ದಿಗಂತ್-ಐಂದ್ರಿತಾ ಮದುವೆ ದಿನವೇ ನಟ ಸುಮಂತ್ ಮದುವೆ.!
Recommended Video

ಸಿನಿಮಾ ಜಗತ್ತಿನಲ್ಲಿ ಈಗ ಸರಣಿ ಮದುವೆಗಳು ನಡೆಯುತ್ತಿದೆ. ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಡಿಸೆಂಬರ್ 2 ರಂದು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಜೋಡಿ ವೈವಾಹಿಕ ಜೀವನ ಆರಂಭಿಸಲಿದ್ದಾರೆ.
ಈ ಕಡೆ ಕನ್ನಡದ ಬ್ಯೂಟಿಫುಲ್ ಜೋಡಿ ಐಂದ್ರಿತಾ ರೈ ಮತ್ತು ದೂದ್ ಪೇಡಾ ದಿಗಂತ್ ಡಿಸೆಂಬರ್ 12 ರಂದು ಸಪ್ತಪದಿ ತುಳಿಯಲಿದ್ದಾರೆ. ಈಗಾಗಲೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ಜೋಡಿ ಇತ್ತೀಚಿಗಷ್ಟೆ ಅಧಿಕೃತವಾಗಿ ಈ ವಿಷ್ಯವನ್ನ ಬಹಿರಂಗಪಡಿಸಿತ್ತು.
ಇದರ ಬೆನ್ನಲ್ಲೆ ಈಗ ಕನ್ನಡದ ಮತ್ತೊಬ್ಬ ನಟನ ಮದುವೆಯ ಸುದ್ದಿ ಹೊರಬಿದ್ದಿದೆ. ವಿಶೇಷ ಅಂದ್ರೆ, ದಿಗಂತ್ ಮತ್ತು ಐಂದ್ರಿತಾ ಮದುವೆ ದಿನವೇ ಸುಮಂತ್ ಶೈಲೇಂದ್ರ ಹಸೆಮಣೆ ಏರುತ್ತಿದ್ದಾರೆ. ಅಷ್ಟಕ್ಕೂ, ಸುಮಂತ್ ಮದುವೆಯಾಗಲಿರುವ ಆ ಹುಡುಗಿ ಯಾರು.? ಮುಂದೆ ಓದಿ....

ಡಿಸೆಂಬರ್ 12ಕ್ಕೆ ವಿವಾಹ
ಖ್ಯಾತ ನಿರ್ಮಾಪಕ ಶೈಲೇಂದ್ರ ಬಾಬು ಅವರ ಮಗ ಸುಮಂತ್ ಶೈಲೇಂದ್ರ ದಾಂಪತ್ಯ ಜೀವನಕ್ಕೆ ಸಜ್ಜಾಗಿದ್ದು, ಡಿಸೆಂಬರ್ 12 ರಂದು ಬೆಂಗಳೂರಿನಲ್ಲಿ ವಿವಾಹ ಜರುಗಲಿದೆ.

ಬೆಂಗಳೂರಿನಲ್ಲಿ ಆರತಕ್ಷತೆ
ಡಿಸೆಂಬರ್ 12 ರಂದು ಬೆಂಗಳೂರಿನಲ್ಲಿ ಮದುವೆ ನಡೆಯಲಿದ್ದು, ಬೆಂಗಳೂರಿನ ಪ್ಯಾಲೇಸ್ ನಲ್ಲಿ ಡಿಸೆಂಬರ್ 11ಕ್ಕೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಈ ಹಿಂದೆಯೇ ನಿಶ್ಚಿತಾರ್ಥ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಆದ್ರೆ, ಎಲ್ಲಿಯೂ ಸುದ್ದಿಯಾಗಿರಲಿಲ್ಲ.

ಸಮಂತ್ ಜೋಡಿ ಯಾರು.?
ಶ್ರೀನಿವಾಸ ನರಪ್ಪ ಮತ್ತು ಚಂದ್ರಕಲಾ ದಂಪತಿಯ ಮಗಳು ಅನಿತಾ ಅವರನ್ನ ಸುಮಂತ್ ವರಿಸಲಿದ್ದಾರೆ ಎಂಬ ಮಾಹಿತಿ ಬಿಟ್ಟರೇ, ಸದ್ಯಕ್ಕೆ ಬೇರೆ ಯಾವ ವಿಷ್ಯವೂ ಬಹಿರಂಗವಾಗಿಲ್ಲ.

ಟಾಲಿವುಡ್ ನಲ್ಲಿ ಸುಮಂತ್
ಸದ್ಯ, ತೆಲುಗು ಚಿತ್ರದಲ್ಲಿ ಸುಮಂತ್ ಶೈಲೇಂದ್ರ ಅಭಿನಯಿಸುತ್ತಿದ್ದು, 'ಬ್ರಾಂಡ್ ಬಾಬು' ಸಿನಿಮಾ ಬಿಡುಗಡೆಯಾಗಿದೆ. ಅದಕ್ಕೂ ಮುಂಚೆ 'ಲೀ' ಚಿತ್ರದಲ್ಲಿ ಸುಮಂತ್ ಕೊನೆಯ ಸಲ ಕಾಣಿಸಿಕೊಂಡಿದ್ದರು.


Click it and Unblock the Notifications











