ಮದುವೆ ಯಾವಾಗ ? ಅಂದ್ರೆ ಹೀಗೆ ಹೇಳಿದ್ರು ದಿಗಂತ್ - ಐಂದ್ರಿತಾ!

By Naveen

ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಚಂದನವನದ ಪ್ರೇಮ ಪಕ್ಷಿಗಳು. 'ಮನಸಾರೆ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ ಬಳಿಕ ಮನಸಾರೆ ಪ್ರೀತಿ ಮಾಡಿದರು. ತಮ್ಮ ಪ್ರೇಮದ ಬಗ್ಗೆ ಹೆಚ್ಚು ಹೇಳದೆ ಇದ್ದರೂ ಅವರ ಪ್ರೀತಿಯ ವಿಚಾರ ಎಲ್ಲರಿಗೂ ತಿಳಿಯಿತು.

ನಿನ್ನೆ ದಿಗಂತ್ ನಟನೆಯ 'ಕಥೆಯೊಂದು ಶುರುವಾಗಿದೆ' ಸಿನಿಮಾದ ಸೆಲಿಬ್ರಿಟಿ ಶೋ ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ನಡೆಯಿತು. ಚಿತ್ರರಂಗದ ಅನೇಕ ನಟ ನಟಿಯರು ಈ ಕಾರ್ಯಕ್ರಮಕ್ಕೆ ಆಗಮಿಸಿ ದಿಗಂತ್ ಗೆ ಶುಭ ಕೋರಿದರು. ನಟಿ ಐಂದ್ರಿತಾ ಕೂಡ ಸಿನಿಮಾವನ್ನು ನೋಡಿದ್ದು ವಿಶೇಷವಾಗಿತ್ತು.

ಸಿನಿಮಾ ಮುಗಿದ ಮೇಲೆ ಮಾತನಾಡಿದ ಐಂದ್ರಿತಾ ಚಿತ್ರದಲ್ಲಿ ತಮಗೆ ಏನು ಇಷ್ಟ ಆಯ್ತು ಎಂದು ಹೇಳುತ್ತಾ ಹೋದರು. ದಿಗಂತ್ ಸಿನಿಮಾ ಬಗ್ಗೆ ಸಂತಸ ವ್ಯಕ್ತ ಪಡಿಸಿದರು. ಈ ವೇಳೆ ಮಾಧ್ಯಮದ ಜೊತೆಗೆ ಮಾತನಾಡುವಾಗ 'ನಿಮ್ಮ ಮದುವೆ ಯಾವಾಗ ?' ಪ್ರಶ್ನೆ ಬಂತು. ಅದಕ್ಕೆ ನಗು ನಗುತ್ತಾ ಈ ರೀತಿ ಉತ್ತರಿಸಿದರು ಈ ತಾರಾ ಜೋಡಿ... ಮುಂದೆ ಓದಿ....

ನನ್ನ ಕಥೆ ಸದ್ಯದಲ್ಲಿಯೇ ಶುರು ಆಗಲಿದೆ

ನನ್ನ ಕಥೆ ಸದ್ಯದಲ್ಲಿಯೇ ಶುರು ಆಗಲಿದೆ

''ಕಥೆಯೊಂದು ಶುರುವಾಗಿದೆ' ಸಿನಿಮಾ ಬಿಡುಗಡೆಯಾಗುತ್ತಿದೆ. ಅದೇ ರೀತಿ ನನ್ನ ಕಥೆ ಕೂಡ ಸದ್ಯದಲ್ಲಿಯೇ ಶುರು ಆಗಲಿದೆ. ಈ ಚಿತ್ರ ನನಗೆ ಹತ್ತಿರ ಆಯ್ತು. ಯಾಕೆಂದರೆ, ಚಿತ್ರದ ನಾಯಕ ತರುಣ್ ಗೂ ಮದುವೆ ಆಗಿರುವುದಿಲ್ಲ. ಅವನು ಲೈಫ್ ಪಾರ್ಟ್ನರ್ ಹುಡುಕುತ್ತ ಇರುತ್ತಾನೆ. ನನಗೆ ಲೈಫ್ ಪಾರ್ಟ್ನರ್ ಸಿಕ್ಕಿದ್ದಾರೆ. ನಮ್ಮದು ಸದ್ಯದಲ್ಲಿಯೇ.....'' ಎಂದು ತಮ್ಮ ಡಿಂಪಲ್ ತೋರುತ್ತಾ ನಕ್ಕರು ದಿಗಂತ್.

ಬಹುಷಃ ಡಿಸೆಂಬರ್ ನಲ್ಲಿ ಮದುವೆ

ಬಹುಷಃ ಡಿಸೆಂಬರ್ ನಲ್ಲಿ ಮದುವೆ

ಮೊದಲು ಮದುವೆ ಬಗ್ಗೆ ಮಾತನಾಡುತ್ತ ನಕ್ಕು ಸುಮ್ಮನಾದ ದಿಗಂತ್ ಅವರಿಗೆ ಯಾವಾಗ ಮದುವೆ ಅಂತ ಹೇಳಿಬಿಡಿ.. ಎಂದು ಹೇಳಿದೆವು. ಆಗ ಅವರು ''ಇದೇ ದಿನ ಅಂತ ಇನ್ನೂ ಫಿಕ್ಸ್ ಆಗಿಲ್ಲ. ಬಹುಷಃ ಡಿಸೆಂಬರ್ ವೇಳೆಗೆ ಆಗಬಹುದು.'' ಎಂದು ಖುಷಿಯ ವಿಚಾರವನ್ನು ಹಂಚಿಕೊಂಡರು. ಐಂದ್ರಿತಾ ಜೊತೆಗೆ ಮದುವೆ ಬಗ್ಗೆ ಬಾಯಿ ಬಿಟ್ಟು ಮಾತನಾಡಿದರು

