For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರು to ಹಾಸನ: 192 ಕಿ.ಮೀ ಸೈಕಲ್ ತುಳಿದ ದಿಗಂತ್!

  |

  ಫಿಟ್‌ನೆಸ್‌ ಫ್ರೀಕ್ ನಟರು ಸಾಕಷ್ಟಿದ್ದಾರೆ ಸ್ಯಾಂಡಲ್‌ವುಡ್‌ನಲ್ಲಿ ಅದರಲ್ಲಿ ದಿಗಂತ್ ಸಹ ಒಬ್ಬರು. ಜಿಮ್‌ಗೆ ಹೋಗಿ ಬೆವರಿಳುವುದಕ್ಕಿಂತಲೂ ಹೊರಾಂಗಣ ವ್ಯಾಯಾಮಕ್ಕೆ ಹೆಚ್ಚು ಒತ್ತು ನೀಡುತ್ತಾರೆ ದಿಗಂತ್.

  ನಿನ್ನೆಯಷ್ಟೆ ನಟ ದಿಗಂತ್ ಹೊಸ ಸಾಹಸವೊಂದನ್ನು ಮಾಡಿದ್ದಾರೆ. ಬರೋಬ್ಬರಿ 192 ಕಿ.ಮೀ ದೂರ ಸೈಕಲ್ ತುಳಿದಿದ್ದಾರೆ. ಬೆಂಗಳೂರಿನಿಂದ ಹಾಸನಕ್ಕೆ ಸೈಕಲ್ ಹೊಡೆದಿದ್ದಾರೆ ದಿಗಂತ್. ಕಾರಿನಲ್ಲಿ ಹೋದರೆ 3:30 ಗಂಟೆ ಸಮಯ ಹಿಡಿಯುವ ಹಾದಿಯನ್ನು ಸೈಕಲ್‌ನಲ್ಲಿ 8 ಗಂಟೆ 23 ನಿಮಿಷಕ್ಕೆ ಮುಗಿಸಿದ್ದಾರೆ ದಿಗಂತ್.

  ಸಾಹಸ ಕ್ರೀಡೆಗಳ ಹವ್ಯಾಸ ಬೆಳೆಸಿಕೊಂಡಿರುವ ದಿಗಂತ್, ಆಗಾಗ್ಗೆ ಸೈಕಲ್ ಸವಾರಿ ಹೋಗುತ್ತಿರುತ್ತಾರೆ. ಜೊತೆಗೆ ಕೆಲ ಗೆಳೆಯರು ಹಾಗೂ ಪತ್ನಿ ಐಂದ್ರಿತಾ ರೇ ಅನ್ನೂ ಸಹ ಕರೆದೊಯ್ಯುತ್ತಾರೆ.

  ತಮ್ಮ ಬೆಂಗಳೂರು-ಹಾಸನ ಸೈಕಲ್ ಸವಾರಿಯ ಬಗ್ಗೆ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿರುವ ದಿಗಂತ್, 'ಬಹಳ ಅದ್ಭುತವಾದ ರೈಡ್ ಇದಾಗಿತ್ತು, ಈ ರೈಡ್, ಸಾಧನೆಯಲ್ಲ ಬದಲಿಗೆ ನನ್ನ ಸಹಿಷ್ಣುತೆಯ ಪರೀಕ್ಷೆ' ಎಂದು ಬರೆದುಕೊಂಡಿದ್ದಾರೆ.

  ಕೆಲವು ದಿನಗಳ ಹಿಂದಷ್ಟೆ ಪತ್ನಿಯೊಂದಿಗೆ ಸೇರಿ ಮುಲ್ಕಿಯಲ್ಲಿ ಸರ್ಫಿಂಗ್ ಮಾಡಿದ್ದರು, ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದಕ್ಕೂ ಮುನ್ನಾ, ಸೇತುವೆಯೊಂದರ ಮೇಲಿಂದ ನೀರಿಗೆ ಹಿಮ್ಮುಖವಾಗಿ ಪಲ್ಟಿ ಹೊಡೆದಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು ದಿಗಂತ್.

  ನಟ ಪುನೀತ್ ರಾಜ್‌ಕುಮಾರ್ ಸಹ ಗೆಳೆಯರೊಂದಿಗೆ ಸೈಕಲ್ ರೈಡ್‌ಗೆ ಹೋಗುತ್ತಿರುತ್ತಾರೆ. ಮಜಾ ಟಾಕೀಸ್‌ಗೆ ಬಂದಾಗ ಈ ಬಗ್ಗೆ ಮಾತನಾಡಿದ್ದ ಪುನೀತ್ ರಾಜ್‌ಕುಮಾರ್, 'ನನಗೆ ಸೈಕಲ್ ರೈಡ್‌ಗೆ ಹೋಗುವುದರಲ್ಲಿ ದಿಗಂತ್‌ ಸ್ಪೂರ್ತಿ, ನಾವೆಲ್ಲಾ ನಗರದಲ್ಲಿ ಸೈಕಲ್ ಹೊಡೆದರೆ, ಆತ ಬೆಂಗಳೂರಿನಿಂದ ಮೈಸೂರಿಗೆ ಸೈಕಲ್ ನಲ್ಲಿ ಬಂದುಬಿಡುತ್ತಾರೆ' ಎಂದಿದ್ದರು.

  English summary
  Actor Diganth went to Bengaluru to Hassan in his cycle. He completes 192 km ride in just 8:30 hours.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X