'ಸಂಜು ವೆಡ್ಸ್ ಗೀತಾ 2' ಚಿತ್ರಕ್ಕೆ ರಮ್ಯಾ ಅಲ್ಲ ನಾಯಕಿ; ಈ ಸ್ಟಾರ್ ನಟಿ ಆಗ್ತಾರಾ ಗೀತಾ?

ಕನ್ನಡ ಚಿತ್ರರಂಗದಲ್ಲಿ ಹೆಚ್ಚೇನೂ ನಿರೀಕ್ಷೆ ಇಲ್ಲದೇ ಬಿಡುಗಡೆಯಾಗಿ ಇತಿಹಾಸ ಸೃಷ್ಟಿಸಿದ ಸಿನಿಮಾಗಳ ಪಟ್ಟಿಯಲ್ಲಿ ಸಂಜು ವೆಡ್ಸ್ ಗೀತಾ ಸಹ ಒಂದು. 2011ರ ಏಪ್ರಿಲ್ 1ರಂದು ಬಿಡುಗಡೆಗೊಂಡಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿತ್ತು. ಹಾಡುಗಳ ಮೂಲಕ ಭರ್ಜರಿ ಸದ್ದು ಮಾಡಿದ್ದ ಸಂಜು ವೆಡ್ಸ್ ಗೀತಾ ಶತ ದಿನೋತ್ಸವವನ್ನೂ ಸಹ ಆಚರಿಸಿಕೊಂಡಿತ್ತು.

ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ನಾಯಕ ಹಾಗೂ ನಾಯಕಿಯಾಗಿ ಮಿಂಚಿದ್ದರು. ಸಂಜು ಹಾಗೂ ಗೀತಾ ದುರಂತ ಪ್ರೇಮಕಥೆ ಇಂದಿಗೂ ಸಹ ಸಿನಿ ರಸಿಕರ ಫೇವರಿಟ್ ಚಿತ್ರಗಳ ಪಟ್ಟಿಯಲ್ಲಿ ಒಂದಾಗಿದ್ದು, ಈ ಚಿತ್ರದ ಮುಂದುವರಿದ ಭಾಗ ಯಾವಾಗ ಬರಲಿದೆ ಎಂಬ ಪ್ರಶ್ನೆ ಈ ಹಿಂದಿನಿಂದಲೂ ಸಿನಿ ರಸಿಕರಿಂದ ಕೇಳಿ ಬರುತ್ತಿತ್ತು.

Dimple Queen Rachita Ram likely to replace Ramya in Sanju Weds Geetha sequel

ಈ ಪ್ರಶ್ನೆಗೆ ನಿರ್ದೇಶಕ ನಾಗಶೇಖರ್ ಈ ವರ್ಸ ಶ್ರೀನಗರ ಕಿಟ್ಟಿ ಹುಟ್ಟುಹಬ್ಬದ ದಿನದಂದು ಉತ್ತರಿಸಿದ್ದು, ಹುಟ್ಟುಹಬ್ಬದ ಅಂಗವಾಗಿ ಶುಭಾಶಯ ಕೋರಿ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿ ಸಂಜು ವೆಡ್ಸ್ ಗೀತಾ ಸೀಕ್ವೆಲ್ ಬರುತ್ತಿದೆ ಎಂಬ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು.

