Bachelor Party trailer: ಕಿಕ್ ಕೊಡ್ತಿದೆ 'ಪಾರ್ಟಿ' ಝಲಕ್ಕು: ಆ ಹಾಲಿವುಡ್ ಚಿತ್ರವೇ ಇದಕ್ಕೆ ಪ್ರೇರಣೆ!
ರಕ್ಷಿತ್ ಶೆಟ್ಟಿ ನಿರ್ಮಾಣದ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಮುಂದಿನ ವಾರ ತೆರೆಗೆ ಬರಲಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಕನ್ನಡದಲ್ಲಿ ಒಂದು ಬಾಲಿವುಡ್ ಸ್ಟೈಲ್ ಮೇಕಿಂಗ್ ಇರುವ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಎಂದು ಎಲ್ಲರೂ ಮೆಚ್ಚಿ ಕೊಂಡಾಡುತ್ತಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ 'ಬ್ಯಾಚುಲರ್ ಪಾರ್ಟಿ'ಗೆ ಹೋಗೋಕೆ ಸಜ್ಜಾಗಿದ್ದಾರೆ.
ನಿರ್ದೇಶಕ ಅಭಿಜಿತ್ ಮಹೇಶ್ ಚೊಚ್ಚಲ ಪ್ರಯತ್ನದಲ್ಲೇ ಮ್ಯಾಜಿಕ್ ಮಾಡುವ ಸುಳಿವು ಸಿಗುತ್ತಿದೆ. ದೂದ್ ಪೇಡ ದಿಗಂರ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಜೀವನದ ಜಂಜಾಟದಿಂದ ಬೇಸತ್ತು ರಿಲ್ಯಾಕ್ಸ್ ಆಗುವುದಕ್ಕೆ ಥಾಯ್ಲೆಂಡ್ ಪ್ರವಾಸ ಕೈಗೊಳ್ಳುವ 3 'ಬ್ಯಾಚುಲರ್'ಗಳ ಕಥೆ ಚಿತ್ರದಲ್ಲಿದೆ. ಆದರೆ ಏನೋ ಮಾಡೋಕೆ ಹೋಗಿ ಮತ್ತೇನೋ ಆಗಿ ಏನೆಲ್ಲಾ ಎಡವಟ್ಟುಗಳಾಗುತ್ತದೆ ಅನ್ನೋದು ಚಿತ್ರದ ಒನ್‌ಲೈನ್ ಸ್ಟೋರಿ ಅನ್ನೋದು ಗೊತ್ತಾಗುತ್ತಿದೆ.

ಹಾಲಿವುಡ್‌ನ 'ಹ್ಯಾಂಗೋವರ್' ಸರಣಿಯಿಂದ ಪ್ರೇರಣೆಗೊಂಡು 'ಬ್ಯಾಚುಲರ್ ಪಾರ್ಟಿ' ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಒಂದರ್ಥದಲ್ಲಿ ಇದು ಇಂಡಿಯನ್ 'ಹ್ಯಾಂಗೋವರ್' ಎನ್ನಬಹುದು. ಬ್ಯಾಂಕಾಕ್‌ನಲ್ಲಿ ನಡೆಯುವ ಒಂದು ಮದುವೆ ಇಡೀ ಕಥೆಗೆ ದೊಡ್ಡ ಟ್ವಿಸ್ಟ್ ಕೊಡುತ್ತದೆ. ಇದು ಕೂಡ ಹಾಲಿವುಡ್ ಸಿನಿಮಾದಲ್ಲಿದೆ. ಇದನ್ನು ರೀಮೆಕ್ ಎನ್ನದಿದ್ದರೂ ಪ್ರೇರಣೆ ಎನ್ನಬಹುದು. ಒಟ್ನಲ್ಲಿ 'ಬ್ಯಾಚುಲರ್ ಪಾರ್ಟಿ' ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಮೇಕಿಂಗ್, ಕಲಾವಿದರ ಆಯ್ಕೆ ಎಲ್ಲವೂ ಗಮನ ಸೆಳೆಯುತ್ತಿದೆ. ಮುಖ್ಯವಾಗಿ ಅರವಿಂದ್ ಕಶ್ಯಪ್ ಛಾಯಾಗ್ರಹಣ ಹುಬ್ಬೇರಿಸುವಂತಿದೆ.
ಮಡದಿ ಜೊತೆ ದಿನ ಜಗಳ ಮಾಡುತ್ತಾ ಜೀವನದಲ್ಲಿ ಸಂತೋಷವನ್ನೇ ಕಾಣದ ಸಂತೋಷ್ ಆಗಿ ದಿಗಂತ್ ಪಾತ್ರದ ಚಿತ್ರದ ಕೇಂದ್ರ ಬಿಂದು ಅನ್ನೋದು ಗೊತ್ತಾಗುತ್ತದೆ. ಇನ್ನುಳಿದಂತೆ ಯೋಗಿ ಹಾಗೂ ಅಚ್ಯುತ್ ಸ್ಪೆಷಲ್ ಅಟ್ರಾಕ್ಷನ್. ಇನ್ನು ಬ್ಯಾಂಕಾಕ್‌ನಲ್ಲಿ ಒಂದು ಮಗುವಿನ ತಾಯಿ ಜೊತೆ ಯೋಗಿ ಪ್ರೀತಿಲಿ ಬೀಳುವುದು ಇದೆ. ಇಬ್ಬರಿಗೂ ಒಂದು ಡ್ಯುಯೆಟ್ ಕೂಡ ಇದೆ. ಅಂದಹಾಗೆ ರಿಷಬ್ ಶೆಟ್ಟಿ ಈ ಪಾತ್ರಕ್ಕೆ ಆಯ್ಕೆ ಆಗಿದ್ದರು. ಕಾರಣಾಂತರಗಳಿಂದ ಅವರು ಹೊರ ಬರುವಂತಾಯಿತು.

