ದಿಗಂತ್ ಜೀವನದಲ್ಲಿ ಮರೆಯಲಾಗದ ಕಹಿ ಘಟನೆಯದು, ಮತ್ತೆ ನೆನಪಾಯ್ತು ಆ ನೋವಿನ ಕ್ಷಣ!
ಮನಸಾರೆ, ಪಂಚರಂಗಿ, ಗಾಳಿಪಟ, ಲೈಫು ಇಷ್ಟೇನೆ ಅಂತಹ ಚಿತ್ರಗಳಲ್ಲಿ ನಟಿಸಿದ ದಿಂಗತ್ ತಮ್ಮದೇ ಟ್ರೆಂಡ್ ಹುಟ್ಟುಹಾಕಿದರು. ಅದಕ್ಕೆ ತಕ್ಕಂತೆ ಚಿತ್ರಗಳನ್ನು ಮಾಡುತ್ತಾ ಬಂದರು. ಕನ್ನಡದಲ್ಲಿ ಹೆಚ್ಚು ಬ್ಯುಸಿಯಿರುವ ಸಮಯದಲ್ಲೇ ಬಾಲಿವುಡ್‌ಗೂ ಎಂಟ್ರಿ ಕೊಟ್ಟು ಸರ್ಪ್ರೈಸ್ ನೀಡಿದರು.
ಕನ್ನಡ ನಟನೊಬ್ಬ ಬಿಟೌನ್‌ನಲ್ಲಿ ಮಿಂಚುತ್ತಿರುವುದನ್ನು ನೋಡಿದ ಸ್ಯಾಂಡಲ್‌ವುಡ್ ಮಂದಿ ಸಹ ಸಂತಸಗೊಂಡಿದ್ದರು. ಆದ್ರೆ, ದಿಗಂತ್ ಜೀವನದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಯಿತು. ಹಿಂದಿ ಸಿನಿಮಾದ ಚಿತ್ರೀಕರಣವೊಂದರಲ್ಲಿ ಕಣ್ಣಿಗೆ ಪೆಟ್ಟು ಬಿದ್ದು ತೀವ್ರವಾಗಿ ಗಾಯ ಮಾಡಿತು.
ಕಣ್ಣಿಗೆ ಬಿದ್ದ ಗಾಯ ದಿಗಂತ್ ವೃತ್ತಿ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಿತು. ಬಾಲಿವುಡ್‌ನಲ್ಲಿ ದೊಡ್ಡ ಕನಸುಗಳನ್ನು ಹೊಂದಿದ್ದ ನಟನಿಗೆ ಬಿಟೌನ್ ಬಾಗಿಲು ಮುಚ್ಚುವಂತಾಯಿತು. ದಿಗಂತ್ ಕಣ್ಣು ಕಳೆದುಕೊಂಡು ಬಿಟ್ಟರು, ಅವರ ಬಲಗಣ್ಣು ಕಾಣುವುದಿಲ್ಲ ಎನ್ನುವ ಮಟ್ಟಿಗೆ ಆತಂಕ ಸೃಷ್ಟಿಯಾಯಿತು. ಮುಂದೆ ಓದಿ...

ಅದು 'ಟಿಕೆಟ್ ಟು ಬಾಲಿವುಡ್' ಶೂಟಿಂಗ್
'ವೆಡ್ಡಿಂಗ್ ಪುಲಾವ್' ಎಂಬ ಹಿಂದಿ ಚಿತ್ರದ ಬಳಿಕ ದಿಗಂತ್ ಕೈಗೆತ್ತಿಕೊಂಡು ಇನ್ನೊಂದು ಸಿನಿಮಾ 'ಟಿಕೆಟ್ ಟು ಬಾಲಿವುಡ್'. ಈ ಚಿತ್ರದ ಶೂಟಿಂಗ್ ವೇಳೆ ನಾಯಕಿ ಎಸೆದ ಚೂರಿ ದಿಗಂತ್ ಕಣ್ಣಿಗೆ ಬಿದ್ದ ಪರಿಣಾಮ ದೃಷ್ಟಿ ಕಳೆದುಕೊಂಡರು ಎಂಬ ಸುದ್ದಿ ಹೊರಬಿದ್ದಿತ್ತು. ಮೂರ್ನಾಲ್ಕು ಬಾರಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಪಟ್ಟರೂ, ಕಣ್ಣು ಮೊದಲಿನಿಂತೆ ಸ್ಪಷ್ಟವಾಗಿ ಕಾಣಿಸಲ್ಲ ಎಂದು ಸುದ್ದಿಗಳು ವರದಿಯಾದವು. ಆದ್ರೆ, ಇದು ಸತ್ಯವಾಗಿರಲಿಲ್ಲ.

