»   » ದರ್ಶನ್ ಸಹೋದರ ದಿನಕರ್ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದು ಸಂಗತಿ

ದರ್ಶನ್ ಸಹೋದರ ದಿನಕರ್ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದು ಸಂಗತಿ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಕನ್ನಡದ ಯಶಸ್ವಿ ನಿರ್ದೇಶಕ. ಇತ್ತೀಚೆಗಷ್ಟೇ ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರದ ಮೂಲಕ ಖಳನಾಯಕನಾಗಿ ತೆರೆಮೇಲೆ ಮಿಂಚಿದ್ದರು. ಅದಕ್ಕೂ ಮುಂಚೆ ದಿನಕರ್ ಯಾವ ಚಿತ್ರದಲ್ಲೂ ಅಭಿನಯಿಸರಲಿಲ್ಲವಂತೆ. ಒಂದು ಸಿನಿಮಾಗಾಗಿ ಬಣ್ಣ ಹಚ್ಚಿದ್ದರೂ ಅದು ಬಿಡುಗಡೆಯಾಗಿರಲಿಲ್ಲ ಎನ್ನುವುದು ಸ್ವತಃ ದಿನಕರ್ ಅವರೇ ಸಂದರ್ಶನಗಳಲ್ಲಿ ಹೇಳಿದ್ದರು.

ಅಚ್ಚರಿ ಅಂದ್ರೆ, ದಿನಕರ್ ತೂಗುದೀಪ 2004ರಲ್ಲೇ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಪೋಷಕ ನಟನಾಗಿ ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಆ ಚಿತ್ರದ ಹೆಸರು 'ಅಯ್ಯೋ ಪಾಂಡು'.

ಇದಕ್ಕೆ ನೋಡಿ 'ಡಿ' ಬಾಸ್ ದರ್ಶನ್ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು.!

Dinakar Thoogudeepa Was Acted in Ayyo Pandu

ಪಾಪಾ ಪಾಂಡು ಖ್ಯಾತಿಯ ಚಿದಾನಂದ್ ನಾಯಕನಾಗಿ ಅಭಿನಯಿಸಿದ್ದ 'ಅಯ್ಯೋ ಪಾಂಡು' ಚಿತ್ರದಲ್ಲಿ ದಿನಕರ್ ತೂಗುದೀಪ ಅವರು ಸಹಕಲಾವಿದನಾಗಿ ಬಣ್ಣ ಹಚ್ಚಿದ್ದಾರೆ. ಬಿ.ಎಸ್ ಶಿವು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಚಕ್ರಪಾಣಿ ನಿರ್ಮಾಣ ಮಾಡಿದ್ದರು.

Dinakar Thoogudeepa Was Acted in Ayyo Pandu

'ಚಕ್ರವರ್ತಿ' ನಂತರ ಮತ್ತೊಂದು ಚಿತ್ರದಲ್ಲಿ ದಿನಕರ್ ವಿಲನ್!

'ಅಯೋ ಪಾಂಡು' ಚಿತ್ರದಲ್ಲಿ ದಿನಕರ್ ಅಭಿನಯಿಸಿದ್ದ ದೃಶ್ಯದ ಫೋಟೋ ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 'ಚಕ್ರವರ್ತಿ' ನಂತರ ಸದ್ಯ 'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರವನ್ನ ನಿರ್ದೇಶನ ಮಾಡುತ್ತಿರುವ ದಿನಕರ್ ತೂಗುದೀಪ ಅವರು, ಈ ಮಧ್ಯೆ ಕಮಲ್ ಸಾರಥಿ ನಿರ್ದೇಶನದ 'ಗಾಂಧಿ ಕ್ಲಾಸ್' ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಅಭಿನಯಿಸಿದ್ದಾರೆ.

English summary
Challenging star Darshan's Brother Dinakar Thoogudeepa Was Acted in 'Ayyo Pandu' Movie on 2004. The Movie Directed by BS Shivu and Chidanand is In Lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada