For Quick Alerts
  ALLOW NOTIFICATIONS  
  For Daily Alerts

  ದಿಗಂತ್-ಐಂದ್ರಿತಾ ಮದುವೆ ಎಲ್ಲಿ ಮತ್ತು ಯಾವಾಗ.? ಸಂಪೂರ್ಣ ಮಾಹಿತಿ ಇಲ್ಲಿದೆ..

  |

  ಯಶ್-ರಾಧಿಕಾ ಪಂಡಿತ್, ಚಿರಂಜೀವಿ ಸರ್ಜಾ-ಮೇಘನಾ ರಾಜ್ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ತಾರಾ ಜೋಡಿ ದಾಂಪತ್ಯ ಗೀತೆ ಹಾಡಲು ಸಜ್ಜಾಗಿದ್ದಾರೆ.

  ಗಾಂಧಿನಗರದ ದೂದ್ ಪೇಡಾ ದಿಗಂತ್ ಮತ್ತು ಬೆಂಗಾಲಿ ಬೆಡಗಿ ಐಂದ್ರಿತಾ ರೇ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ. ಇದೇ ತಿಂಗಳು ದಿಗಂತ್-ಐಂದ್ರಿತಾ ಮದುವೆ ಬೆಂಗಳೂರಿನಲ್ಲೇ ನಡೆಯಲಿದೆ.

  ಮದುವೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಸದ್ಯ ಅತಿಥಿಗಳಿಗೆ ಆಮಂತ್ರಣ ಪತ್ರಿಕೆ ನೀಡುವಲ್ಲಿ ದಿಗಂತ್ ಮತ್ತು ಐಂದ್ರಿತಾ ಕುಟುಂಬ ತೊಡಗಿದೆ. ದಿಗಂತ್-ಐಂದ್ರಿತಾ ಮದುವೆಯ ಯಾವಾಗ ಮತ್ತು ಎಲ್ಲಿ ನಡೆಯಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ, ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ದಿಗಂತ್-ಐಂದ್ರಿತಾ ಮದುವೆ ಯಾವಾಗ.?

  ದಿಗಂತ್-ಐಂದ್ರಿತಾ ಮದುವೆ ಯಾವಾಗ.?

  ಡಿಸೆಂಬರ್ 12 (ಬುಧವಾರ) ರಂದು ದಿಗಂತ್-ಐಂದ್ರಿತಾ ರೇ ಮದುವೆ ಗುರು-ಹಿರಿಯರ ಸಮ್ಮುಖದಲ್ಲಿ ನಡೆಯಲಿದೆ. ದಿಗಂತ್-ಐಂದ್ರಿತಾ ರೇ ವಿವಾಹದ ಆಹ್ವಾನ ಪತ್ರಿಕೆ ಸಖತ್ ಸಿಂಪಲ್ ಆಗಿದ್ದು, ಮದುವೆಯನ್ನೂ ಶಾಸ್ತ್ರೋಕ್ತವಾಗಿ, ಸಿಂಪಲ್ ಆಗಿ ನೆರವೇರಿಸಲು ವಧು-ವರ ನಿರ್ಧರಿಸಿದ್ದಾರೆ.

  ದಿಗಂತ್ - ಐಂದ್ರಿತಾ ಮದುವೆ ಡೇಟ್ ಫಿಕ್ಸ್ : 3 ತಿಂಗಳ ಹಿಂದೆಯೇ ನಿಶ್ಚಿತಾರ್ಥ ಆಗಿತ್ತು

  ದಿಗಂತ್-ಐಂದ್ರಿತಾ ಮದುವೆ ಎಲ್ಲಿ.?

  ದಿಗಂತ್-ಐಂದ್ರಿತಾ ಮದುವೆ ಎಲ್ಲಿ.?

  ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇರುವ ಸುಭಾಷ್ ಭವನದಲ್ಲಿ ದಿಗಂತ್-ಐಂದ್ರಿತಾ ವಿವಾಹ ಮಹೋತ್ಸವ ನಡೆಯಲಿದೆ. ಚಿತ್ರರಂಗದ ತಾರೆಯರು ದಿಗಂತ್-ಐಂದ್ರಿತಾ ಮದುವೆಗೆ ಸಾಕ್ಷಿ ಆಗಲಿದ್ದಾರೆ.

  ಮದುವೆ ಯಾವಾಗ ? ಅಂದ್ರೆ ಹೀಗೆ ಹೇಳಿದ್ರು ದಿಗಂತ್ - ಐಂದ್ರಿತಾ!

  ಸಾಂಪ್ರದಾಯಿಕ ಉಡುಗೆಯಲ್ಲೇ ಬನ್ನಿ...

  ಸಾಂಪ್ರದಾಯಿಕ ಉಡುಗೆಯಲ್ಲೇ ಬನ್ನಿ...

  ಮದುವೆಗೆ ಆಹ್ವಾನ ನೀಡುತ್ತಿರುವ ಅತಿಥಿಗಳಿಗೆ ''ಸಂಪ್ರದಾಯಿಕ ಉಡುಗೆ ತೊಟ್ಟು ಬನ್ನಿ'' ಎಂದು ವರ ದಿಗಂತ್ ಮತ್ತು ವಧು ಐಂದ್ರಿತಾ ರೇ ಮನವಿ ಮಾಡಿದ್ದಾರಂತೆ.

  ದಿಗಂತ್- ಐಂದ್ರಿತಾ ಪ್ರೇಮಕಥೆ ಶುರುವಾಗಿದ್ದು ಹೀಗೆ

  ದಿಗಂತ್-ಐಂದ್ರಿತಾ ಮದುವೆಗೆ ಸ್ಟಾರ್ ಡಿಸೈನರ್

  ದಿಗಂತ್-ಐಂದ್ರಿತಾ ಮದುವೆಗೆ ಸ್ಟಾರ್ ಡಿಸೈನರ್

  ಮದುವೆಗಾಗಿ ದಿಗಂತ್ ಮತ್ತು ಐಂದ್ರಿತಾ ರೇಗೆ ಸ್ಟಾರ್ ಡಿಸೈನರ್ ಆದ ಮನೋವಿರಾಜ್ ಕೋಸ್ಲಾ ಉಡುಪುಗಳನ್ನು ಡಿಸೈನ್ ಮಾಡುತ್ತಿದ್ದಾರೆ. ವರ್ಷಗಳಿಂದ 'ಮನಸಾರೆ' ಪ್ರೀತಿ ಮಾಡುತ್ತಿರುವ ಈ ಜೋಡಿ ಇದೀಗ ಹಸೆಮಣೆ ಏರಲು ಸಿದ್ಧವಾಗಿದೆ.

  English summary
  Diganth-Aindrita Ray to get married on December 12th in Subhash Bhavan, RR Nagar, Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X