ದಿಗಂತ್ ಮಡದಿ ಪಾತ್ರದಲ್ಲಿ ಸಿರಿ ರವಿಕುಮಾರ್ ಕಾಣಿಸಿಕೊಂಡಿದ್ದಾರೆ. ಬಾಲಾಜಿ ಮನೋಹರ್, ಪ್ರಕಾಶ್ ತುಂಬಿನಾಡು ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಇನ್ನುಳಿದಂತೆ ಶೈನ್ ಶೆಟ್ಟಿ, ಪವನ್ ಕುಮಾರ್, ವಿಕಾಸ್ ವಿಕ್ಕಿಪಿಡಿಯ, ಎನ್. ಸೋಮೇಶ್ವರ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಬ್ಯಾಚುಲರ್ ಪಾರ್ಟಿ' ಫನ್ ರೋಲರ್ ಕೋಸ್ಟರ್ ರೈಡ್ ಅನ್ನೋದು ಗೊತ್ತಾಗುತ್ತಿದೆ. ಅರ್ಜುನ್ ರಾಮು ಬಿಜಿಎಂ ಸಹ ಗಮನ ಸೆಳೆದಿದೆ.
ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ ನಟನೆಯ 'ಕಿರಿಕ್ ಪಾರ್ಟಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದೇ ಹಾದಿಯಲ್ಲಿ ಬರುತ್ತಿರುವ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಇನ್ನು ಇತ್ರೀಚೆಗೆ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆಗೂ ಮಿಷನ್ ಗನ್‌ಗಳ ಆರ್ಭಟ ಜೋರಾಗಿದೆ. 'ಅನಿಮಲ್' ಚಿತ್ರದಲ್ಲೂ ದೊಡ್ಡ ಬಂದೂಕು ಸದ್ದು ಮಾಡಿತ್ತು. 'ಬ್ಯಾಚುಲರ್ ಪಾರ್ಟಿ' ಕ್ಲೈಮ್ಯಾಕ್ಸ್‌ನಲ್ಲೂ ಬಾಲಾಜಿ ಮನೋಹರ್ ದೊಡ್ಡ ಗನ್ ಹಿಡಿದು ಕಾಣಿಸಿಕೊಂಡಿದ್ದಾರೆ.
ಈ ವರ್ಷ ಯಾವುದೇ ದೊಡ್ಡ ಕನ್ನಡ ಸಿನಿಮಾ ಇನ್ನು ಬಿಡುಗಡೆ ಆಗಿಲ್ಲ. ಜನವರಿ 26ಕ್ಕೆ 'ಬ್ಯಾಚುಲರ್ ಪಾರ್ಟಿ' ಹಾಗೂ 'ಉಪಾಧ್ಯಕ್ಷ' ಸಿನಿಮಾಗಳು ತೆರೆಗೆ ಬರ್ತಿದೆ. 'ಬ್ಯಾಚುಲರ್ ಪಾರ್ಟಿ' ಸಿನಿಮಾ 2024ರ ಮೊದಲ ಕನ್ನಡದ ಹಿಟ್ ಸಿನಿಮಾ ಆಗುತ್ತದೆ ಎಂದು ಕೆಲವರು ಭವಿಷ್ಯ ನುಡಿಯುತ್ತಿದ್ದಾರೆ. ಪರಂವಃ ಸ್ಟುಡಿಯೋಸ್ ಸಂಸ್ಥೆ ಸಿನಿಮಾ ಎನ್ನುವ ಕಾರಣಕ್ಕೂ ಈ ಸಿನಿಮಾ ನಿರೀಕ್ಷೆ ಮುಡಿಸಿದೆ.


Click it and Unblock the Notifications











