For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ ಎವರು ರೀಮೇಕ್: ದಿಗಂತ್ ಜೊತೆ ಮತ್ತಿಬ್ಬರು ಸ್ಟಾರ್ಸ್ ನಟನೆ

  |

  ಕಳೆದ ವರ್ಷ ತೆಲುಗಿನಲ್ಲಿ ಬಿಡುಗಡೆಯಾಗಿ ಹಿಟ್ ಆಗಿದ್ದ 'ಎವರು' ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡಲು ಮುಂದಾಗಿದೆ ಸ್ಯಾಂಡಲ್ ವುಡ್ ನಿರ್ಮಾಪಕರು. ಈ ಚಿತ್ರದಲ್ಲಿ ದಿಗಂತ್ ನಾಯಕರಾಗಿ ನಟಿಸುತ್ತಿದ್ದಾರೆ.

  ತೆಲುಗಿನಲ್ಲಿ ಅದ್ವಿ ಶೇಷ, ರೆಜಿನಾ ಹಾಗೂ ನವೀನ್ ಚಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಈ ಪಾತ್ರಗಳನ್ನು ಕನ್ನಡದಲ್ಲಿ ದಿಗಂತ್, ಹರಿಪ್ರಿಯಾ ಹಾಗೂ ಪ್ರಭು ಮಂಡ್ಕರ್ ನಿರ್ವಹಿಸಲಿದ್ದಾರೆ.

  'ಅಂಧಾದುನ್' ತಮಿಳು ರೀಮೇಕ್‌ನಲ್ಲಿ ಐಶ್ವರ್ಯ ರೈ ನಟನೆ!'ಅಂಧಾದುನ್' ತಮಿಳು ರೀಮೇಕ್‌ನಲ್ಲಿ ಐಶ್ವರ್ಯ ರೈ ನಟನೆ!

  ಅಂದ್ಹಾಗೆ, 'ಎವರು' ಸಿನಿಮಾ ಸ್ಪಾನಿಶ್‌ನ 'ದಿ ಇನ್ವಿಸಿಬಲ್ ಗೋಸ್ಟ್' ಎಂಬ ಚಿತ್ರದ ರೀಮೇಕ್. ತೆಲುಗು ಇಂಡಸ್ಟ್ರಿಗೆ ಬೇಕಾದಂತೆ ಸ್ಕ್ರಿಪ್ಟ್ ಬದಲಾಯಿಸಿ ತೆರೆಮೇಲೆ ತಂದಿದ್ದರು. ಇದೊಂದು ಕ್ರೈಂ ಥ್ರಿಲ್ಲಿಂಗ್ ಕಥೆಯಾಗಿದ್ದು, ಅತ್ಯಾಚಾರಿಯನ್ನು ಮಹಿಳೆ ಕೊಲ್ಲುವ ಹಾಗೂ ಅದರ ತನಿಖೆಯ ಸುತ್ತ ಕಥೆ ಎಳೆಯಲಾಗಿದೆ.

  ಇನ್ನು ಅಶೋಕ್ ತೇಜ ಈ ಚಿತ್ರವನ್ನು ಕನ್ನಡದಲ್ಲಿ ನಿರ್ದೇಶನ ಮಾಡಲಿದ್ದಾರೆ. ಆದ್ರೆ, ಇದುವರೆಗೂ ಚಿತ್ರದ ಹೆಸರು ಅಂತಿಮಗೊಳಿಸಿಲ್ಲ.

  ಸೀತಾ ವಲ್ಲಭ ಧಾರಾವಾಹಿ ಸುಪ್ರಿತಾಗೆ ಒಲಿದು ಬಂದ ಅದೃಷ್ಟ | Filmibeat Kannada

  ಆಗಸ್ಟ್ 9, 2019 ರಂದು ತೆಲುಗಿನಲ್ಲಿ ಎವರು ಸಿನಿಮಾ ಬಿಡುಗಡೆಯಾಗಿತ್ತು. ಸುಮಾರು 8 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಈ ಸಿನಿಮಾ 15 ಕೋಟಿಗೇ ಹೆಚ್ಚು ಹಣ ಗಳಿಸಿತ್ತು ಎನ್ನಲಾಗಿದೆ.

  English summary
  Diganth, Haripriya and Prabhu Mundkur in the Kannada remake of Evaru. Ashok Alle is director of the as-yet-untitled project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X