್ಜೆ ಹಾಕಲಿದ್ದಾರೆ. ಸಂಗೀತ ಕಾರ್ಯಕ್ರಮ ಸಖತ್ ಮನರಂಜನೆ ನೀಡಬೇಕು ಎಂದು ಇಬ್ಬರ ಸ್ನೇಹಿತರು ಪ್ಲಾನ್ ಮಾಡಿದ್ದಾರಂತೆ.
ನಾಳೆ ಸಂಜೆ 6 ಗಂಟೆಗೆ ಈ ಜೋಡಿ ಹೊಸ ಬಾಳಿಗೆ ಲಗ್ಗೆ ಇಡುತ್ತಿದ್ದಾರೆ. ಇದೇ ತಿಂಗಳ 15 ರಂದು ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಆರತಕ್ಷತೆ ಕಾರ್ಯಕ್ರಮ ಏರ್ಪಾಡು ಮಾಡಿದ್ದು, ಇದರಲ್ಲಿ ಚಿತ್ರರಂಗದ ಗಣ್ಯರು ಭಾಗಿಯಾಗಲಿದ್ದಾರೆ.


Click it and Unblock the Notifications