Don't Miss!
- Technology
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ!
- News
Philips Layoffs : ಫಿಲೀಪ್ಸ್ನಿಂದ 6000 ಉದ್ಯೋಗಿಗಳ ವಜಾ
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದಿಗಂತ್ ನಟನೆಯ ಯಾವ ಚಿತ್ರ ಇಷ್ಟ? ನಟಿಯಾಗದಿದ್ದರೆ ಏನಾಗ್ತಾ ಇದ್ರಿ? ಐಂದ್ರಿತಾ ಕೊಟ್ರು ಉತ್ತರ
ಮೂಲತಃ ರಾಜಸ್ಥಾನದ ಉದಯಪುರದ ಹುಡುಗಿಯಾದರೂ ಸಹ ಐಂದ್ರಿತಾ ರೇ ತನ್ನ ಪ್ರೌಢ ಶಿಕ್ಷಣ ಹಾಗೂ ಕಾಲೇಜು ವಿದ್ಯಾಭ್ಯಾಸವನ್ನೆಲ್ಲಾ ಪಡೆದದ್ದು ಬೆಂಗಳೂರಿನಲ್ಲಿಯೇ. ಹೀಗೆ ಬೆಂಗಳೂರಿನ ಡಾ ಬಿ ಆರ್ ಅಂಬೇಡ್ಕರ್ ಡೆಂಟಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಐಂದ್ರಿತಾ ರೇ ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಹಾಗೂ ಜಾಹೀರಾತುಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ಹೀಗೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಐಂದ್ರಿತಾ ರೇ ಕನ್ನಡ ಚಲನಚಿತ್ರರಂಗಕ್ಕೂ ಸಹ ಪದಾರ್ಪಣೆ ಮಾಡಿದರು. 2008ರಲ್ಲಿ ತೆರೆಕಂಡ ಪ್ರಜ್ವಲ್ ದೇವರಾಜ್ ಅಭಿನಯದ 'ಮೆರವಣಿಗೆ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಐಂದ್ರಿತಾ ರೇ ತನ್ನ ಮೂರನೇ ಚಿತ್ರ ಜಂಗ್ಲಿ ಮೂಲಕ ದೊಡ್ಡ ಬ್ರೇಕ್ ಪಡೆದುಕೊಂಡರು ಹಾಗೂ ಸಾಲು ಸಾಲು ಆಫರ್ ಪಡೆದು ಬೇಡಿಕೆ ಹೆಚ್ಚಿಸಿಕೊಂಡರು.
ನಂತರ ಕಿಚ್ಚ ಸುದೀಪ್ ಹಾಗೂ ಪುನೀತ್ ರಾಜ್‌ಕುಮಾರ್ ರೀತಿಯ ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಐಂದ್ರಿತಾ ರೇ 2018ರಲ್ಲಿ ದಿಗಂತ್ ಮಂಚಾಲೆ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವಿವಾಹವಾದ ನಂತರವೂ ಸಹ ಚಿತ್ರರಂಗದಿಂದ ದೂರಾಗದ ಐಂದ್ರಿತಾ ರೈ ಹಲವು ಕನ್ನಡ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದು ಸದ್ಯ 'ತಿಮ್ಮಯ್ಯ & ತಿಮ್ಮಯ್ಯ' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಐಂದ್ರಿತಾ ರೇ ನಟಿಸಿದ್ದರೆ ನಾಯಕನಾಗಿ ದಿಗಂತ್ ಮಂಚಾಲೆ ಅಭಿನಯಿಸಿದ್ದಾರೆ. ಸದ್ಯ ಈ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಟಿ ಐಂದ್ರತಾ ರೇ ನಿರತರಾಗಿದ್ದು, ಚಿತ್ರದ ಕುರಿತಾಗಿ ನಮ್ಮ ಫಿಲ್ಮಿಬೀಟ್ ಕನ್ನಡ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ ಐಂದ್ರಿತಾ ರೇ ಚಿತ್ರರಂಗ ಪ್ರವೇಶಿಸದಿದ್ದರೆ ತಾನು ಏನಾಗುತ್ತಿದ್ದೆ, ದಿಗಂತ್ ನಟನೆಯ ಯಾವ ಚಿತ್ರ ಇಷ್ಟ ಹಾಗೂ ತಾನು ದಿಗಂತ್ ಒಂದಾಗಲು ಕಾರಣವೇನು ಎಂಬುದರ ಕುರಿತು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ನಟಿಯಾಗದಿದ್ದರೆ ಏನಾಗುತ್ತಿದ್ರಿ?
ಸಂದರ್ಶನದಲ್ಲಿ ಮಾತನಾಡಿದ ನಟಿ ಐಂದ್ರಿತಾ ರೇ ನಟಿಯಾಗಿ ಚಲನಚಿತ್ರರಂಗ ಪ್ರವೇಶಿಸದಿದ್ದರೆ ತಾನು ದಂತ ವೈದ್ಯೆಯಾಗುತ್ತಿದ್ದೆ ಎಂದು ತಿಳಿಸಿದರು. ಬೆಂಗಳೂರಿನ ಡಾ ಬಿ ಆರ್ ಅಂಬೇಡ್ಕರ್ ಡೆಂಟಲ್ ಕಾಲೇಜಿನಲ್ಲಿ ದಂತ ವಿಜ್ಞಾನದಡಿಯಲ್ಲಿ ಬ್ಯಾಚೆಲರ್ ಡಿಗ್ರಿ ವ್ಯಾಸಾಂಗ ಮಾಡುತ್ತಿದ್ದ ಐಂದ್ರಿತಾ ರೇಗೆ ನಟಿಯಾಗುವ ಅವಕಾಶ ಹರಸಿ ಬಂದಿತ್ತು. ಇಲ್ಲದಿದ್ದರೆ ಐಂದ್ರಿತಾ ಈ ಸಮಯಕ್ಕೆ ದಂತ ವೈದ್ಯೆಯಾಗಿರುತ್ತಿದ್ದರು.

