'ಎಡಗೈ ಅಪಘಾತಕ್ಕೆ ಕಾರಣ' ಸಿನಿಮಾ ಡಬ್ಬಿಂಗ್ ಶುರು.. ಆದರೆ ಹೀರೊ ದಿಗಂತ್ ಮಿಸ್ಸಿಂಗ್
ದೂದ್ ಪೇಡಾ ದಿಗಂತ್ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ದಾಟಿಯನ್ನೇ ಬದಲಿಸಿದ್ದಾರೆ. ಇತ್ತೀಚೆಗೆ ಯಾಕೋ ಕಂಟೆಂಟ್ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ಬೆನ್ನಲ್ಲೇ ಕೆಲವು ತಿಂಗಳ ಹಿಂದಷ್ಟೇ ಹೊಸ ಸಿನಿಮಾ ಸೆಟ್ಟೇರಿತ್ತು. ಅದುವೇ 'ಎಡಗೈ ಅಪಘಾತಕ್ಕೆ ಕಾರಣ'.
ಬಹಳ ದಿನಗಳ ಬಳಿಕ ಸಕ್ಸಸ್ ಸಿಕ್ಕಿದೆ. ಯೋಗರಾಜ್ ಭಟ್ ಅಭಿನಯದ 'ಗಾಳಿಪಟ 2' ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಆಫರ್‌ಗಳು ಹೆಚ್ಚಾಗಿವೆ. ಬಹಳ ದಿನಗಳ ಬಳಿಕ ದಿಗಂತ್ ವಿಭಿನ್ನ ಸಿನಿಮಾವೊಂದಕ್ಕೆ ಕೈ ಹಾಕಿದ್ದಾರೆ.
ದೂದ್ ಪೇಡ್ ದಿಗಂತ್ ಅಭಿನಯದ 'ಗಾಳಿಪಟ-2' ಸಿನಿಮಾ ಭರ್ಜರಿ ಯಶಸ್ಸಿನ ಬಳಿಕ 'ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ' ಆರಂಭ ಆಗಿತ್ತು. ಆ ಸಿನಿಮಾದ ಶೂಟಿಂಗ್ ಮುಗಿದಿದ್ದು, ಈಗ ಡಬ್ಬಿಂಗ್ ಹಂತಕ್ಕೆ ಬಂದು ನಿಂತಿದೆ. ಅಂದ್ಹಾಗೆ, ಈ ಸಿನಿಮಾ ವಿಶ್ವ ಎಡಚರರ ದಿನದಂದೇ ಅನೌನ್ಸ್ ಆಗಿತ್ತು.

ಅಂದ್ಹಾಗೆ 'ಎಡಗೈ ಅಪಘಾತಕ್ಕೆ ಕಾರಣ' ಇದೊಂದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಜೊತೆಗೆ ಡ್ರಾರ್ಕ್ ಕಾಮಿಡಿ ಕೂಡ ಇರುತ್ತೆ. ಟೈಟಲ್ ವಿಭಿನ್ನವಾಗಿರುವಂತೆ ಕಥೆ ಕೂಡ ಸ್ಯಾಂಡಲ್‌ವುಡ್‌ಗೆ ಹೊಸದು. ಸದ್ಯ ಡಬ್ಬಿಂಗ್ ಹಂತದಲ್ಲಿದ್ದು, ಹೀರೊ ದಿಗಂತ್ ಮಿಸ್ಸಿಂಗ್ ಅಂತ ಸುದ್ದಿಯಾಗಿದೆ. ಅಷ್ಟಕ್ಕೂ ದಿಗಂತ್ ಎಲ್ಲಿ ಹೋದ್ರು? ಏನ್ ಕಥೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಎಡಗೈ ಅಪಘಾತಕ್ಕೆ ಕಾರಣ' ಸಿನಿಮಾದ ಡಬ್ಬಿಂಗ್‌ನಲ್ಲಿ ಇಡೀ ಚಿತ್ರತಂಡ ಭಾಗಿಯಾಗಿದೆ. ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ, ಕೃಷ್ಣ ಹೆಬ್ಬಾಳೆ, ಧನು ಹರ್ಷ ತಮ್ಮ ಪಾತ್ರಗಳಿಗೆ ಈಗಾಗಲೇ ಡಬ್ಬಿಂಗ್ ಮಾಡಿದ್ದಾರೆ. ಆದರೆ, ನಾಯಕ ದಿಗಂತ್ ಫೈಲ್ ಮಿಸ್ ಆಗಿದೆಯಂತೆ.
ಹೀಗಾಗಿ ಚಿತ್ರತಂಡವೇ ಒಂದು ವಿಡಿಯೋ ರಿಲೀಸ್ ಮಾಡಿ ದೂದ್ ಪೇಡ ಎಲ್ಲಿ? ಎಂದು ಕೇಳುತ್ತಿದೆ. ಸ್ಪೆನ್ಸ್ ಥ್ರಿಲ್ಲರ್ ಡ್ರಾರ್ಕ್ ಕಾಮಿಡಿ ಜಾನರ್‌ನ ಈ ಸಿನಿಮಾ ಸಮರ್ಥ್ ಬಿ ಕಡ್ಕೋಲ್ ಆಕ್ಷನ್ ಕಟ್ ಹೇಳಿದ್ದಾರೆ. ಗುರುದತ್ತ ಗಾಣಿಗ ಮತ್ತು ಸಮರ್ಥ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ದಿಗಂತ್‌ಗೆ ಜೋಡಿಯಾಗಿ ಈ ಸಿನಿಮಾದಲ್ಲಿ ಯುವನಟಿ ಧನು ಹರ್ಷ ನಟಿಸಿದ್ದಾರೆ. ಅಭಿಮನ್ಯು ಸದಾನಂದ್ ಕ್ಯಾಮರಾ, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಬರೆದಿದ್ದಾರೆ. ಈ ಸಿನಿಮಾದಲ್ಲಿ ಪ್ರತಿ ಕೆಲಸಕ್ಕೂ ಎಡಗೈ ಬಳಸುವವರ ಸಮಸ್ಯೆಗಳ ಬಗ್ಗೆಯೇ ಬಿಂಬಿಸಲಾಗಿದೆ. ಅವರು ದಿನನಿತ್ಯದ ಜೀವನದಲ್ಲಿ ಎದುರಿಸುವ ಸವಾಲುಗಳ ಕುರಿತಾಗಿಯೇ ಫೋಕಸ್ ಮಾಡಲಾಗಿದೆ. ಮೇಲ್ನೋಟಕ್ಕೆ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡ್ ಹುಟ್ಟಾಕುವ ಸಾಧ್ಯತೆಯಿದೆ.


Click it and Unblock the Notifications











