ಹೈದರಾಬಾದ್‌ನಲ್ಲಿ ಒಂದು ವಾರ ಶೂಟಿಂಗ್ ಮುಗಿಸಿದ ದಿಗಂತ್-ಹರಿಪ್ರಿಯಾ

ದೂದ್‌ಪೇಡಾ ದಿಗಂತ್ ಮತ್ತು ನಟಿ ಹರಿಪ್ರಿಯಾ ನಟಿಸುತ್ತಿರುವ ಇನ್ನು ಹೆಸರಿಡದ ಹೊಸ ಸಿನಿಮಾದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಭರದಿಂದ ಶೂಟಿಂಗ್ ಮಾಡುತ್ತಿರುವ ಚಿತ್ರತಂಡ ಅದಾಗಲೇ ಒಂದು ವಾರಗಳ ಶೆಡ್ಯೂಲ್ ಮುಗಿಸಿದೆ.

ಈ ಕುರಿತು ಹರಿಪ್ರಿಯಾ ಫೋಟೋ ಹಂಚಿಕೊಂಡಿದ್ದು, ''ದಿಗಂತ್ ಅವರೊಂದಿಗೆ ಹೊಸ ಚಿತ್ರದ ಶೂಟಿಂಗ್ ಹೈದರಾಬಾದ್‌ನಲ್ಲಿ ಆರಂಭವಾಗಿದೆ. ಇನ್ನು ಹೆಸರಿಡದ ಈ ಚಿತ್ರ ಒಂದು ವಾರದ ಹಿಂದೆ ಶುರುವಾಗಿತ್ತು. ಚಿತ್ರತಂಡದ ಉತ್ಸುಕತೆ ಬಗ್ಗೆ ನಾನು ಖುಷಿಯಾಗಿದ್ದೇನೆ'' ಎಂದು ಹರಿಪ್ರಿಯಾ ಟ್ವೀಟ್ ಮಾಡಿದ್ದಾರೆ.

ಅಶೋಕ್ ತೇಜ ಈ ಚಿತ್ರವನ್ನು ಕನ್ನಡದಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಅಂದ್ಹಾಗೆ, ಈ ಸಿನಿಮಾ ತೆಲುಗಿನ 'ಎವರು' ಚಿತ್ರದ ಕನ್ನಡ ರೀಮೇಕ್ ಎಂದು ಹೇಳಲಾಗಿದೆ. ತೆಲುಗಿನಲ್ಲಿ ಅದ್ವಿ ಶೇಷ, ರೆಜಿನಾ ಹಾಗೂ ನವೀನ್ ಚಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಈ ಪಾತ್ರಗಳನ್ನು ಕನ್ನಡದಲ್ಲಿ ದಿಗಂತ್, ಹರಿಪ್ರಿಯಾ, ಪ್ರಭು ಮಂಡ್ಕರ್ ಹಾಗೂ ವಸಿಷ್ಠ ಸಿಂಹ ನಿರ್ವಹಿಸಲಿದ್ದಾರೆ.

Diganth and haripriya One Week shooting completed in Hyderabad

'ಎವರು' ಸಿನಿಮಾ ಸ್ಪಾನಿಶ್‌ನ 'ದಿ ಇನ್ವಿಸಿಬಲ್ ಗೋಸ್ಟ್' ಎಂಬ ಚಿತ್ರದ ರೀಮೇಕ್. ತೆಲುಗು ಇಂಡಸ್ಟ್ರಿಗೆ ಬೇಕಾದಂತೆ ಸ್ಕ್ರಿಪ್ಟ್ ಬದಲಾಯಿಸಿ ತೆರೆಮೇಲೆ ತಂದಿದ್ದರು. ಇದೊಂದು ಕ್ರೈಂ ಥ್ರಿಲ್ಲಿಂಗ್ ಕಥೆಯಾಗಿದ್ದು, ಅತ್ಯಾಚಾರಿಯನ್ನು ಮಹಿಳೆ ಕೊಲ್ಲುವ ಹಾಗೂ ಅದರ ತನಿಖೆಯ ಸುತ್ತ ಕಥೆ ಎಳೆಯಲಾಗಿದೆ.

ಮತ್ತೊಂದೆಡೆ ನಟ ಸತೀಶ್ ನೀನಾಸಂ ಅವರ ಜೊತೆ ಹರಿಪ್ರಿಯಾ ಪೆಟ್ರೋಮ್ಯಾಕ್ಸ್ ಚಿತ್ರೀಕರಣ ಮಾಡುತ್ತಿದ್ದಾರೆ. ದಿಗಂತ್ ಸಹ ''ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ'' ಎಂಬ ಹೊಸ ಚಿತ್ರವನ್ನು ಆರಂಭಿಸಿದ್ದಾರೆ.

Recommended Video

ಮತ್ತೆ ಬರಲಿದೆ ಧ್ರುವ ಸರ್ಜಾ, ಚಂದನ್ ಶೆಟ್ಟಿ ಕಾಂಬಿನೇಶನ್ ಹಾಡು | Chandan Shetty | Dubari | Dhruvasarja

More from Filmibeat

English summary
Kannada actor Diganth and haripriya one Week shooting completed in Hyderabad. The as-yet-untitled film is directed by Ashok Alle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X