ಶೂಟಿಂಗ್ ಮುಂಚೆ ಕಾಫಿ ಬ್ರೇಕ್: ದಿಗಂತ್-ಐಂದ್ರಿತಾ ರೊಮ್ಯಾಂಟಿಕ್ ಫೋಟೋ
ಸ್ಯಾಂಡಲ್‌ವುಡ್‌ನ ಚೆಂದದ ಜೋಡಿಯಲ್ಲಿ ದಿಗಂತ್ ಮತ್ತು ಐಂದ್ರಿತಾ ರೇ ಸಹ ಒಂದು. ದಿಗಂತ್ ಮತ್ತು ಐಂದ್ರಿತಾ ತಮ್ಮ ಖಾಸಗಿ ಜೀವನವನ್ನು ಬಹಳ ಖುಷಿಯಿಂದ ಎಂಜಾಯ್ ಮಾಡುತ್ತಿದ್ದಾರೆ.
ಈ ಕಡೆ ಸಿನಿಮಾ ಇಂಡಸ್ಟ್ರಿಯಲ್ಲೂ ಈ ಜೋಡಿ ಬಹಳ ಬ್ಯುಸಿ ಇದ್ದಾರೆ. ದಿಗಂತ್ ನಾಲ್ಕೈದು ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ದಾರೆ. ಐಂದ್ರಿಯಾ ಸಹ ಬ್ಯಾಕ್ ಟು ಬ್ಯಾಕ್ ಸಿನಿಮಾ ಕೈಗೆತ್ತಿಕೊಳ್ಳುತ್ತಿದ್ದಾರೆ.
ಸದ್ಯ ದಿಗಂತ್ ಮತ್ತು ಐಂದ್ರಿತಾ ರೇ ಜೋಡಿ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿನಾಯಕ ಕೋಡ್ಸರ ನಿರ್ದೇಶನದಲ್ಲಿ ತಯಾರಾಗುತ್ತಿರುವ ''ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ'' ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿರುವ ದಿಗ್ಗಿ-ಆಂಡಿ ಜೋಡಿ ಸದ್ಯ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.

ಈ ಚಿತ್ರದ ಶೂಟಿಂಗ್ ವೇಳೆ ತೆಗೆದ ಕೆಲವು ಫೋಟೋಗಳನ್ನು ಐಂದ್ರಿತಾ ರೇ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ನೋಡಲು ರೊಮ್ಯಾಂಟಿಕ್ ಆಗಿದೆ. ಈ ಜೋಡಿಯ ಈ ಫೋಟೋಗಳನ್ನು ನೋಡಿ ನೆಟ್ಟಿಗರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
''ಶೂಟಿಂಗ್ ಶುರುವಾಗುವುದಕ್ಕೂ ಮುಂಚೆ ಕಾಫಿ ಬ್ರೇಕ್'' ಎಂದು ಕ್ಯಾಪ್ಷನ್ ಹಾಕಿರುವ ಐಂದ್ರಿತಾ ರೇ ನಾಲ್ಕು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಈ ಚಿತ್ರದ ಜೊತೆ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ, ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2, ವೇರ್ ಈಸ್ ಮೈ ಕನ್ನಡಕ, ಹಾಗೂ ಮಾರಿಗೋಲ್ಡ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಹೆಸರಿಡದ ರೀಮೇಕ್ ಚಿತ್ರವೊಂದನ್ನು ಸಹ ಆರಂಭಿಸಿದ್ದಾರೆ.
ಆ ಕಡೆ ಐಂದ್ರಿತಾ ರೇ ನಟಿಸಿರುವ ಗರುಡ ಹಾಗೂ ಪ್ರೇಮ ಪೂಜ್ಯಂ ಸಿನಿಮಾ ಬಿಡುಗಡೆಗೆ ತಯಾರಾಗಿದೆ.


Click it and Unblock the Notifications