ಸಾಕುಪ್ರಾಣಿ ಕೇಂದ್ರ ತೆರೆಯುವ ಕನಸು
ಇನ್ನು ಚಿಕ್ಕ ವಯಸ್ಸಿನಿಂದಲೂ ಸಾಕು ಪ್ರಾಣಿಗಳೆಂದರೆ ದೊಡ್ಡ ಮಟ್ಟದ ಪ್ರೀತಿಯನ್ನು ಹೊಂದಿರುವ ಐಂದ್ರಿತಾ ರೇ ಬಾಲ್ಯದಿಂದಲೂ ಸಹ ಸಾಕು ಪ್ರಾಣಿ ಕೇಂದ್ರವೊಂದನ್ನು ಎನ್‌ಜಿಓ ಮಾದರಿಯಲ್ಲಿ ತೆರೆಯುವ ಕನಸನ್ನು ಹೊಂದಿದ್ದೆ ಎಂದು ಹೇಳಿಕೊಂಡರು ಹಾಗೂ ಪ್ರಾಣಿಗಳ ಮೇಲಿನ ಪ್ರೀತಿ ಸಹ ನನ್ನ ಮತ್ತು ದಿಗಂತ್ ಸನಿಹವಾಗಲು ಒಂದು ಕಾರಣ ಎಂದು ಐಂದ್ರಿತಾ ರೇ ತಿಳಿಸಿದರು.

ದಿಗಂತ್ ನಟನೆಯ ಯಾವ ಚಿತ್ರ ಇಷ್ಟ?
ಇನ್ನೂ ಮುಂದುವರಿದು ಮಾತನಾಡಿದ ಐಂದ್ರಿತಾ ರೇ ದಿಗಂತ್ ನಟನೆಯ ಲೈಫು ಇಷ್ಟೇನೆ ಚಿತ್ರ ತಮಗೆ ಅಚ್ಚುಮೆಚ್ಚು ಎಂದು ತಿಳಿಸಿದರು. ಆಗಿನ ಸಮಯಕ್ಕೆ ತುಂಬಾ ಮುಂದುವರಿದಂತಹ ಕತೆಯನ್ನು ನಿರ್ದೇಶಕ ಪವನ್ ಕುಮಾರ್ ಬರೆದಿದ್ದರು, ಹೀಗಾಗಿಯೇ ಆ ಚಿತ್ರ ಇಷ್ಟ ಎಂದು ಐಂದ್ರಿತಾ ರೇ ಹೇಳಿಕೊಂಡರು.

ಇತ್ತೀಚೆಗೆ ನೋಡಿದ ಚಿತ್ರ?
ಇನ್ನು ಇತ್ತೀಚೆಗೆ ಯಾವ ಚಿತ್ರ ನೋಡಿದ್ರಿ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ ಐಂದ್ರಿತಾ ರೇ ಕಾಂತಾರ ನೋಡಿದೆ ಎಂದರು ಹಾಗೂ ಚಿತ್ರದ ಕಂಟೆಂಟ್, ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನ ಎಲ್ಲವೂ ಇಷ್ಟವಾಯಿತು ಎಂದು ತಿಳಿಸಿದರು. ಇನ್ನು ರಿಷಬ್ ಶೆಟ್ಟಿ ತಮ್ಮ ಫ್ಯಾಮಿಲಿ ಫ್ರೆಂಡ್ ಎಂದೂ ಸಹ ತಿಳಿಸಿದರು.