ನಟ ದಿಗಂತ್ ಪಾಲಾದ ಗೋಲ್ಡನ್ ಸ್ಟಾರ್ ಗಣೇಶ್ 'ಕನ್ನಡಕ'
ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ 'ಗಿಮಿಕ್' ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇದರ ಜೊತೆಗೆ ಗೀತಾ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಗ್ಯಾಪಲ್ಲಿ ಗಣಿ ಕನ್ನಡ ಹುಡುವ ಸಾಹಸ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಕನ್ನಡ ಹುಡುಕುವುದನ್ನು ಪೋಸ್ಟ್ ಪೋನ್ ಮಾಡಿಕೊಂಡಿದ್ದ ಗಣೇಶ್ ಕಡೆಯಿಂದ ಈಗ ಅಚ್ಚರಿಕರ ಸುದ್ದಿ ಹೊರಬಿದ್ದಿದೆ.
ಹೌದು, ಗಣೇಶ್ ಕನ್ನಡಕ ಈಗ ದಿಗಂತ್ ಪಾಲಾಗಿದೆಯಂತೆ. ಏನಿದು ಕನ್ನಡಕದ ಕತೆ ಅಂದುಕೊಳ್ಳುತ್ತಿದ್ದೀರಾ. ಗಣೇಶ್ 'ವೇರ್ ಈಸ್ ಮೈ ಕನ್ನಡಕ' ಎನ್ನುವ ಸಿನಿಮಾದಲ್ಲಿ ಅಭಿನಯಿಸಬೇಕಿತ್ತು. ಅನೇಕ ದಿನಗಳ ಹಿಂದೆಯೆ 'ವೇರ್ ಈಸ್ ಮೈ ಕನ್ನಡಕ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು.
ಆದ್ರೀಗ ಚಿತ್ರದಲ್ಲಿ ದೊಡ್ಡ ಬದಲಾವಣೆಯಗಿದೆ. ಗಣೇಶ್ ಜಾಗಕ್ಕೆ ದಿಗಂತ್ ಬಂದಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ದಿಗಂತ್ ಮತ್ತು ಗಣೇಶ್ ಇಬ್ಬರು ಗಾಳಿಪಟ ಹಾರಿಸಲು ಸಜ್ಜಾಗಿದ್ರು. ಈಗ ನೋಡಿದ್ರೆ ಗಣೇಶ್ ಕನ್ನಡಕವನ್ನು ದಿಗಂತ್ ಧರಿಸಿದ್ದಾರೆ.

ಗಣೇಶ್ ಪಾತ್ರದಲ್ಲಿ ದಿಗಂತ್
'ವೇರ್ ಈಸ್ ಮೈ ಕನ್ನಡಕ' ವಿಭಿನ್ನ ಟೈಟಲ್ ಮೂಲಕವೆ ಕುತೂಹಲ ಮೂಡಿಸಿರುವ ಈ ಸಿನಿಮಾದಲ್ಲಿ ಗಣೇಶ್ ನಾಯಕನಾಗಿ ಅಭಿನಯಿಸಬೇಕಿತ್ತು. ಎಲ್ಲವು ಅಂದುಕೊಂಡತೆ ಆಗಿದ್ದರೆ ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದ್ರೀಗ ದಿಢೀರನೆ ನಾಯಕ ಬದಲಾಗಿದ್ದಾರೆ. ಗಣೇಶ್ ಅಭಿನಯಿಸ ಬೇಕಿದ್ದ ಪಾತ್ರದಲ್ಲಿ ದಿಗಂತ್ ಕಾಣಿಸಿಕೊಳ್ಳುತ್ತಿದ್ದಾರೆ.

ದಿಗಂತ್ ಹೆಸರು ಸೂಚಿಸಿದ ಗಣಿ
ದಿಗಂತ್ ಮತ್ತು ಗಣೇಶ್ ಇಬ್ಬರು ಮುಂಗಾರು ಮಳೆ ಸಿನಿಮಾ ಸಮಯದಿಂದನು ಸ್ನೇಹಿತರು. ಗಣೇಶ್ ಅಭಿನಯಿಸಬೇಕಿದ್ದ 'ವೇರ್ ಈಸ್ ಮೈ ಕನ್ನಡಕ' ಚಿತ್ರದಿಂದ ಹೊರಬಂದ ಗಣೇಶ್, ಚಿತ್ರತಂಡಕ್ಕೆ ದಿಗಂತ್ ಹೆಸರನ್ನು ಸೂಚಿಸಿದ್ದಾರಂತೆ. ಈ ಕಥೆಗೆ ದಿಗಂತ್ ಪಕ್ಕಾ ಸೂಟ್ ಆಗ್ತಾರೆ ಎನ್ನುವ ಕಾರಣಕ್ಕೆ ಗಣೇಶ್ ಅವರು ದಿಗಂತ್ ಹೆಸರನ್ನು ಹೇಳಿದ್ದಾರೆ. ಸದ್ಯ ಈ ಜೋಡಿ ಗಾಳಿಪಟ-2 ಚಿತ್ರದಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಕಥೆ ಬದಲಾವಣೆ ಮಾಡಲಾಗಿದೆ
ಕಳೆದ ಕೆಲವು ದಿನಗಳ ಹಿಂದೆಯಷ್ಟೆ ವೇರ್ ಈಸ್ ಮೈ ಕನ್ನಡಕ ಚಿತ್ರದ ಕತೆಯನ್ನು ಪುನಃ ಬರೆಯಲಾಗುತ್ತಿದೆ ಹಾಗಾಗಿ ಚಿತ್ರ ಕೊಂಚ ತಡವಾಗುತ್ತಿದೆ ಎಂದು ಹೇಳಲಾಗಿತ್ತು. ಆದ್ರೀಗ ಚಿತ್ರದ ನಾಯಕನೆ ಬದಲಾಗಿದ್ದಾರೆ. ಅಂದ್ಹಾಗೆ ಚಿತ್ರಕ್ಕೆ ರಾಜ್ ಮತ್ತು ದಾಮಿಸಿ ಇಬ್ಬರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲ ಬಾರಿಗೆ ಚಿತ್ರ ನಿರ್ದೇಶನ ಮಾಡುತ್ತಿರುವುದರಿಂದ ಚಿತ್ರದ ಬಗ್ಗೆ ತುಂಬಾ ಕಾಳಜಿ ವಹಿಸಿ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಬಾಲಿವುಡ್ ನಟರು
ವೇರ್ ಈಸ್ ಮೈ ಕನ್ನಡಕ ಚಿತ್ರದಲ್ಲಿ ಇಬ್ಬರು ಬಾಲಿವುಡ್ ಸ್ಟಾರ್ ಕೂಡ ಅಭಿನಯಿಸಲಿದ್ದಾರಂತೆ. ಅರ್ಬಾಜ್ ಖಾನ್ ಮತ್ತು ಪತ್ರಲೇಖಾ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲ ಮೊದಲ ಬಾರಿಗೆ ಅರ್ಬಾಜ್ ಮತ್ತು ಪತ್ರಲೇಖಾ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕಾಗಿ ಪತ್ರಲೇಖಾ ಈಗಾಗಲೆ ಕನ್ನಡ ಕಲಿಯುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿತ್ತು.


Click it and Unblock the Notifications











