ಸಿನಿಮಾ, ಧಾರಾವಾಹಿ, ವೆಬ್ ಸೀರಿಸ್ ಅಲ್ಲ, ದಿಲೀಪ್ ರಾಜ್ ಹೊಸ ಸಾಹಸ

ಪ್ರತಿದಿನ ಬದಲಾಗುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಈಗ ನಾವು ಇದ್ದೇವೆ. ಸ್ಥಳೀಯ ಭಾಷೆಗಳಿಗೂ ತಂತ್ರಜ್ಞಾನ ಹತ್ತಿರವಾಗುತ್ತಿದೆ. ಬೆರಳ ತುದಿಯಲ್ಲಿ ಪ್ರಪಂಚವೇ ತಿರುಗುತ್ತಿದೆ. ಮನರಂಜನೆ ಕ್ಷೇತ್ರದಲ್ಲಿ ಕೂಡ ಭಾರೀ ಬದಲಾವಣೆಗಳಾಗುತ್ತಿದೆ. ಚಿತ್ರಮಂದಿರಗಳನ್ನು ಮುಚ್ಚಿ ಮನೆಯಲ್ಲೇ ಸಿನಿಮಾ ನೋಡುವಂತಾಗಿದೆ.

ಒಂದ್ಕಾಲದಲ್ಲಿ ಮನರಂಜನೆ ಅಂದರೆ ಕಥೆ, ಕಾದಂಬರಿ ಓದುವುದು, ನಾಟಕ ನೋಡುವುದು ಎನ್ನುವಂತಿತ್ತು. ಬಳಿಕ ನಿಧಾನವಾಗಿ ಸಿನಿಮಾ ಆ ಜಾಗವನ್ನು ಆವರಿಸಿಕೊಂಡಿತ್ತು. ಮನರಂಜನಾ ಕ್ಷೇತ್ರದಲ್ಲಿ ಸಿನಿಮಾ ಮಾಡಿದ ಕ್ರಾಂತಿ ಅಷ್ಟಿಷ್ಟಲ್ಲ. ಬಳಿಕ ಧಾರಾವಾಹಿ ಈಗ ವೆಬ್ ಸೀರಿಸ್ ಟ್ರೆಂಡ್ ನಡೀತಿದೆ. ಇದರಲ್ಲಿ ಕೂಡ ಸಾಕಷ್ಟು ಬದಲಾವಣೆಗಳಾಗುತ್ತಿದೆ. ಇದೀಗ ಮೈಕ್ರೋ ಸೀರಿಸ್ ಅನ್ನುವ ಹೊಸ ಪರಿಕಲ್ಪನೆ ಹುಟ್ಟಿಕೊಂಡಿದೆ. ಕನ್ನಡ ನಿರ್ದೇಶಕ, ನಿರ್ಮಾಪಕ, ನಟ ದಿಲೀಪ್ ರಾಜ್ ಈ ಹಾದಿಯಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

Dileep Raj ready to launch India s First Kannada Micro Web Series with 60 One-Minute Episodes

ಭಾರತದಲ್ಲೇ ಮೈಕ್ರೋ ವೆಬ್‌ ಸೀರಿಸ್ ಕನ್ನಡದಲ್ಲಿ ನಿರ್ಮಾಣವಾಗುತ್ತಿದೆ. ಅಂದರೆ ವೆಬ್ ಸೀರಿಸ್ ರೀತಿಯಲ್ಲೇ ಸಣ್ಣ ಸಣ್ಣ ಎಪಿಸೋಡ್‌ಗಳನ್ನು ಇದರಲ್ಲಿ ನೋಡಬಹುದು. ಆದರೆ ಕಾಲಾವಧಿ 20 ನಿಮಿಷ ಅಥವಾ ಒಂದು ಗಂಟೆ ಇರಲ್ಲ. ಕೇವಲ 1 ನಿಮಿಷದ ಸಣ್ಣ ಸಣ್ಣ ಎಪಿಸೋಡ್‌ಗಳನ್ನು ಇಲ್ಲಿ ತಯಾರಿಸುವ ಪ್ರಯತ್ನ ನಡೀತಿದೆ.