ಮದುವೆ ಡೇಟ್ ಅನೌನ್ಸ್ ಮಾಡುತ್ತೇನೆ ಎಂದ ಐಂದ್ರಿತಾ

ಮದುವೆ ಡೇಟ್ ಅನೌನ್ಸ್ ಮಾಡುತ್ತೇನೆ ಎಂದ ಐಂದ್ರಿತಾ

ಇದೇ ಪ್ರಶ್ನೆ ಈಗ ಐಂದ್ರಿತಾ ಮುಂದೆ ಬಂತು. ಮದುವೆಯ ಪ್ರಶ್ನೆಗೆ ಉತ್ತರಿಸಿದ ಅವರು ''ಈಗ 'ಕಥೆಯೊಂದು ಶುರುವಾಗಿದೆ' ಸಿನಿಮಾದ ಬಗ್ಗೆ ಮಾತ್ರ ಮಾತಾಡೋಣ. ನಮ್ಮ ಕಥೆ ಶುರುವಾಗಿ 9 ವರ್ಷ ಆಯ್ತು ಇನ್ನು ನಡೆಯುತ್ತಿದೆ.'' ಎಂದರು. ಬಳಿಕ ''ನಮ್ಮ ಮದುವೆ ಡೇಟ್ ಇನ್ನೂ ಫಿಕ್ಸ್ ಆಗಿಲ್ಲ. ಆದಾಗ ನಾನೇ ಅನೌನ್ಸ್ ಮಾಡುತ್ತೇನೆ.'' ಎಂದು ದಿಗಂತ್ ಮುಖ ನೋಡಿದರು. ಇಬ್ಬರ ಮುಖದಲ್ಲಿಯೂ ನಗು ಮೂಡಿತು.

ಇದು ದಿಗಂತ್ ಬೆಸ್ಟ್ ಸಿನಿಮಾ

ಇದು ದಿಗಂತ್ ಬೆಸ್ಟ್ ಸಿನಿಮಾ

''ಚಿತ್ರದ ಬಗ್ಗೆ ಮಾತನಾಡಿದ ಐಂದ್ರಿತಾ ''ಇದು ದಿಗಂತ್ ಬೆಸ್ಟ್ ಸಿನಿಮಾ ಹಾಗೂ ಬೆಸ್ಟ್ ಪರ್ಫಾರ್ಮೆನ್ಸ್. ಈ ಚಿತ್ರದ ವಿಷಯ ತುಂಬ ಫ್ರೆಶ್ ಆಗಿದೆ. ಸಿನಿಮಾ ಎಲ್ಲರಿಗೆ ತುಂಬನೇ ಹತ್ತಿರ ಆಗುತ್ತದೆ. ಇಲ್ಲಿ ಆಕ್ಷನ್, ಫೈಟ್ಸ್ ಇಲ್ಲ. ಬದಲಿಗೆ ಒಳ್ಳೆಯ ಭಾವನೆಗಳು ಇವೆ. ಮೂರು ಸಂಬಂಧದ ಬಗ್ಗೆ ಚಿತ್ರದಲ್ಲಿ ತೋರಿಸಿದ್ದಾರೆ. ಹಾಡುಗಳು ಇಷ್ಟ ಆಯ್ತು. ಇಬ್ಬರ ಕ್ರೆಮಿಸ್ಟಿ ಚೆನ್ನಾಗಿದೆ. ಹೀರೋಯಿನ್ ಕೂಡ ಸಾಪ್ಟ್ ಆಗಿ ನಟನೆ ಮಾಡಿದ್ದಾರೆ.'' - ಐಂದ್ರಿತಾ ರೇ, ನಟಿ

ನನ್ನ ಕೆರಿಯರ್ ನ ಡಿಫರೆಂಟ್ ಸಿನಿಮಾ

ನನ್ನ ಕೆರಿಯರ್ ನ ಡಿಫರೆಂಟ್ ಸಿನಿಮಾ

''ನನ್ನ ಕೆರಿಯರ್ ನಲ್ಲಿ ಬಂದ ಡಿಫರೆಂಟ್ ಸಿನಿಮಾ ಇದು ಎನ್ನುವ ಫೀಲ್ ನೀಡಿದೆ. ನನಗೆ ತುಂಬ ಖುಷಿ ಆಗುತ್ತಿದೆ. ಇವತ್ತು ಒಂದಿರುವ ಸೆಲಿಬ್ರೆಟಿಗಳು ಹಾಗೂ ಜನರು ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಎಲ್ಲ ಕ್ರಿಡಿಟ್ ನಿರ್ದೇಶಕರಿಗೆ ಸಲ್ಲಬೇಕು. ಅವರೇ ಎಲ್ಲ ಹೇಳಿ ಮಾಡಿಸಿದ್ದು. ಚಿತ್ರದಲ್ಲಿ ನಂದು ಮತ್ತು ಪೂಜಾ ಅವರ ಮೊದಲ ಭೇಟಿಯ ದೃಶ್ಯ ನನಗೆ ತುಂಬ ಇಷ್ಟ ಆಯ್ತು. ಇದೊಂದು ಒಳ್ಳೆಯ ಸಿನಿಮಾ. ಎಲ್ಲ ಬಂದು ನೋಡಿದರೆ ನಾವು ಹಾಕಿದ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ.'' - ದಿಗಂತ್, ನಟ

More from Filmibeat

English summary
Kannda actor Diganth spoke about his Aindrita Ray marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X