ಪುನೀತ್‌ಗೆ ದಿನಕರ್ ತೂಗುದೀಪ ಮಾಡಬೇಕಿದ್ದ ಸಿನಿಮಾ ವಿರಾಟ್ ಪಾಲು?
ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನಕ್ಕೂ ಮುನ್ನ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಅದರೆ ಅಪ್ಪು ಈಗ ಇಲ್ಲ. ಹಾಗಾಗಿ ಆ ಚಿತ್ರತಂಡಗಳು ಅನಿವಾರ್ಯವಾಗಿ ಬೇರೆ ಹಾದಿಯಲ್ಲಿ ಸಾಗುತ್ತಿವೆ. ನಿರ್ದೇಶಕ ದಿನಕರ್ ತೂಗುದೀಪ ಅವರು ಕೂಡ ಈಗ ಬೇರೆ ಸಿನಿಮಾ ಮಾಡಲು ಮುಂದಾಗಿದ್ದಾರೆ.
ನಿರ್ದೇಶಕ ದಿನಕರ್ ತೂಗುದೀಪ ಅವರು ನಿರ್ದೇಶನದ ಮುಂದಿನ ಚಿತ್ರ ಪ್ರಕಟವಾಗಿದೆ. ಈ ಚಿತ್ರಕ್ಕೆ ನಾಯಕ ನಟನ ಆಯ್ಕೆ ಕೂಡ ಆಗಿದೆ. ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ವಿರಾಟ್‌ಗೆ ದಿನಕರ್ ನಿರ್ದೇಶನ ಮಾಡುತ್ತಿದ್ದಾರೆ. ಇದು ವಿರಾಟ್ 3ನೇ ಸಿನಿಮಾ. ಮೂರನೇ ಚಿತ್ರವೇ ಇಷ್ಟು ದೊಡ್ಡ ಪ್ರಾಜೆಕ್ಟ್ ಆಗಿರುವ ಬಗ್ಗೆ ವಿರಾಟ್ ಸಂತಸ ಹಂಚಿಕೊಂಡಿದ್ದಾರೆ.
ಇಂದು ಮಾರ್ಚ್(11) ನಟ ವಿರಾಟ್ ಹುಟ್ಟುಹಬ್ಬ. ಹಾಗಾಗಿ ಚಿತ್ರವನ್ನು ಪ್ರಕಟ ಮಾಡಲಾಗಿದೆ. ವಿರಾಟ್ ಫೋಟೋ ಇರುವ ಒಂದು ಪೋಸ್ಟರ್ ರಿಲೀಸ್ ಮಾಡಲಾಗಿದೆ. ಚಿತ್ರದ ಟೈಟಲ್ ಇನ್ನೂ ರಿವೀಲ್ ಆಗಿಲ್ಲ. ಜಯಣ್ಣ- ಭೋಗೇಂದ್ರ ಕಂಬೈನ್ಸ್ ಅವರ 24ನೇ ಸಿನಿಮಾ ಇದು. ಸದ್ಯ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ 'ಪ್ರೊಡಕ್ಷನ್ 24' ಎಂದು ಮಾತ್ರ ಬರೆಯಲಾಗಿದೆ.

ದಿನಕರ್ ಅಪ್ಪುಗೆ ಸಿನಿಮಾ ಮಾಡಲು ಸಾಧ್ಯ ಆಗಲೇ ಇಲ್ಲ!
ನಟ ಪುನೀತ್ ರಾಜ್‌ಕುಮಾರ್ ಮತ್ತು ನಿರ್ದೇಶಕ ದಿನಕರ್ ತೂಗುದೀಪ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಬೇಕಿತ್ತು. ಈ ಹಿಂದೆ ಸಿನಿಮಾ ಅಧಿಕೃತವಾಗಿ ಲಾಂಚ್ ಕೂಡ ಆಗಿದೆ. ಮೊದಲ ಬಾರಿಗೆ ದಿನಕರ್ ಅಪ್ಪುಗೆ ನಿರ್ದೇಶನ ಮಾಡಲು ಮುಂದಾಗಿದ್ದರು, ಆದರೆ ಅಪ್ಪು ಅಗಲಿಕೆಯ ಕಾರಣ ಅದು ಸಾಧ್ಯ ಆಗಲಿಲ್ಲ. ಜಯಣ್ಣ- ಭೋಗೇಂದ್ರ ಅವರ ನಿರ್ಮಾಣದ 24ನೇ ಸಿನಿಮಾ ಇದಾಗಿದೆ. ಆದರೆ ಅಪ್ಪು ಅಗಲಿಕೆ ಕಾರಣ ಈ ಚಿತ್ರವನ್ನು ಮಾಡಲು ಸಾಧ್ಯವೇ ಆಗಲಿಲ್ಲ. ಆದರೆ ಈಗ ಇದೆ ಬ್ಯಾನರ್‌ನಲ್ಲಿ 24ನೇ ಚಿತ್ರವನ್ನು ನಟ ವಿರಾಟ್‌ಗೆ ಮಾಡಲಾಗುತ್ತಿದೆ.

