ನಿಖಿಲ್ ಕುಮಾರ್ ಗೆ ದಿನಕರ್ ತೂಗುದೀಪ ನಿರ್ದೇಶನ: ಸ್ಪಷ್ಟನೆ ನೀಡಿದ ದಿನಕರ್

By ಫಿಲ್ಮ್ ಡೆಸ್ಕ್

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ದಿನಕರ್ ತೂಗುದೀಪ ಹೊಸ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಜೊತೆ ಜೊತೆಯಲಿ, ನವಗ್ರಹ, ಸಾರಥಿ, ಲೈಫ್ ಜೊತೆ ಒಂದು ಸೆಲ್ಫಿ ಸಿನಿಮಾಗಳನ್ನು ಮಾಡಿರುವ ದಿನಕರ್ ಸಹೋದರ ದರ್ಶನ್ ಗೆ 'ಸರ್ವಾಂತರರ್ಯಾಮಿ' ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಹರಿದಾಡುತ್ತತ್ತು.

Recommended Video

ಮಾಧ್ಯಮಗಳಿಗೆ ಕ್ಲಾಸ್ ತೆಗೆದುಕೊಂಡ ದಿನಕರ್ ತೂಗುದೀಪ | Filmibeat Kannada

ಆದರೆ ಸರ್ವಾಂತರರ್ಯಾಮಿ ಬಗ್ಗೆ ಯಾವುದೇ ಹೊಸ ಅಪ್ ಡೇಟ್ ಸಿಕ್ಕಿರಲಿಲ್ಲ. ಈ ನಡುವೆ ದಿನಕರ್ ಸ್ಯಾಂಡಲ್ ವುಡ್ ನ ಮತ್ತೋರ್ವ ಹೀರೋಗೆ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಹೌದು, ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಗೆ ದಿನಕರ್ ತೂಗುದೀಪ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಈಗಾಗಲೇ ಕಥೆ ಬರೆಯಲು ಪ್ರಾರಂಭಿಸಿದ್ದು, ಸ್ಕ್ರಿಪ್ಟ್ ವರ್ಕ್ ಮುಗಿಯುತ್ತಿದ್ದಂತೆ ಸಿನಿಮಾ ಪ್ರಾರಂಭಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಿರ್ದೇಶಕ ದಿನಕರ್ ಹೊಸ ಸಿನಿಮಾ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹೊಸ ಚಿತ್ರಕ್ಕೆ ಸ್ಕ್ರಿಪ್ಟ್ ತಯಾರಿಯಲ್ಲಿದ್ದೇನೆ. ಆದರೆ ಇನ್ನು ಕಲಾವಿದರ ಆಯ್ಕೆ ಅಂತಿಮವಾಗಿಲ್ಲ. ಸಳ್ಳು ಸುದ್ದಿಯನ್ನು ಹಬ್ಬಿಸುವವರಿಗೆ ಶೋಭೆ ತರುವುದಿಲ್ಲ ಎಂದು ಗರಂ ಆಗಿದ್ದಾರೆ.

Dinakar Thoogudeepa Clarification About His New Movie

ಈ ಬಗ್ಗೆ ದಿನಕರ್ ತೂಗುದೀಪ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ, 'ನಾನು ನನ್ನ ಹೊಸ ಚಿತ್ರಕ್ಕೆ ಸ್ಕ್ರಿಪ್ಟ್ ತಯಾರಿಯಲ್ಲಿದ್ದೇನೆ. ಇದಕ್ಕೆ ಕಲಾವಿದರ ಆಯ್ಕೆ ಇನ್ನು ಅಂತಿಮವಾಗಿಲ್ಲ. ಆದರೆ ಕೆಲವು ಮೀಡಿಯಾ ವೆಬ್ ಸೈಟ್ ಗಳು ಹಾಗೂ ಚಾನೆಲ್ ಗಳು ಇದನ್ನು ತಿಳಿದು ಕೊಳ್ಳದೆ ತಮಗೆ ಇಷ್ಟ ಬಂದವರ ಹೆಸರನ್ನು ಇಲ್ಲಿ ಸೇರಿಸಿ ಸುಳ್ಳು ಸುದ್ದಿಯನ್ನು ಹಬ್ಬಿಸುವುದು, ಅವರಿಗೆ ಶೋಭೆ ತರುವುದಿಲ್ಲ. ಯಾವುದೇ ವಿಷಯವಾಗಲಿ, ಅದಕ್ಕೆ ಸಂಬಂಧಪಟ್ಟವರನ್ನು ಸಂಪರ್ಕಿಸದೇ ಪ್ರಕಟಿಸುವುದು ಉಚಿತವಲ್ಲ. ಚಿತ್ರದ ಎಲ್ಲ ಪ್ರಿ-ಪ್ರೊಡಕ್ಷನ್ ಕೆಲಸಗಳು ಮುಗಿದ ಮೇಲೆ ನಾನೇ ಅಧಿಕೃತವಾಗಿ ಹೇಳಿಕೆ ನೀಡುತ್ತೇನೆ' ಎಂದು ಹೇಳಿದ್ದಾರೆ.

ಅಂದ್ಮೇಲೆ ದಿನಕರ್ ಮುಂದಿನ ಸಿನಿಮಾ ಯಾರ ಜೊತೆ ಎನ್ನುವುದು ಕುತೂಹಲ ಮೂಡಿಸಿದೆ. ಲೈಫ್ ಜೊತೆ ಒಂದು ಸೆಲ್ಫಿ ಸಿನಿಮಾ ಬಳಿಕ ದಿನಕರ್ ಮತ್ತೆ ಸಿನಿಮಾ ಮಾಡಿಲ್ಲ. ಇದೀಗ ಹೊಸ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ.

More from Filmibeat

English summary
Director Dinakar Thoogudeepa clarification about his new movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X