For Quick Alerts
  ALLOW NOTIFICATIONS  
  For Daily Alerts

  ಮೂವರು ಸಂಸಾರಸ್ಥರ 'ಬ್ಯಾಚುಲರ್ ಪಾರ್ಟಿ'ಗೆ ರಕ್ಷಿತ್ ಶೆಟ್ಟಿನೇ ಸ್ಪಾನ್ಸರ್!

  |

  ಸ್ಯಾಂಡಲ್‌ವುಡ್‌ನಲ್ಲಿ ಸಾಮಾನ್ಯವಾಗಿ ಹೀರೊಗಳು ನಟಿಸುತ್ತಿದ್ದರೆ, ಅದರೆಡೆಗೆ ಹೆಚ್ಚು ಗಮನ ಹರಿಸುತ್ತಾರೆ. ನಿರ್ಮಾಣ, ನಿರ್ದೇಶನ ಮಾಡೋಕೆ ಹೋಗುವುದಿಲ್ಲ. ಆದರೆ, ರಕ್ಷಿತ್ ಶೆಟ್ಟಿ ಇವೆಲ್ಲದಕ್ಕಿಂತ ಕೊಂಚ ವಿಭಿನ್ನ. ನಟನೆ ಜೊತೆ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ.

  ರಕ್ಷಿತ್ ಶೆಟ್ಟಿ ಕೈ ತುಂಬಾ ಸಿನಿಮಾಗಳಿವೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ. ಈ ಮಧ್ಯೆನೇ ಬ್ಯಾಕ್ ಟು ಬ್ಯಾಕ್ ಸಿನಿಮಾವನ್ನು ನಿರ್ಮಾಣ ಮಾಡುತ್ತಲೇ ಇದ್ದಾರೆ. ರಕ್ಷಿತ್ ನಿರ್ಮಾಣ ಸಂಸ್ಥೆ ಪರಂವಃ ಸ್ಟುಡಿಯೋಸ್ ಸದ್ಯ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ.

  ಪ್ರಡ್ಯೂಸರ್ ಆಗಿ ರಕ್ಷಿತ್ ಫುಲ್ ಫುಲ್ ಬ್ಯುಸಿ

  '777 ಚಾರ್ಲಿ' ವರ್ಲ್ಡ್ ವೈಡ್ ಸದ್ದು ಮಾಡಿದ ಮೇಲೆ ರಕ್ಷಿತ್ ಶೆಟ್ಟಿಯ ಪರಂವ: ಸ್ಟುಡಿಯೋ ಮತ್ತಷ್ಟು ಆಕ್ಟಿವ್ ಆಗಿದೆ. ಒಂದರ ಬಳಿಕ ಮತ್ತೊಂದು ಸಿನಿಮಾವನ್ನು ನಿರ್ಮಾಣ ಮಾಡುತ್ತಲೇ ಇದೆ. ಕೆಲವು ದಿನಗಳ ಹಿಂದಷ್ಟೇ 'ಇಬ್ಬನಿ ತಬ್ಬಿದ ಇಳೆಯಲಿ' ಅನ್ನೋ ಟೈಟಲ್ ಅನ್ನು ಅನೌನ್ಸ್ ಮಾಡಿದ್ದರು. ಈಗ ಮತ್ತೊಂದು ಸಿನಿಮಾ ಇವರದ್ದೇ ಬ್ಯಾನರ್‌ನಲ್ಲಿ ಸೆಟ್ಟೇರಿದೆ.

  ರಕ್ಷಿತ್ ಶೆಟ್ಟಿಗೆ '777 ಚಾರ್ಲಿ' ಹೀರೊ ಆಗಿ ಹೆಸರು ತಂದುಕೊಟ್ಟ ಸಿನಿಮಾ. ಹಾಗೇ ನಿರ್ಮಾಪಕರಾಗಿಯೂ ಹಣ ತಂದು ಕೊಟ್ಟ ಸಿನಿಮಾ. ಥಿಯೇಟ್ರಿಕಲ್, ಸ್ಯಾಟಲೈಟ್, ಓಟಿಟಿ ಅಂತ ಸಿನಿಮಾ ದೊಡ್ಡ ಬ್ಯುಸಿನೆಸ್‌ ಮಾಡಿತ್ತು. ಈಗ ಯಶಸ್ಸಿನ ಬೆನ್ನಲ್ಲೇ ಎರಡು ಸಿನಿಮಾವನ್ನು ಸೆಟ್ಟೇರಿಸಿದ್ದಾರೆ.

