ಅಶ್ವಿನಿ ಪುನೀತ್- ವಿಜಯ್ ಕಿರಗಂದೂರ್ ಲಾಂಚ್ ಮಾಡಿದ ದಿನಕರ್ ಸಿನಿಮಾ ಟೈಟಲ್ ಏನು?

ಪವರ್ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಆಶಿರ್ವಾದದೊಂದಿಗೆ ದಿನಕರ್ ತೂಗುದೀಪ ನಿರ್ದೇಶನದ ಸಿನಿಮಾ ಟೈಟಲ್ ಅನೌನ್ಸ್ ಆಗಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರ್ ಸಿನಿಮಾ ಟೈಟಲ್ ರಿವೀಲ್ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.

ದಿನಕರ್ ತೂಗುದೀಪ ನಿರ್ದೇಶನದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಬೇಕಿತ್ತು. ಈ ಬಗ್ಗೆ ಮಾತುಕತೆ ಕೂಡ ನಡೆದಿತ್ತು. ಈ ಬಗ್ಗೆ ಅಧಿಕೃತ ಮಾಹಿತಿ ಕೂಡ ಸಿಕ್ಕಿತ್ತು. 'ಜೇಮ್ಸ್‌' ನಂತರ ಆ ಸಿನಿಮಾ ಶುರುವಾಗುವ ನಿರೀಕ್ಷೆ ಇತ್ತು. ಆದರೆ ಸಿನಿಮಾ ಸೆಟ್ಟೇರುವುದಕ್ಕು ಮುನ್ನ ಅಪ್ಪು ಬಾರದ ಲೋಕಕ್ಕೆ ಪಯಣ ಬೆಳೆಸಿಬಿಟ್ಟರು. ಇದೀಗ ಜಯಣ್ಣ ಕಂಬೈನ್ಸ್ ಬ್ಯಾನರ್‌ ಚಿತ್ರಕ್ಕೆ ದಿನಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಯುವ ನಟ ವಿರಾಟ್‌ ಚಿತ್ರಕ್ಕೆ ನಾಯಕನಾಗಿ ಆಯ್ಕೆ ಆಗಿದ್ದು ನಾಯಕಿಯಾಗಿ ಸಂಜನಾ ಆನಂದ್ ನಟಿಸಲಿದ್ದಾರೆ.

4 ದಿನ ಹಿಂದೆಯೇ ಸಿನಿಮಾ ಟೈಟಲ್ ಲಾಂಚ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಿತ್ತು. ಅದರಂತೆ ಈಗ ಟೈಟಲ್ ಲಾಂಚ್ ಆಗಿದೆ. ಸದ್ದಿಲ್ಲದೇ ಮುಹೂರ್ತ ಮಾಡಿ ಚಿತ್ರೀಕರಣ ಆರಂಭಿಸಿದ್ದ ತಂಡ ಶೇಕಡಾ 60ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿದೆ.

ಚಿತ್ರಕ್ಕೆ ಸಿಕ್ತು 'ರಾಯಲ್' ಟೈಟಲ್

ಚಿತ್ರಕ್ಕೆ ಸಿಕ್ತು 'ರಾಯಲ್' ಟೈಟಲ್

ಹೌದು 'ರಾಯಲ್' ಎನ್ನುವ ಟೈಟಲ್‌ ಅನ್ನು ದಿನಕರ್ ತಮ್ಮ ಮುಂದಿನ ಚಿತ್ರಕ್ಕೆ ಫಿಕ್ಸ್ ಮಾಡಿದ್ದಾರೆ. ನೋಟಿನ ರಾಶಿಯ ಮಧ್ಯೆ ಹೀರೊ ವಿರಾಟ್ ಮಹಾರಾಜ ಚೇರ್ ಮೇಲೆ ಕೂತು ನೋಟಿನ ಕಂತೆ ಹಿಡಿದು ಪೋಸ್ ನೀಡಿದ್ದಾರೆ. ದುಡ್ಡಿನ ಹಿಂದೆ ಬಿದ್ದ ನಾಯಕನ ಕಥೆ ಇದು ಎನ್ನುವುದು ಟೈಟಲ್ ನೋಡಿದರೆ ಅರ್ಥವಾಗುತ್ತದೆ. ನಿಜವಾದ ರಾಜ ಬರುವವರೆಗೂ ಎಲ್ಲರೂ ರಾಜನಂತೆ ನಟಿಸುತ್ತಿರುತ್ತಾರೆ ಎನ್ನುವ ಕ್ಯಾಪ್ಷನ್ ಕೊಟ್ಟಿದ್ದಾರೆ.

