twitter
    For Quick Alerts
    ALLOW NOTIFICATIONS  
    For Daily Alerts

    ಸತಿ ಪತಿಯಾದ ದಿಗಂತ್ - ಐಂದ್ರಿತಾ ರೇ

    |

    ಕನ್ನಡದ ಕ್ಯೂಟ್ ಜೋಡಿ ಈಗ ಸತಿ ಪತಿಯಾಗಿದ್ದಾರೆ. 'ಮನಸಾರೆ' ಪ್ರೀತಿ ಮಾಡಿದ್ದ ನಟ ದಿಗಂತ್ ಹಾಗೂ ಐಂದ್ರಿತಾ ರೇ ಈಗ ಮನಸಾರೆ ಮದುವೆಯಾಗಿದ್ದಾರೆ.

    ಫೋಟೋಗಳು : ದಿಗಂತ್-ಐಂದ್ರಿತಾ ಜೋಡಿಯ ಅರಿಶಿಣ ಶಾಸ್ತ್ರ ಫೋಟೋಗಳು : ದಿಗಂತ್-ಐಂದ್ರಿತಾ ಜೋಡಿಯ ಅರಿಶಿಣ ಶಾಸ್ತ್ರ

    ನಿನ್ನೆ ಸಂಜೆ ಈ ಜೋಡಿಯ ವಿವಾಹ ನಡೆದಿದೆ. 6.30ರ ಸುಮಾರಿಗೆ ಇವರ ಮುಹೂರ್ತ ಕಾರ್ಯ ನಡೆದಿದೆ. ಬೆಂಗಳೂರು ಹೊರವಲಯದ ನಂದಿಬೆಟ್ಟದ ಸಮೀಪ ಇರುವ ಡಿಸ್ಕವರಿ ವಿಲೇಜ್ ಎಂಬ ರೆಸಾರ್ಟ್‌ನಲ್ಲಿ ವಿವಾಹ ಕಾರ್ಯಕ್ರಮ ನೆರವೇರಿದೆ. ಮದುವೆಯಲ್ಲಿ ಸಂಪ್ರದಾಯ ಉಡುಗೆಗಳಲ್ಲಿ ದಿಗ್ಗಿ ಐಂದ್ರಿತಾ ಮಿಂಚಿದ್ದಾರೆ.

    ಇಂದಿನಿಂದ ಶುರು ದಿಗಂತ್ - ಐಂದ್ರಿತಾ ಕಲ್ಯಾಣ ಸಂಭ್ರಮ ಇಂದಿನಿಂದ ಶುರು ದಿಗಂತ್ - ಐಂದ್ರಿತಾ ಕಲ್ಯಾಣ ಸಂಭ್ರಮ

    ಹಿಂದೂ ಹಾಗೂ ಬೆಂಗಾಳಿ ಶೈಲಿಯಲ್ಲಿ ಮದುವೆ ಶಾಸ್ತ್ರಗಳು ನಡೆಯಿತು. ಕಳೆದ ಎರಡು ದಿನಗಳಿಂದ ಮದುವೆ ಸಂಭ್ರಮ ಪ್ರಾರಂಭ ಆಗಿದ್ದು, ಅರಿಶಿಣ, ಸಂಗೀತ ಕಾರ್ಯಕ್ರಮದ ಬಳಿಕ ಮುಹೂರ್ತ ಸಹ ಅದ್ದೂರಿಯಾಗಿ ನೆರವೇರಿದೆ. ನಟಿ ರಾಗಿಣಿ, ಶಾರ್ಮಿಳಾ ಮಾಂಡ್ರೆ ಸೇರಿದಂತೆ ಸ್ನೇಹಿತರು ಹಾಗೂ ಕುಟುಂಬದವರು ನವ ವಧು ವರನಿಗೆ ಶುಭಾಶಯ ತಿಳಿಸಿದರು.

    Diganth- Aindrita Ray got married

    ಇನ್ನು ಇದೇ ತಿಂಗಳ 15 ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇಲ್ಲಿಗೆ ಕನ್ನಡ ಚಿತ್ರರಂಗದ ಅನೇಕರು ಭಾಗಿಯಾಗಿ ನೂತನ ವಧು ವರರಿಗೆ ಶುಭ ಕೋರಲಿದ್ದಾರೆ.

    English summary
    Kannada actor Diganth-Aindrita Ray got married in a private resort, Bengaluru.
    Thursday, December 13, 2018, 12:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X