ಪುನೀತ್‌ಗಾಗಿ ಮಾಡಿದ್ದ ಕಥೆಯಲ್ಲಿ ವಿರಾಟ್?
ಇಲ್ಲಿ ನಿರ್ದೇಶಕ ದಿನಕರ್ ಇದ್ದಾರೆ, ನಿರ್ಮಾಣ ಸಂಸ್ಥೆ ಜಯಣ್ಣ ಕಂಬೈನ್ಸ್ ಇದೆ ಆದರೆ ಇಲ್ಲದೇ ಇರುವುದು ಮಾತ್ರ ನಟ ಪುನೀತ್ ರಾಜ್‌ಕುಮಾರ್. ಅವರ ಹೆಸರಿನ ಜಾಗದಲ್ಲಿ ನಟ ವಿರಾಟ್ ಹೆಸರು ಬಂದಿದೆ. ಹಾಗಾಗಿ ಈ ಸಿನಿಮಾ ದಿನಕರ್ ಅವರು ಅಪ್ಪುಗಾಗಿ ಮಾಡಿಕೊಂಡಿದ್ದ ಕಥೆ ಇರಬಹುದು ಎನ್ನುವ ಸುದ್ದಿ ಹಬ್ಬಿದೆ ಅಥವಾ ವಿರಾಟ್‌ಗಾಗಿ ದಿನಕರ್ ಅವರು ಮಾಡಿರುವ ಹೊಸ ಕಥೆ ಇದ್ದರು ಇರಬಹುದು. ಆದರೆ ಈ ಬಗ್ಗೆ ಚಿತ್ರತಂಡ ಏನನ್ನು ಹೇಳಿಕೊಂಡಿಲ್ಲ. ಸದ್ಯ ಪೋಸ್ಟರ್ ಬಿಟ್ಟರೆ ಮತ್ತೇನು ಹೆಚ್ಚಿನ ವಿವರ ಹಂಚಿಕೊಂಡಿಲ್ಲ.

ಸಿಕ್ಕಾಪಟ್ಟೆ ಖುಷಿಯಲ್ಲಿ ನಟ ವಿರಾಟ್!
ತಮ್ಮ ಈ ಹೊಸ ಚಿತ್ರದ ಬಗ್ಗೆ ನಟ ವಿರಾಟ್ ಫಿಲ್ಮಿಬೀಟ್ ಜೊತೆಗೆ ಮಾತನಾಡಿದ್ದಾರೆ. " ಜಯಣ್ಣ-ಭೋಗೇಂದ್ರ ಅವರ ನಿರ್ಮಾಣದಲ್ಲಿ ಸಿನಿಮಾ ಮಾಡಬೇಕು ಅನ್ನೋದು ನನ್ನ ದೊಡ್ಡ ಕನಸತ್ತು, ಅದು ಈಗ ನೆರವೇರುತ್ತಿದೆ. ದಿನಕರ್ ಅವರು ನಿರ್ದೇಶನದಲ್ಲಿ ನಟಿಸುವ ಅದೃಷ್ಟ ಸಿಕ್ಕಿದೆ. ಈ ಅವಕಾಶ ಕೊಟ್ಟಿದ್ದಕ್ಕೆ ನಾನು ಚಿರಋಣಿ." ಎಂದು ಹೇಳಿದರು. ವಿರಾಟ್ ಅಭಿನಯದ ಮೂರನೇ ಸಿನಿಮಾ ಇದು. 'ಕಿಸ್' ಚಿತ್ರದ ಬಳಿಕ ನಿರ್ದೇಶಕ ಎಪಿ ಅರ್ಜುನ್ ನಿರ್ದೇಶನದಲ್ಲೇ 'ಅದ್ದೂರಿ ಲವ್ವರ್' ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಈಗ ಇದು ಮೂರನೇ ಚಿತ್ರ. ವಿರಾಟ್ ಹುಟ್ಟುಹಬ್ಬಕ್ಕಾಗಿ ಚಿತ್ರವನ್ನು ಪ್ರಕಟ ಮಾಡಲಾಗಿದೆ. ಆದರೆ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ.

ದಿನಕರ್ ನಿರ್ದೇಶನದ ಬಗ್ಗೆ ನಿರೀಕ್ಷೆ!
ಇನ್ನು ನಿರ್ದೇಶಕ ದಿನಕರ್ ನಿರ್ದೇಶನದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇದೆ. ಯಾಕೆಂದರೆ ನಿರ್ದೇಶನದ ಮೂಲಕ ಹಿಟ್ ಕೊಟ್ಟ ಹಲವು ವರ್ಷಗಳೇ ಕಳೆದಿವೆ. ಜೊತೆ ಜೊತೆಯಲಿ, ಸಾರಥಿ ಅಂತಹ ಚಿತ್ರಗಳನ್ನು ಮಾಡಿರುವ ದಿನಕರ್ ಅವರು ನಂತರ ಒಂದಷ್ಟು ಸಿನಿಮಾ ಮಾಡಿದರಾದರು, ಯಾವ ಪ್ರಯೋಜನ ಆಗಿಲ್ಲ. ಹಾಗಾಗಿ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ಟೈಟಲ್ ರಿವೀಲ್ ಆಗಲಿದೆ.


Click it and Unblock the Notifications