ಕನ್ನಡ ಸಿನಿಮಾಗಳನ್ನು ಕೊಂಡುಕೊಳ್ಳಲು ಓಟಿಟಿ ಸಂಸ್ಥೆಗಳು ಮೀನಾಮೇಷ ಎಣಿಸುತ್ತಿವೆ. ಕನ್ನಡದಲ್ಲಿ ವೆಬ್ ಸೀರಿಸ್ ನಿರ್ಮಾಣ ಮಾಡುವವರಿಲ್ಲ ಎನ್ನುವ ಆರೋಪ ಇದೆ. ಆಗೊಮ್ಮೆ ಈಗೊಮ್ಮೆ ವೆಬ್ ಸೀರಿಸ್ ಬಂದಿರುವುದು ಇದೆ. ಇತ್ತೀಚೆಗೆ 'ಅಯ್ಯನ ಮನೆ' ಎಂಬ ಸಸ್ಪೆನ್ಸ್ ಥ್ರಿಲ್ಲರ್ ವೆಬ್ ಸೀರಿಸ್ ಜೀ5ನಲ್ಲಿ ಸ್ಟ್ರೀಮಿಂಗ್ ಆಗಿ ಸದ್ದು ಮಾಡಿತ್ತು. ಶ್ರುತಿ ನಾಯ್ಡು ನಿರ್ಮಾಣದ ಈ ವೆಬ್ ಸೀರಿಸ್ ಅನ್ನು ರಮೇಶ್ ಇಂದಿರಾ ಕಟ್ಟಿಕೊಟ್ಟಿದ್ದರು. ಬೇರೆ ಭಾಷೆಗಳಿಗೂ ಡಬ್ ಆಗಿ ರಿಲೀಸ್ ಆಗಿತ್ತು.

ಸದ್ಯ ದಿಲೀಪ್ ರಾಜ್ ನಿರ್ಮಿಸಿ ನಿರ್ದೇಶನ ಮಾಡುತ್ತಿರುವ ವೆಬ್ ಸೀರಿಸ್‌ನಲ್ಲಿ ಬಿಗ್‌ಬಾಸ್ ಖ್ಯಾತಿಯ ವಿನಯ್ ಗೌಡ ಹಾಗೂ ಮೋಕ್ಷಿತಾ ಪೈ ನಟಿಸುತ್ತಿದ್ದಾರೆ. ಇಬ್ಬರೂ ಕೂಡ ಬಿಗ್‌ಬಾಸ್ ಕನ್ನಡ ಶೋ ಸೀಸನ್ 11ರಲ್ಲಿ ವಿಜಯ್ ರನ್ನರ್ ಅಪ್ ಆಗಿದ್ದರು. ಅದೇ ರೀತಿ 11ನೇ ಸೀಸನ್‌ನಲ್ಲಿ ಮೋಕ್ಷಿತಾ ರನ್ನರ್ ಆಪ್ ಆಗಿ ಗಮನ ಸೆಳೆದಿದ್ದರು. ಇಬ್ಬರೂ ಗಂಡ-ಹೆಂಡತಿ ಆಗಿ ಈ ಮೈಕ್ರೋ ವೆಬ್ ಸೀರಿಸ್‌ನಲ್ಲಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಅದರ ಸಣ್ಣ ತುಣುಕು ವೈರಲ್ ಆಗಿತ್ತು. ಇದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದರು.

ಈ ಹೊಸ ಪ್ರಯೋಗದ ಬಗ್ಗೆ ದಿಲೀಪ್ ರಾಜ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. "ಇದು ವೆಬ್ ಸೀರಿಸ್ ಕೂಡ ಅಲ್ಲ, ಇದಕ್ಕೆ ಏನು ಹೆಸರು ಕೊಡಬಹುದು ಎಂದು ಗೊತ್ತಿಲ್ಲ. ಸುಮ್ನೆ ಮೈಕ್ರೊ ಸೀರಿಸ್ ಅಂತ ಕರೀತ್ತಿದ್ದಿವಿ. ಇದು ಎಕ್ಸ್‌ಕ್ಲೂಸಿವ್‌ ಆಗಿ ಮೊಬೈಲ್‌ನಲ್ಲಿ ಬರುವಂಥದ್ದು. ವರ್ಟಿಕಲ್ ಫಾರ್ಮೆಟ್‌ನಲ್ಲಿ ಮೊಬೈಲ್‌ಗಾಗಿ ಶೂಟ್ ಮಾಡುತ್ತಿರುವುದು. ಇಡೀ ಭಾರತದಲ್ಲೇ ಹೊಸ ಪ್ರಯೋಗ ಇದು. ಅದರ ಒಂದು ಭಾಗವನ್ನು ನಾವು ನಿರ್ಮಾಣ ಮಾಡುತ್ತಿದ್ದೇವೆ" ಎಂದಿದ್ದಾರೆ.