ಎಸೆದಿದ್ದು ಚೂರಿ ಅಲ್ಲ, ಚಪ್ಪಲಿ
ದೃಷ್ಟಿ ಕಳೆದುಕೊಂಡರು ಎಂಬ ವದಂತಿಗಳ ಕುರಿತು ಸ್ಪಷ್ಟನೆ ನೀಡಿದ್ದ ದಿಗಂತ್ ''ಚಿತ್ರೀಕರಣ ವೇಳೆ ಕಣ್ಣಿಗೆ ಪೆಟ್ಟು ಬಿದ್ದಿದ್ದು ನಿಜ, ಆದ್ರೆ ನಾಯಕಿ ಎಸೆದಿದ್ದು ಚೂರಿ ಅಲ್ಲ, ಹೈ ಹೀಲ್ಡ್ ಚಪ್ಪಲಿ. ಅದು ಅಕಸ್ಮಾತ್ ಆಗಿ ಎಸೆದಿದ್ದು. ಕಣ್ಣು ಗುಡ್ಡೆಗೆ ಗಾಯವಾಗಿದೆ, ದೃಷ್ಟಿ ಕಳೆದುಕೊಂಡಿಲ್ಲ, ಚಿಕಿತ್ಸೆ ಪಡೆಯುತ್ತಿದ್ದೇನೆ. ಸ್ವಲ್ಪ ದಿನ ವಿಶ್ರಾಂತಿ ಬೇಕು. ಪೂರ್ಣವಾಗಿ ದೃಷ್ಟಿ ಕಾಣಿಸುತ್ತೆ. ಭವಿಷ್ಯದಲ್ಲಿ ಏನೂ ತೊಂದರೆ ಇರುವುದಿಲ್ಲ'' ಎಂದು ದಿಗಂತ್ ಹೇಳಿದ್ದರು.

ಬಾಲಿವುಡ್ ಅವಕಾಶ ಕಳೆದುಕೊಂಡರು!
ಬಾಲಿವುಡ್‌ನಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡುವ ಕನಸು ಹೊಂದಿದ್ದ ದಿಗಂತ್‌ಗೆ ಈ ಘಟನೆ ಅಡ್ಡಗಾಲು ಹಾಕಿತು. ತಿಂಗಳುಗಳ ಕಾಲ ಚಿಕಿತ್ಸೆಗೆ ಒಳಪಟ್ಟರು. ಈ ನಡುವೆ ಕೈಯಲ್ಲಿದ್ದ ಕೆಲವು ಚಿತ್ರಗಳು ಮಿಸ್ ಆಯ್ತು. ಈ ಘಟನೆ ಆದ ಬಳಿಕ ಹಿಂದಿಯ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಆದ್ರೆ, ಕನ್ನಡದಲ್ಲಿ ದಿಗಂತ್ ಮತ್ತೆ ಬ್ಯುಸಿ ಆದರು.

ಡ್ರಗ್ಸ್ ಪ್ರಕರಣದಲ್ಲಿ ದಿಗಂತ್ ಹೆಸರು!
ಈ ಘಟನೆ ದಿಂಗತ್ ಜೀವನದಲ್ಲಿ ಹೆಚ್ಚು ನೋವು ತಂದಿತ್ತು ಹಾಗೂ ಆತಂಕ ಸೃಷ್ಟಿಸಿತ್ತು. ನಿಧಾನವಾಗಿ ಇದರಿಂದ ಚೇತರಿಸಿಕೊಂಡ ದಿಗ್ಗಿ ಮತ್ತೆ ತೆರೆಮೇಲೆ ಮಿಂಚಲು ಶುರು ಮಾಡಿದರು. 2018ರಲ್ಲಿ ನಟಿ ಐಂದ್ರಿತಾ ರೇ ಜೊತೆ ವಿವಾಹ ಸಹ ಆದರು. ಎಲ್ಲವೂ ಕೂಲ್ ಆಗಿ ಸಾಗುತ್ತಿದ್ದ ಸಮಯದಲ್ಲಿ ಈಗ ಡ್ರಗ್ಸ್ ಪ್ರಕರಣ ದಿಗಂತ್‌ಗೆ ಮತ್ತೆ ಸಂಕಷ್ಟ ತಂದೊಡ್ಡಿದೆ.
Recommended Video

ಭೀತಿಯೂ ಕಾಡುತ್ತಿದೆ
ಡ್ರಗ್ಸ್ ಪ್ರಕರಣದಲ್ಲಿ ದಿಗಂತ್ ಮತ್ತು ಐಂದ್ರಿತಾ ರೇ ವಿಚಾರಣೆಗೆ ಒಳಪಟ್ಟಿದ್ದರು. ಈಗ ಎರಡನೇ ಸಲ ದಿಗಂತ್ ವಿಚಾರಣೆಗೆ ಹಾಜರಾಗಿದ್ದಾರೆ. ಪದೇ ಪದೇ ದಿಗಂತ್ ವಿಚಾರಣೆ ನಡೆಸುತ್ತಿರುವುದನ್ನು ಗಮನಿಸಿದರೆ ಬಂಧನದ ಭೀತಿಯೂ ಕಾಡುತ್ತಿದೆ. ಸಂಜನಾ, ರಾಗಿಣಿ ವಿಚಾರದಲ್ಲೂ ಇದೇ ಆಗಿತ್ತು. ಇನ್ನು ಸಿಸಿಬಿ ಪೊಲೀಸರ ಮುಂದೆ ದಿಗಂತ್ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


Click it and Unblock the Notifications