ಈ ಚಿತ್ರಕ್ಕೆ ಸಂಜು ವೆಡ್ಸ್ ಗೀತಾ 2 ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಆದರೆ ಈ ಪೋಸ್ಟರ್‌ನಲ್ಲಿ ಎಲ್ಲಿಯೂ ಸಹ ನಾಯಕಿ ಯಾರು ಎಂಬುದನ್ನು ನಿರ್ದೇಶಕರು ಬಿಟ್ಟುಕೊಟ್ಟಿರಲಿಲ್ಲ. ಚಿತ್ರದ ಪೋಸ್ಟರ್‌ನ ಎಡಭಾಗದ ಮೇಲೆ 'ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅರ್ಪಿಸುವ' ಎಂಬ ಬರಹವನ್ನು ಕಂಡಿದ್ದ ಹಲವಾರು ಸಿನಿ ರಸಿಕರು ಹಾಗಾದರೆ ಈ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ನಟಿಸುವುದು ಅನುಮಾನ ಬಿಡಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಅದರಂತೆ ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಚಿತ್ರತಂಡ ಎಲ್ಲಿಯೂ ಸಹ ಈ ಕುರಿತು ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳದೇ ಇದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವರು ರಚಿತಾ ರಾಮ್ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ಸದ್ಯ ಈ ಸುದ್ದಿಯನ್ನು ಕೇಳಿರುವ ಸಿನಿ ರಸಿಕರು ಈ ಪಾತ್ರಕ್ಕೆ ರಮ್ಯಾನೇ ಸೂಕ್ತ, ರಚಿತಾ ರಾಮ್ ಹೊಂದಿಕೊಳ್ತಾರಾ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಜತೆಗೆ ಬೇಸರವನ್ನೂ ಸಹ ಹೊರಹಾಕಿದ್ದಾರೆ. ನಟಿ ರಮ್ಯಾ ಈ ಹಿಂದೆ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದಿಂದಲೂ ಸಹ ಇದೇ ರೀತಿ ಹಿಂದೆ ಸರಿದಿದ್ದರು. ರಾಜ್ ಬಿ ಶೆಟ್ಟಿ ನಟನೆಯ ಈ ಚಿತ್ರದಲ್ಲಿ ಮೊದಲಿಗೆ ರಮ್ಯಾ ನಾಯಕಿಯಾಗಿದ್ದರು. ಆದರೆ ಬಳಿಕ ರಮ್ಯಾ ಈ ಚಿತ್ರದಿಂದ ನಾಯಕಿಯಾಗಿ ಹಿಂದೆ ಸರಿದು ಕೇವಲ ನಿರ್ಮಾಪಕಿಯಾಗಿ ಉಳಿದುಕೊಂಡಿದ್ದರು.

ಈ ಮೂಲಕ ರಮ್ಯಾ 'ಉತ್ತರಕಾಂಡ' ಚಿತ್ರದ ಮೂಲಕವೇ ನಾಯಕಿಯಾಗಿ ಕಮ್‌ಬ್ಯಾಕ್ ಮಾಡುವುದು ಪಕ್ಕಾ ಆಗಿದ್ದು, ಅಲ್ಲಿಯವರೆಗೂ ರಮ್ಯಾ ಅವರನ್ನು ನಾಯಕಿಯಾಗಿ ನೋಡುವ ಬಯಕೆ ಹಾಗೆಯೇ ಉಳಿದುಕೊಳ್ಳುವುದು ಖಚಿತವಾಗಿದೆ. ನಟಿ ರಮ್ಯಾ 'ಉತ್ತರಕಾಂಡ' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಡಾಲಿ ಧನಂಜಯ್ ನಾಯಕನಾಗಿ ನಟಿಸಲಿದ್ದಾರೆ. ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಸಹ ಅದ್ದೂರಿಯಾಗಿ ನಡೆದಿದ್ದು, ಚಿತ್ರಕ್ಕೆ ರತ್ನನ್ ಪ್ರಪಂಚ ಖ್ಯಾತಿಯ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಲಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ನಟಿ ರಮ್ಯಾ ಹೊಸಬರ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಎಂಬ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಈ ಚಿತ್ರದ ಟ್ರೈಲರ್‌ನಲ್ಲಿ ರಮ್ಯಾ ಕಾಣಿಸಿಕೊಂಡಿದ್ದರು. ಈ ಟ್ರೈಲರ್‌ನಲ್ಲಿ ಪ್ರಾಧ್ಯಾಪಕಿಯಾಗಿ ರಮ್ಯಾ ಕಾಣಿಸಿಕೊಂಡಿದ್ರು. ಆದರೆ ಈ ಚಿತ್ರದಲ್ಲಿನ ತಮ್ಮ ದೃಶ್ಯಗಳು ಹಾಗೂ ಫೋಟೊಗಳನ್ನು ಚಿತ್ರತಂಡ ತಮ್ಮ ಅನುಮತಿ ಇಲ್ಲದೇ ಬಳಸಿಕೊಂಡಿದೆ ಎಂದು ರಮ್ಯಾ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದೆ ಎಂಬ ಸುದ್ದಿ ಸಹ ಹರಿದಾಡುತ್ತಿದೆ. ಹೀಗೆ ರಮ್ಯಾ ಕಮ್‌ಬ್ಯಾಕ್ ವಿಚಾರ ಸಾಕಷ್ಟು ವಿವಾದ ಹಾಗೂ ಸುದ್ದಿಗೀಡಾಗಿದೆ.

More from Filmibeat

English summary
Dimple Queen Rachita Ram likely to replace Ramya in Sanju Weds Geetha sequel. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X