'ಪಂಚತಂತ್ರ' ಚಿತ್ರದಲ್ಲಿ ಕಾಣಿಸಿಕೊಂಡ ದಿಗಂತ್
ನಟ ದಿಗಂತ್ ಹಾಗೂ ಯೋಗರಾಜ್ ಭಟ್ ಕಾಂಬಿನೇಶನ್ ಸಖತ್ ಹಿಟ್ ಆಗಿದೆ. ಈ ಜೋಡಿ ಜೊತೆಗೆ ಸೇರಿ ಮಾಡಿದ ಎಲ್ಲ ಸಿನಿಮಾಗಳು ಗೆದ್ದಿವೆ. ಈಗ ಭಟ್ಟರ ಹೊಸ ಸಿನಿಮಾ 'ಪಂಚತಂತ್ರ'ದಲ್ಲಿಯೂ ದಿಗಂತ್ ಕಾಣಿಸಿಕೊಂಡಿದ್ದಾರೆ.
'ಪಂಚತಂತ್ರ' ಸಿನಿಮಾ ನೋಡುಗರ ಮುಂದೆ ಸರ್ ಪ್ರೈಸ್ ಆಗಿ ದಿಗಂತ್ ಎಂಟ್ರಿ ಕೊಡುತ್ತಾರೆ. ಸಿನಿಮಾದ ಅತಿಥಿ ಪಾತ್ರದಲ್ಲಿ ಅವರ ಬಂದು ಹೋಗುತ್ತಾರೆ. ದಿಗಂತ್ ಗೆ ಇಲ್ಲಿ ಯಾವುದೇ ಡೈಲಾಗ್ ಇಲ್ಲ. ಕೆಲವೇ ಸೆಕೆಂಡ್ ಅವರು ತೆರೆ ಮೇಲೆ ಇರುತ್ತಾರೆ.
ಸಿನಿಮಾದಲ್ಲಿ ದಿಗಂತ್ ಇರುವ ವಿಷಯವನ್ನು ಚಿತ್ರತಂಡ ಬಹಿರಂಗ ಪಡಿಸಿರಲಿಲ್ಲ. ಹಾಗಾದರೆ, ದಿಗಂತ್ 'ಪಂಚತಂತ್ರ' ಸಿನಿಮಾದಲ್ಲಿ ಯಾಕೆ ಬರುತ್ತಾರೆ, ಅವರ ಪಾತ್ರ ಏನು? ಎಂಬು ಕುತೂಹಲಕ್ಕೆ ನೀವು ಸಿನಿಮಾ ನೋಡಬೇಕು.

ಅಂದಹಾಗೆ, ಯೋಗರಾಜ್ ಭಟ್ ಹಾಗೂ ದಿಗಂತ್ ಕಾಂಬಿನೇಶನ್ ಶುರು ಆಗಿದ್ದು, 'ಮುಂಗಾರು ಮಳೆ' ಸಿನಿಮಾದ ಮೂಲಕ. ಬಳಿಕ 'ಗಾಳಿಪಟ', 'ಮನಸಾರೆ' ಹಾಗೂ 'ಪಂಚರಂಗಿ' ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ಕೆಲಸ ಮಾಡಿದ್ದರು.
ಮುಂದೆ 'ಪಂಚರಂಗಿ 2' ಸಿನಿಮಾ ಬರಲಿದ್ದು, ಅಲ್ಲಿಯೂ ಈ ಜೋಡಿ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಇದೆ.


Click it and Unblock the Notifications