  ಇಬ್ಬನಿಯಲ್ಲಿ 'ಬ್ಯಾಚುಲರ್ ಪಾರ್ಟಿ'

  ಪರಂವಃ ಸ್ಟುಡಿಯೋಸ್ ಪ್ರಸ್ತುತ 'ಬ್ಯಾಚುಲರ್ ಪಾರ್ಟಿ' ಹಾಗೂ 'ಇಬ್ಬನಿ ತಬ್ಬಿದ ಇಳೆಯಲಿ' ಎಂಬ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ದೂದ್ ಪೇಡಾ ದಿಗಂತ್, ರಿಷಬ್ ಶೆಟ್ಟಿ ಹಾಗೂ ಅಚ್ಯುತ್ ಕುಮಾರ್ ಮೂವರ 'ಬ್ಯಾಚುಲರ್ ಪಾರ್ಟಿ' ಒಂದಾದರೆ, ವಿಹಾನ್ ನಟಿಸುತ್ತಿರೋ 'ಇಬ್ಬನಿ ತಬ್ಬಿದ ಇಳೆಯಲಿ' ಇನ್ನೊಂದು ಸಿನಿಮಾ. 'ಬ್ಯಾಚುಲರ್ ಪಾರ್ಟಿ' ಪಕ್ಕಾ ಮನರಂಜನಾ ಸಿನಿಮಾ. 'ಇಬ್ಬನಿ ತಬ್ಬಿದ ಇಳೆಯಲಿ' ಪಕ್ಕಾ ರೊಮ್ಯಾಂಟಿಕ್ ಸಿನಿಮಾ. ಎರಡೂ ವಿಭಿನ್ನ ಸಿನಿಮಾಗಳನ್ನು ತೆರೆಮೇಲೆ ತರೋದಕ್ಕೆ ರಕ್ಷಿತ್ ಶೆಟ್ಟಿ ಸಜ್ಜಾಗಿ ನಿಂತಿದ್ದಾರೆ.

  "ಚಿತ್ರರಂಗದಲ್ಲಿ ಹೊಸರೀತಿಯ ಕಥೆಗಳು ಬರಬೇಕು. ಹೊಸ ರೀತಿಯಲ್ಲಿ ಯೋಚಿಸುವ ಕಥೆಗಾರರನ್ನು ನಾವು ಬರಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಪರಂವಃ ಸ್ಟುಡಿಯೋಸ್ ಸದಾ ಸಿದ್ದ.

  Diganth, Rishab Shetty Starrer bachelor Party Rakshit Shetty Producer

  ನನ್ನ ಜೊತೆ 'ಕಿರಿಕ್ ಪಾರ್ಟಿ' ಸಮಯದಿಂದ ಜೊತೆಗಿರುವ ಚಂದ್ರಜಿತ್ ಬೆಳ್ಳಿಯಪ್ಪ 'ಇಬ್ಬನಿ ತಬ್ಬಿದ ಇಳೆಯಲಿ' ಹಾಗೂ ಅಭಿಜಿತ್ ಮಹೇಶ್ 'ಬ್ಯಾಚುಲರ್ ಪಾರ್ಟಿ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ." ಎಂದು ರಕ್ಷಿತ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

  ರಕ್ಷಿತ್ ಶೆಟ್ಟಿ ಕೈ ತುಂಬಾ ಸಿನಿಮಾಗಳಿವೆ.

  ಮೂವರು ಸಂಸಾರಸ್ಥರನ್ನು ಒಟ್ಟಿಗೆ ಸೇರಿಸಿ ರಕ್ಷಿತ್ ಶೆಟ್ಟಿ 'ಬ್ಯಾಚುಲರ್ ಪಾರ್ಟಿ' ಮಾಡುವುದಕ್ಕೆ ಹೊರಟಿದ್ದಾರೆ. ದಿಗಂತ್, ರಿಷಬ್ ಶೆಟ್ಟಿ ಹಾಗೂ ಅಚ್ಯುತ್ ಕುಮಾರ್ ಸಿನಿಮಾದ ಪೋಸ್ಟರ್ ನೋಡಿದರೆ, ಹಾಲಿವುಡ್ ಸಿನಿಮಾವನ್ನು ನೆನಪಿಸುವಂತಿದೆ. ಹೀಗಿದ್ದರೂ, ಮೂವರಿಂದ ಹಾಸ್ಯಪ್ರಧಾನ ಸಿನಿಮಾವೊಂದು ಪ್ರೇಕ್ಷಕರಿಗೆ ಸಿಗುತ್ತೆ ಅನ್ನೋ ನಂಬಿಕೆ ಎಲ್ಲರಲ್ಲೂ ಇದೆ.

  ಸಿನಿಮಾ ನಿರ್ಮಾಣ ಒಂದ್ಕಡೆಯಾದರೆ, ಇನ್ನೊಂದು ಕಡೆ ರಕ್ಷಿಯ್ ಶೆಟ್ಟಿ ನಟನೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ರಕ್ಷಿತ್ ಶೆಟ್ಟಿ ಸದ್ಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದು ಕಡೆ 'ರಿಚರ್ಡ್ ಆಂಟೋನಿ', 'ಕಿರಿಕ್ ಪಾರ್ಟಿ 2', 'ಪುಣ್ಯಕೋಟಿ' ಸೇರಿದಂತೆ ಹಲವು ಸಿನಿಮಾಗಳಿವೆ. ಹೀಗಾಗಿ ರಕ್ಷಿತ್ ಶೆಟ್ಟಿ ಈ ವರ್ಷ ನಟನೆ ಹಾಗೂ ನಿರ್ಮಾಣ ಎರಡರಲ್ಲೂ ಬ್ಯುಸಿ.

  English summary
  Diganth, Rishab Shetty Starrer Bachelor Party Rakshit Shetty Producer, Know More.
  Sunday, September 4, 2022, 12:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X