ದಿಗಂತ್ - ಐಂದ್ರಿತಾ ಆರತಕ್ಷತೆಯಲ್ಲಿ ಕನ್ನಡದ ಸ್ಟಾರ್ ಗಳು

ನಟ ದಿಗಂತ್ ಹಾಗೂ ಐಂದ್ರಿತಾ ರೇ ವಿವಾಹ ಕಳೆದ ವಾರ ನಡೆದಿದೆ. ಮದುವೆ ಬಳಿಕ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶನಿವಾರ ಸಂಜೆ ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.

ಈ ಕಾರ್ಯಕ್ರಮಕ್ಕೆ ಕನ್ನಡ ನಟರಾದ ಯಶ್, ರಕ್ಷಿತ್ ಶೆಟ್ಟಿ, ಸಂಜನಾ, ನಿರೂಪಕ ಅಕುಲ್ ಬಾಲಾಜಿ, ಉದ್ಯಮಿ ಅಶೋಕ್ ಖೇಣಿ ಸೇರಿದಂತೆ ಅನೇಕರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದರು.

ಕಳೆದ ಗುರುವಾರ ಬೆಂಗಳೂರು ಹೊರವಲಯದ ನಂದಿಬೆಟ್ಟದ ಸಮೀಪ ಇರುವ ಡಿಸ್ಕವರಿ ವಿಲೇಜ್ ಎಂಬ ರೆಸಾರ್ಟ್‌ನಲ್ಲಿ ವಿವಾಹ ಕಾರ್ಯಕ್ರಮ ನೆರವೇರಿತ್ತು. ಈ ಕಾರ್ಯಕ್ರಮದಲ್ಲಿ ನಟಿ ರಾಗಿಣಿ ದ್ವಿವೇದಿ, ಶಾರ್ಮಿಳಾ ಮಾಂಡ್ರೆ ಸೇರಿದಂತೆ ಕೆಲವು ಚಿತ್ರರಂಗದ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.

ಅಂದಹಾಗೆ, ಶನಿವಾರ ನಡೆದ ದಿಗಂತ್ - ಐಂದ್ರಿತಾ ಆರತಕ್ಷತೆ ಕಾರ್ಯಕ್ರಮ ಫೋಟೋಗಳು ಮುಂದಿವೆ ಓದಿ..

ಯಶ್ ವಿಶ್

ಯಶ್ ವಿಶ್

ನಟ ಯಶ್ 'ಕೆಜಿಎಫ್' ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದಾರೆ. ಈ ನಡುವೆಯೂ ದಿಗಂತ್ ಹಾಗೂ ಐಂದ್ರಿತಾ ಆರತಕ್ಷತೆ ಕಾರ್ಯಕ್ರಮಕ್ಕೆ ಯಶ್ ಬಂದು ವಿಶ್ ಮಾಡಿದ್ದಾರೆ. ಯಶ್ ಆಗಮನದಿಂದ ನವ ಜೋಡಿ ಕೂಡ ಖುಷಿಯಾಗಿದೆ. ಇನ್ನು ದಿಗಂತ್ ಹಾಗೂ ಯಶ್ ತುಂಬ ಒಳ್ಳೆಯ ಗೆಳೆಯರಾಗಿದ್ದಾರೆ.

ರಕ್ಷಿತ್ ಶೆಟ್ಟಿ ಶುಭ ಹಾರೈಕೆ

ರಕ್ಷಿತ್ ಶೆಟ್ಟಿ ಶುಭ ಹಾರೈಕೆ

ನಟ ರಕ್ಷಿತ್ ಶೆಟ್ಟಿ ಸಹ ದಿಗಂತ್ ಹಾಗೂ ಐಂದ್ರಿತಾ ದಂಪತಿಗೆ ಶುಭಾಶಯ ತಿಳಿಸಿದ್ದಾರೆ. ಆರತಕ್ಷತೆ ಕಾರ್ಯಕ್ರಮದಲ್ಲಿ ರಕ್ಷಿತ್ ಸೇರಿದಂತೆ 'ಕಥೆಯೊಂದು ಶುರುವಾಗಿದೆ' ಚಿತ್ರತಂಡ ದಿಗಂತ್ ಹಾಗೂ ಐಂದ್ರಿತಾ ಇಬ್ಬರಿಗೆ ವಿಶ್ ಮಾಡಿದ್ದಾರೆ. 'ಕಥೆಯೊಂದು ಶುರುವಾಗಿದೆ' ಸಿನಿಮಾ ಐಂದ್ರಿತಾ ಬಹಳ ಇಷ್ಟ ಪಟ್ಟ ದಿಗಂತ್ ನಟನೆಯ ಚಿತ್ರವಾಗಿದೆ.

ಅಕುಲ್ ದಂಪತಿ ಭಾಗಿ

ಅಕುಲ್ ದಂಪತಿ ಭಾಗಿ

ದಿಗಂತ್ ಹಾಗೂ ಐಂದ್ರಿತಾ ಆರತಕ್ಷತೆ ಕಾರ್ಯಕ್ರಮದಲ್ಲಿ ನಿರೂಪಕ ಅಕುಲ್ ಹಾಗೂ ಅವರ ಪತ್ನಿ ಭಾಗಿಯಾಗಿದ್ದರು. ಈ ಹಿಂದೆ ಅಕುಲ್ ಅವರ ಅನೇಕ ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಲವ್ ಸ್ಟೋರಿ ಬಗ್ಗೆ ಕೇಳಿ ಎಂದು ಆಗಲೂ ಅಕುಲ್ ತಮಾಷೆ ಮಾಡುತ್ತಿದ್ದರು.

ಸಂಜನಾ ಶುಭಾಶಯ

ಸಂಜನಾ ಶುಭಾಶಯ

ನಟಿ ಸಂಜನಾ ಸಹ ಈ ಸಂತೋಷದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಸಂಜನಾ ತಾಯಿ ಹೊಸ ಜೋಡಿಗೆ ಆಶೀರ್ವಾದ ಮಾಡಿದರು. ದಿಗಂತ್ ಹಾಗೂ ಐಂದ್ರಿತಾ ಜೋಡಿಯ ಜೊತೆ ತೆಗೆಸಿಕೊಂಡ ಫೋಟೋವನ್ನ ಸಂಜನಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಅಶೋಕ್ ಖೇಣಿ ಹಾಜರಿ

ಅಶೋಕ್ ಖೇಣಿ ಹಾಜರಿ

ಸಿನಿಮಾದವರ ಜೊತೆಗೆ ಬೇರೆ ಬೇರೆ ಕ್ಷೇತ್ರದ ಕೆಲವು ಗಣ್ಯರು ಕೂಡ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಉದ್ಯಮಿ ಅಶೋಕ್ ಖೇಣಿ ಆರತಕ್ಷತೆಗೆ ಬಂದು ದಿಗಂತ್ ಹಾಗೂ ಐಂದ್ರಿತಾಗೆ ವಿಶ್ ಮಾಡಿದರು.

More from Filmibeat

English summary
Kannada actor Diganth-Aindrita Ray reception photos. Diganth and Aindrita got married last thursday in a private resort, Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X