twitter
    For Quick Alerts
    ALLOW NOTIFICATIONS  
    For Daily Alerts

    ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದ ದಿಗಂತ್-ಐಂದ್ರಿತಾ: ಸರ್ಕಾರ ಕೊಡ್ತಿಲ್ಲ ಎಂದ ನೆಟ್ಟಿಗರು

    |

    ನಟ ದಿಗಂತ್ ಮಂಚಾಲೆ ಮತ್ತು ನಟಿ ಐಂದ್ರಿತಾ ರೇ ನಿನ್ನೆ (ಮೇ 13) ರಂದು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಶಿವಮೊಗ್ಗದಲ್ಲಿರುವ ದಿಗಂತ್ ಹಾಗೂ ಐಂದ್ರಿತಾ ದಂಪತಿ ಅಲ್ಲಿಯೇ ತಮ್ಮ ಹೆಸರು ರಿಜಿಸ್ಟರ್ ಮಾಡಿಸಿಕೊಂಡು ವ್ಯಾಕ್ಸಿನ್ ಪಡೆದಿದ್ದಾರೆ.

    ಈ ಬಗ್ಗೆ ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ದಿಗಂತ್ 'ನಾನು ಮತ್ತು ಐಂದ್ರಿತಾ ಕೋವಿಡ್ ವ್ಯಾಕ್ಸಿನ್ ತೆಗೆದುಕೊಂಡೆವು. ನೊಂದಣಿ ಮಾಡಿಕೊಳ್ಳುವ ವಿಧಾನ ಸರಳವಾಗಿದೆ. ಕೋವಿನ್ ವೆಬ್ ಸೈಟ್ ಅಥವಾ ಆರೋಗ್ಯ ಸೇತು ಆಪ್‌ನಲ್ಲಿ ನೊಂದಣಿ ಮಾಡಿಕೊಂಡು ಸ್ಲಾಟ್ ಪಡೆದುಕೊಳ್ಳಿ ನಿಮ್ಮ ಸಮೀಪದ ಆರೋಗ್ಯ ಕೇಂದ್ರಕ್ಕೆ ಹೋಗಿ ವ್ಯಾಕ್ಸಿನ್ ಪಡೆಯಿರಿ. ಕೋವಿಡ್ ವಿರುದ್ಧ ಹೋರಾಡಲು ಇದೊಂದೇ ಅಸ್ತ್ರ' ಎಂದಿದ್ದಾರೆ ದಿಗಂತ್.

    ನಟಿ ಐಂದ್ರಿತಾ ರೇ ಸಹ ದಿಗಂತ್ ಮಾತಿಗೆ ದನಿಗೂಡಿಸಿದ್ದು, 'ವ್ಯಾಕ್ಸಿನ್‌ ಕಡಿಮೆ ಇದೆ ಎಂಬುದು ಗೊತ್ತಿದೆ. ಆದರೆ ಈ ಬಗ್ಗೆ ನಿರ್ಲಕ್ಷ್ಯ ಅಥವಾ ಭಯ ಬೇಡ. ದಯವಿಟ್ಟು ನಿಮ್ಮ ಹೆಸರು ರಿಜಿಸ್ಟರ್ ಮಾಡಿಸಿಕೊಂಡು ವ್ಯಾಕ್ಸಿನ್ ಪಡೆಯಿರಿ' ಎಂದಿದ್ದಾರೆ.

    Diganth And Aindrita Vaccinated, Request People To Get Vaccine

    ದಿಗಂತ್ ಹಾಗೂ ಐಂದ್ರಿತಾ ವಿಡಿಯೋಕ್ಕೆ ಭಿನ್ನ-ಭಿನ್ನ ಪ್ರತಿಕ್ರಿಯೆಗಳು ಬಂದಿದ್ದು, 'ನಾವು ವ್ಯಾಕ್ಸಿನ್ ಪಡೆಯಲು ತಯಾರಿದ್ದೇವೆ ಆದರೆ ಸರ್ಕಾರವೇ ವ್ಯಾಕ್ಸಿನ್ ಕೊಡುತ್ತಿಲ್ಲ' ಎಂದಿದ್ದಾರೆ ಒಬ್ಬರು.

    ಮತ್ತೊಬ್ಬರು, 'ಸರ್ಕಾರವು 18 ವಯಸ್ಸಿನ ಮೇಲಿನವರಿಗೆ ವ್ಯಾಕ್ಸಿನ್ ನೀಡುವುದನ್ನು ಸರ್ಕಾರ ರದ್ದು ಮಾಡಿರುವ ವಿಷಯ ನಿಮಗೆ ಗೊತ್ತಿಲ್ಲವೇ?' ಎಂದು ಪ್ರಶ್ನೆ ಮಾಡಿದ್ದಾರೆ. 'ಸೆಲೆಬ್ರಿಟಿಗಳಿಗೆ ಸಿಕ್ಕಷ್ಟು ಸುಲಭವಾಗಿ ಸಾಮಾನ್ಯರಿಗೆ ಸ್ಲಾಟ್ ಸಿಗುತ್ತಿಲ್ಲ. ಪ್ರಯತ್ನಿಸಿ ಸಾಕಾಗಿದೆ' ಎಂದಿದ್ದಾರೆ ಇನ್ನೊಬ್ಬ ನೆಟ್ಟಿಗ.

    Recommended Video

    ರಾಧೆ ಸಿನಿಮಾವನ್ನು ಪ್ರಭುದೇವ ಹಾಳು ಮಾಡಿದ್ದಾರೆ ಅಂದ್ರು ನಟಿ ಶ್ರೀರೆಡ್ಡಿ | Filmibeat Kannada

    ಮೇ 14 ರಿಂದ 18 ವರ್ಷ ಮೇಲ್ಪಟ್ಟು 45 ವರ್ಷ ಒಳಗಿನವರಿಗೆ ವ್ಯಾಕ್ಸಿನ್ ನೀಡಲಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಎರಡು ದಿನಗಳ ಹಿಂದಷ್ಟೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ವ್ಯಾಕ್ಸಿನ್ ಲಭ್ಯತೆ ಕಡಿಮೆ ಇದ್ದು 45 ವರ್ಷ ಮೇಲ್ಪಟ್ಟವರಿಗಷ್ಟೆ ಆದ್ಯತೆ ಮೇರೆಗೆ ವ್ಯಾಕ್ಸಿನ್ ನೀಡಲಾಗುತ್ತಿದೆ.

    English summary
    Actor Diganth and Aindrita Ray vaccinated recently. Both request people to take vaccine. But state govt not giving vaccine to above 18-45 aged people.
    Friday, May 14, 2021, 20:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X