ಎಷ್ಟು ಎಪಿಸೋಡ್, ಎಷ್ಟು ನಿಮಿಷ ಕಾಲಾವಧಿ ಇರುತ್ತದೆ ಎನ್ನುವ ಬಗ್ಗೆ ದಿಲೀಪ್ ಮಾಹಿತಿ ನೀಡಿದ್ದಾರೆ. "ತಲಾ ಒಂದೊಂದು ನಿಮಿಷದ 60 ಎಪಿಸೋಡ್‌ಗಳು ಇದರಲ್ಲಿ ಇರುತ್ತದೆ. ಓಟಿಟಿ ಅಥವಾ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗೆ ಬರಲ್ಲ, ಅದಕ್ಕಾಗಿ ಒಂದು ಆಪ್ ಸಿದ್ಧವಾಗುತ್ತಿದೆ. ಅಲ್ಲಿ ಮಾತ್ರ ವೀಕ್ಷಣೆಗೆ ಲಭ್ಯವಿರಲಿದೆ. ಆಪ್ ನಿರ್ಮಾಣದ ಕೆಲಸಗಳು ನಡೆಯುತ್ತಿದೆ. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ, ಅದು ಸಂಪೂರ್ಣ ಟೆಕ್ನಿಕಲ್ ಸಂಗತಿ. ಒಟ್ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಆ ಆಪ್‌ನಲ್ಲಿ ಸೀರಿಸ್ ಬರಲಿದೆ" ಎಂದು ತಿಳಿಸಿದ್ದಾರೆ.

"ಒಂದು ಕಥೆ 60 ಎಪಿಸೋಡ್‌ಗಳಾಗಿ ವಿಭಾಗಿಸಿರುತ್ತೇವೆ. ನಾನು ಥ್ರಿಲ್ಲರ್ ಜಾನರ್ ಸೀರಿಸ್ ಕಟ್ಟಿಕೊಡುತ್ತಿದ್ದೇನೆ. 60 ಎಪಿಸೋಡ್‌ಗಳ ಚಿತ್ರೀಕರಣ ನಡೀತಿದೆ. ನನ್ನ ರೀತಿಯಲ್ಲೇ ಬೇರೆ ನಾಲ್ಕು ಜನ ನಿರ್ದೇಶಕರು ಬೇರೆ ಕಥೆಯನ್ನು ಇದೇ ರೀತಿ ತಲಾ ಒಂದು ನಿಮಿಷದ ಎಪಿಸೋಡ್‌ಗಳಾಗಿ ತಯಾರಿಸುತ್ತಿದ್ದಾರೆ. ಅವೆಲ್ಲವೂ ಇದೇ ಆಪ್‌ನಲ್ಲಿ ಬರಲಿದೆ. ನಮ್ಮ ಸೀರಿಸ್‌ನಲ್ಲಿ ವಿನಯ್ ಹಾಗೂ ಮೋಕ್ಷಿತಾ ಗಂಡ-ಹೆಂಡತಿಯಾಗಿ ನಟಿಸುತ್ತಿದ್ದಾರೆ. ಅವರ ನಡುವೆ ಇಡೀ ಸೀರಿಸ್ ಕಥೆ ಸುತ್ತುತ್ತದೆ" ಎಂದು ದಿಲೀಪ್ ರಾಜ್ ಮಾಹಿತಿ ನೀಡಿದ್ದಾರೆ.

ಕೆಲ ಸಿನಿಮಾಗಳಲ್ಲಿ ನಟಿಸಿರುವ ದಿಲೀಪ್ ರಾಜ್ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. 'ಹಿಟ್ಲರ್ ಕಲ್ಯಾಣ' ಧಾರಾವಾಹಿಯನ್ನು ನಿರ್ಮಿಸಿ, ನಟಿಸಿದ್ದರು. ತ್ರಿಶೂಲ್ ಅದಕ್ಕೆ ಆಕ್ಷನ್ ಕಟ್ ಹೇಳಿದ್ದರು. ಇತ್ತೀಚೆಗೆ ಬಂದಿದ್ದ 'ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು' ಚಿತ್ರದಲ್ಲಿ ಕೂಡ ದಿಲೀಪ್ ನಟಿಸಿದ್ದರು. ಇದೀಗ ಕನ್ನಡ ಕಿರುತೆರೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ.

More from Filmibeat

English summary
Kannada actor-director Dileep Raj directing micro web series of 60 one-minute episodes starring Bigg Boss fame Vinay Gowda and Mokshita Pai. Set to stream exclusively on a custom mobile app.;
Read more about: sandalwood web series
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X