For Quick Alerts
  ALLOW NOTIFICATIONS  
  For Daily Alerts

  ನಟ ದಿಗಂತ್ ಹೊಸ ಸಿನಿಮಾ ಇಂದಿನಿಂದ ಆರಂಭ

  |

  ಲಾಕ್‌ಡೌನ್ ಆದ್ಮೇಲೆ ನಟ ದಿಗಂತ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಹೊಸ ಚಿತ್ರಗಳನ್ನು ಆರಂಭಿಸಿರುವ ನಟ ಸತತವಾಗಿ ಶೂಟಿಂಗ್ ಮಾಡುತ್ತಿದ್ದಾರೆ.

  ದಿಗಂತ್ ನಟಿಸುತ್ತಿರುವ ''ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ'' ಸಿನಿಮಾ ಅಧಿಕೃತವಾಗಿ ಶುರುವಾಗಿದ್ದು, ಇಂದಿನಿಂದ ಚಿತ್ರೀಕರಣ ಸಹ ಪ್ರಾರಂಭ ಮಾಡಿದೆ.

  'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಎನ್ನುತ್ತಿದ್ದಾರೆ ನಟ ದಿಗಂತ್'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಎನ್ನುತ್ತಿದ್ದಾರೆ ನಟ ದಿಗಂತ್

  ಈ ಹಿಂದೆ ದಸರಾ ಹಬ್ಬದ ಪ್ರಯುಕ್ತ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ದಿಗಂತ್ ಅಡಿಕೆ ಬೆಳೆಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಮಲೆನಾಡಿನ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ. ಸಾಗರದ ಪುಟ್ಟಹಳ್ಳಿಯಲ್ಲಿ ನಡೆಯುವ ಕಥೆ ಇದಾಗಿದೆ.

  ದಿಗಂತ್ ಗೆ ನಾಯಕಿಯಾಗಿ ಐಂದ್ರಿತಾ ರೇ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೋರ್ವ ನಾಯಕಿಯಾಗಿ ಕಿರುತೆರೆಯ ಖ್ಯಾತ ನಟಿ ರಂಜಿನಿ ರಾಘವನ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ವಿನಾಯಕ ಕೋಡ್ಸರ ನಿರ್ದೇಶನ ಮಾಡುತ್ತಿದ್ದಾರೆ.

  ವಿನಾಯಕ ಈ ಮೊದಲು ಎರಡು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರದ ಮೂಲಕ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ.

  ಗೊಳಾಡುತ್ತಿದ್ದಾರೆ ಒಂದು ಕಾಲದ ಸ್ಟಾರ್ ನಟ | Filmibeat Kannada

  ಯುವರತ್ನ, ಹುಟ್ಟುಹಬ್ಬ ಶುಭಾಶಯಗಳು, ವೇರ್ ಈಸ್ ಮೈ ಕನ್ನಡಕ, ಮಾರಿಗೋಲ್ಡ್, ಗಾಳಿಪಟ-2, ಎವರು ರಿಮೇಕ್‌ನಲ್ಲಿ (ಹರಿಪ್ರಿಯಾ-ದಿಗಂತ್) ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Kannada Actor Diganth Starrer Kshamisi Nimma Khatheyalli Hanavilla movie shooting started from today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X