ಗೋಲ್ಡ್ ವ್ಯಾಪಾರ ಯಶಸ್ವಿಯಾಗಿ ಮುಗಿಸಿದ ನಟ ದಿಗಂತ್

By ಫಿಲ್ಮ್ ಡೆಸ್ಕ್

ಸ್ಯಾಂಡಲ್ ವುಡ್ ನ ದೂದ್ ಪೇಡ ಅಂತಲೇ ಖ್ಯಾತಿಗಳಿಸಿರುವ ನಟ ದಿಗಂತ್ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಮಲೆನಾಡಿನ ಕೊನೆ ಕೊಯ್ಲು ಮಾಡುವಲ್ಲಿ ಬ್ಯುಸಿಯಾಗಿದ್ದ ನಟ ದಿಗಂತ್ ಇದೇ ಗ್ಯಾಪ್ ನಲ್ಲಿ ಗೋಲ್ಡ್ ವ್ಯಾಪಾರವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

ದಿಗಂತ್ ಗೋಲ್ಡ್ ವ್ಯಾಪಾರ ಮಾಡುತ್ತಾರಾ? ಅಂತ ಅಚ್ಚರಿ ಪಡಬೇಡಿ. ದೂದ್ ಪೇಡ 'ಮಾರಿ ಗೋಲ್ಡ್' ಎನ್ನುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದರು. ಗೋಲ್ಡ್ ಬಿಸ್ಕೇಟ್ ಬಗ್ಗೆ ಇರುವ ಸಿನಿಮಾ ಇದಾಗಿದ್ದು, ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.

ಹೌದು, ಮಾರಿ ಗೋಲ್ಡ್ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಬಗ್ಗೆ ಚಿತ್ರದ ನಾಯಕಿ ಸಂಗೀತ ಶೃಂಗೇರಿ ಮಾಹಿತಿ ನೀಡಿದ್ದಾರೆ. ಚಿತ್ರದ ಕೊನೆಯ ದಿನದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಜೊತೆಗೆ ಅದ್ಭುತ ತಂಡದ ಜೊತೆ ಕೆಲಸ ಮಾಡಿರುವ ಖುಷಿಯನ್ನು ಸಂಗೀತ ವ್ಯಕ್ತಪಡಿಸಿದ್ದಾರೆ.

Diganth Starrer Marigold Movie Shooting Completed

ಮಾರಿ ಗೋಲ್ಡ್ ಸಿನಿಮಾದಲ್ಲಿ ಸಡನ್ನಾಗಿ ಗೋಲ್ಡ್ ಬೆಸ್ಕೇಟ್ ಸಿಕ್ಕಿದರೆ ಏನಾಗುತ್ತೆ? ಎನ್ನುವುದರ ಸುತ್ತ ಸುತ್ತುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ. ಇಲ್ಲಿ ಕಾಮಿಡಿ ಮತ್ತು ಲವ್ ಗೂ ಅಷ್ಟೆ ಪ್ರಾಮುಖ್ಯತೆ ಕೊಡಲಾಗಿದೆಯಂತೆ. ಚಿತ್ರಕ್ಕೆ ರಾಘವೇಂದ್ರ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ನಟ ದಿಗಂತ್ ಬಳಿ ಸದ್ಯ ಕೈತುಂಬ ಸಿನಿಮಾಗಳಿವೆ. ಕ್ಷಮಿಸಿ ನನ್ನ ಖಾತೆಯಲ್ಲಿ ಹಣವಿಲ್ಲ, ಹುಟ್ಟುಹಬ್ಬದ ಶುಭಾಶಯಗಳು, ಗಾಳಿಪಟ-2, ವೇರ್ ಈಸ್ ಮೈ ಕನ್ನಡಕ, ಯುವರತ್ನ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮಾರಿ ಗೋಲ್ಡ್ ಚಿತ್ರೀಕರಣ ಮುಗಿಸಿರುವ ದಿಗಂತ್, ಸದ್ಯದಲ್ಲೇ ಕ್ಷಮಿಸಿ ನನ್ನ ಖಾತೆಯಲ್ಲಿ ಹಣವಿಲ್ಲ ಸಿನಿಮಾ ಮುಗಿಸಿ, ಗಾಳಿಪಟ-2 ಚಿತ್ರಕ್ಕಾಗಿ ವಿದೇಶಕ್ಕೆ ಹೊರಡಲಿದ್ದಾರೆ.

Recommended Video

ಸಮಂತಾ ಜೊತೆ ತನ್ನ ಆಸೆ ಹೇಳಿಕೊಂಡ ತಮನ್ನಾ | Filmibeat Kannada

More from Filmibeat

English summary
Kannada Actor Diganth Starrer Marigold Movie Shooting Completed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X