ಅಭಿಮಾನಿಗಳಿಗಾಗಿ ಹೊಸ ಪ್ರಯೋಗ ಮಾಡಿದ ದಿಗಂತ್
ಸಿನಿಮಾರಂಗ ಅಂದಮೇಲೆ ಹೊಸ ಪ್ರಯೋಗಗಳು ಆಗುತ್ತಲೇ ಇರಬೇಕು. ಆಗ ಮಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ಜಾಗ ಗಿಟ್ಟಿಸಿಕೊಳ್ಳಲು ಸಾಧ್ಯವಾಗುವುದು. ಅಂತದ್ದೆ ವಿಭಿನ್ನ ಪ್ರಯೋಗಕ್ಕೆ ಮುಂದಾಗಿರುವವರು ನಟ ದಿಗಂತ್.
ದೂದ್ ಪೇಡ ದಿಗಂತ್ ಅಭಿನಯದ 'ಕಥೆಯೊಂದು ಶುರುವಾಗಿದೆ' ಸಿನಿಮಾದ ಪ್ರಿಮಿಯರ್ ಶೋವನ್ನು ಆಯೋಜನೆ ಮಾಡಲಾಗಿದೆ. ಆಗಸ್ಟ್ 2 ರಂದು ಪ್ರಿಮಿಯರ್ ಶೋ ನಡೆಯುತ್ತಿದ್ದು ಇದರಲ್ಲಿ ಚಿತ್ರತಂಡದ ಜೊತೆ ಕೂತು ನೀವು(ಪ್ರೇಕ್ಷಕರು) ಕೂಡ ಸಿನಿಮಾ ಬಿಡುಗಡೆ ಮುನ್ನವೇ ನೋಡಬಹುದಾಗಿದೆ.

ಹೌದು ಎಲ್ಲರ ಜೀವನದಲ್ಲಿಯೂ ಒಂದೊಂದು ಕಥೆ ಇದ್ದೇ ಇರುತ್ತೆ. ಆ ಕಥೆಯನ್ನು ಸಣ್ಣ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಹ್ಯಾಷ್ ಟ್ಯಾಗ್ ಬಳಸಿ ಕಥೆಯೊಂದು ಶುರುವಾಗಿದೆ ಅಂತ ಹಾಕಬೇಕು. ವಿಡಿಯೋ ಅಪ್ಲೋಡ್ ಮಾಡಿದವರನ್ನು ಪ್ರಿಮಿಯರ್ ಶೋ ಗೆ ಆಹ್ವಾನ ಮಾಡಲಾಗುತ್ತಂತೆ.

ಸಿನಿಮಾ ಪ್ರೇಮಿಗಳಿಗಾಗಿ ನಾಲ್ಕು ಸ್ಕ್ರೀನ್ ನಲ್ಲಿ 'ಕಥೆಯೊಂದು ಶುರುವಾಗಿದೆ' ಚಿತ್ರವನ್ನು ಪ್ರದರ್ಶನ ಮಾಡಲು ಚಿತ್ರತಂಡ ನಿರ್ಧಾರ ಮಾಡಿದ್ದು ಒಂದು ಸ್ಕ್ರೀನ್ ನಲ್ಲಿ ಲವ್ ಮಾಡಿರೋರು, ಲವ್ ಮಾಡಿ ಮದ್ವೆ ಆಗಿರೋರು. ಎರಡನೇ ಸ್ಕ್ರೀನ್ ನಲ್ಲಿ ಮದ್ವೆ ಆದ ನಂತರ ಲವ್ ಮಾಡಿರೋದು, ಮೂರನೇ ಸ್ಕ್ರೀನ್ ನಲ್ಲಿ ಸಿಂಗಲ್ ಆಗಿರೋದು, ಲವ್ ಬ್ರೇಕ್ ಅಪ್ ಆಗಿರೋರು. ನಂತರ ಮತ್ತೊಂದು ಕಡೆ ಮದ್ವೆ ಆಗಿ ಸುಖ ಸಂಸಾರ ಮಾಡುತ್ತಿರುವವರು. ಎಲ್ಲರೂ ಒಟ್ಟಿಗೆ ಕೂತು ಚಿತ್ರ ನೋಡುವ ಅವಕಾಶವನ್ನು ಚಿತ್ರತಂಡ ಕೊಡುತ್ತಿದೆ.


Click it and Unblock the Notifications