ಪುನೀತ್ ಪತ್ನಿ ಶುಭ ಹಾರೈಕೆ

ಪುನೀತ್ ಪತ್ನಿ ಶುಭ ಹಾರೈಕೆ

ಪುನೀತ್ ರಾಜ್‌ಕುಮಾರ್ ಅವರ ಸದಾಶಿವ ನಗರ ನಿವಾಸದ ಮುಂಭಾಗದ ತೋಟದಲ್ಲಿ 'ರಾಯಲ್' ಸಿನಿಮಾ ಟೈಟಲ್ ಲಾಂಚ್ ಈವೆಂಟ್ ನಡೆದಿದೆ. ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಟೈಟಲ್ ರಿವೀಲ್ ಮಾಡಲಾಯಿತು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ವಿಜಯ್ ಕಿರಗಂದೂರ್ 'ರಾಯಲ್' ಸಿನಿಮಾ ಟೈಟಲ್ ರಿವೀಲ್ ಮಾಡಿ ಆಲ್‌ದಿ ಬೆಸ್ಟ್ ಹೇಳಿದ್ದಾರೆ. ವಿರಾಟ್, ಸಂಜನಾ ಆನಂದ್ ಸೇರಿದಂತೆ ಇಡೀ ತಂಡ ಈ ವೇಳೆ ಹಾಜರಿತ್ತು.

ಅಪ್ಪು ಮಾಡಬೇಕಿದ್ದ ಕಥೆನಾ?

ಅಪ್ಪು ಮಾಡಬೇಕಿದ್ದ ಕಥೆನಾ?

ಸಂಕೇತ್ ಸಿನಿಮಾಟೋಗ್ರಫಿ 'ರಾಯಲ್' ಚಿತ್ರಕ್ಕಿದೆ. ಚರಣ್ ಸಂಗೀತ ಮತ್ತೊಂದು ಹೈಲೆಟ್. ಅನಿಲ್ ಮಂಡ್ಯ ಚಿತ್ರಸ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಂದಹಾಗೆ ಪುನೀತ್ ರಾಜ್‌ಕುಮಾರ್‌ಗಾಗಿ ದಿನಕರ್ ಮಾಡಿದ್ದ ಕಥೆ ಬೇರೆ? ವಿರಾಟ್ ಮಾಡುತ್ತಿರುವ 'ರಾಯಲ್' ಕಥೆ ಬೇರೆ ಎಂದು ಚಿತ್ರತಂಡದಿಂದ ಮಾಹಿತಿ ಸಿಕ್ಕಿದೆ. ಇನ್ನುಳಿದ ಚಿತ್ರೀಕರಣ ಮುಗಿಸೋಕು ಮುನ್ನ ತಂಡ ಪ್ರಮೋಷನ್‌ಗೆ ಚಾಲನೆ ಕೊಟ್ಟಿದೆ. ವಿರಾಟ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಟೀಸರ್ ರಿಲೀಸ್ ಆಗಲಿದೆ.

ಪಕ್ಕಾ ಮಾಸ್ ಎಂಟರ್‌ಟೈನರ್

ಪಕ್ಕಾ ಮಾಸ್ ಎಂಟರ್‌ಟೈನರ್

'ಕಿಸ್' ಸಿನಿಮಾದಲ್ಲಿ ವಿರಾಟ್ ಲವರ್ ಬಾಯ್ ಆಗಿ ಮಿಂಚಿದ್ದರು. 'ರಾಯಲ್' ಚಿತ್ರದಲ್ಲಿ ಪಕ್ಕಾ ಮಾಸ್, ಎನರ್ಜಿಟಿಕ್ ಹೀರೊ ಆಗಿ ಅಬ್ಬರಿಸೋಕೆ ಬರ್ತಿದ್ದಾರೆ. ಕಂಪ್ಲೀಟ್ ಫ್ಯಾಮಿಲಿ ನೋಡಬಹುದಾದ ಸಿನಿಮಾ ಇದು. ಎಮೋಷನ್‌ಗೂ ಹೆಚ್ಚು ಮಹತ್ವ ಇದ್ದು ಸಿನಿಮಾ ಗೆದ್ದೇಗೆಲ್ಲುತ್ತೆ ಎನ್ನುವ ನಿರೀಕ್ಷೆಯಲ್ಲಿ ಚಿತ್ರತಂಡ ಇದೆ. ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಪ್ರಯತ್ನ ನಡೀತಿದೆ. 'ಜೊತೆ ಜೊತೆಯಲಿ', 'ನವಗ್ರಹ', 'ಸಾರಥಿ' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ದಿನಕರ್ ಈ ಬಾರಿ ಮತ್ತೊಂದು ಅದ್ಭುತ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ನಿರೀಕ್ಷೆಯಿದೆ.

More from Filmibeat

English summary
Dinakara Thoogudeepa And Viraat's next titled as Royal. Ashwini Puneeth Rajkumar and Producer Vijay kiragandur unveiled the poster. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X