ಟಾಕ್ಸಿಕ್ ವಿರುದ್ಧ ದೂರುಗಳ ಸರಮಾಲೆ ; ಮತ್ತೊಂದು ಸಂಕಷ್ಟ- ಸೆನ್ಸಾರ್ ಮಂಡಳಿಗೆ ದೂರು

''ಕೆಜಿಎಫ್'' ಚಿತ್ರದ ಮೂಲಕ ಭಾರತದೆಲ್ಲೆಡೆ ತನ್ನ ಹೆಸರಿನ ಧ್ವಜ ಹಾರಿಸಿದ ಯಶ್ ಸದ್ಯ ವಿಶ್ವದ ಮೇಲೆ ಕಣ್ಣಿಟ್ಟಿದ್ದಾರೆ. ಕನ್ನಡ ಚಿತ್ರರಂಗದತ್ತ ಜಗತ್ತೇ ಈ ಬಾರಿ ತಿರುಗಿ ನೋಡಬೇಕೆಂಬ ಆಶಯದೊಂದಿಗೆ ''ಟಾಕ್ಸಿಕ್ ''ಚಿತ್ರವನ್ನು ಮಾಡಿದ್ದಾರೆ. ಇನ್ನೇನು ಕೆಲವೇ ದಿನ ''ಟಾಕ್ಸಿಕ್'' ಬೆಳ್ಳಿಪರದೆಯ ಮೇಲೆ ಧಗಧಗಿಸಲಿದೆ. ಈಗಾಗಲೇ ಬಿಡುಗಡೆಯಾಗಿರುವ ಟಾಕ್ಸಿಕ್‌ನ ಕಿಲ್ಲರ್ ಲೇಡಿಗಳ ಲುಕ್ ಹಲವರಿಗೆ ಕಿಕ್ಕೇರಿಸಿದೆ.

ಆದರೆ ಇದೇ ಸಮಯದಲ್ಲಿ ಮೊನ್ನೆ..ಮೊನ್ನೆ.. ಬಿಡುಗಡೆಯಾದ ಟಾಕ್ಸಿಕ್‌ನ ಟೀಸರ್ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಈಗಾಗಲೇ ವಕೀಲರಾದ ಲೋಹಿತ್ ಕುಮಾರ್ ಟಾಕ್ಸಿಕ್ ಟೀಸರ್ ವಿರುದ್ಧ ಕೇಂದ್ರ ಸೆನ್ಸಾರ್ ಮಂಡಳಿಗೆ ದೂರು ದಾಖಲಿಸಿದ್ದಾರೆ.

Dinesh Kallahalli vs Toxic Activist Files CBFC Complaint Seeking Ban on Yash s Obscene Teaser

ಯಶ್ ವಿರುದ್ಧ ನಮ್ಮದೇನು ಅಲ್ಲ. ಕನ್ನಡ ಚಿತ್ರರಂಗದ ವಿರುದ್ಧವೂ ಕೂಡ ನಾವು ಇಲ್ಲ ಎಂದು ಹೇಳಿರುವ ಲೋಹಿತ್ ಕುಮಾರ್ ಇಲ್ಲೇನಾಯ್ತು ಅಂದರೆ ಯಶ್ ಅವರ ಸಿನಿಮಾ ಅಂದಾಗ ನನ್ನನ್ನೂ ಸೇರಿ ಕುಟುಂಬ ಸಮೇತ ನೋಡಲು ಹಲವಾರು ಜನ ಕಾಯುತ್ತಿರುತ್ತಾರೆ, ಆದರೆ ಯಾವುದೇ ಮುನ್ನೆಚ್ಚರಿಕೆ ನೀಡದೇ ಚಿತ್ರದ ಟೀಸರ್‌ ಬಿಡುಗಡೆ ಮಾಡಲಾಗಿದೆ, ಕೊನೆ ಪಕ್ಷ ಮಕ್ಕಳು ನೋಡುವಂತಹ ಟೀಸರ್ ಅಲ್ಲ ಎಂಬ ಮುನ್ನೆಚ್ಚರಿಕೆಯನ್ನಾದರೂ ಅವರು ನೀಡಬೇಕಿತ್ತು ಎಂದು ಲೋಹಿತ್ ಕುಮಾರ್ ಹೇಳಿದ್ದಾರೆ. ಯಶ್ ಅವರಿಗಿಂತ ನಮಗೆ ನಮ್ಮ ಸಮಾಜದ ಮಕ್ಕಳು ಮುಖ್ಯ ಎಂದು ಹೇಳಿದ್ದಾರೆ.

ಇನ್ನು AAP ಪಕ್ಷ ಕೂಡ ಕೆಂಡಾಮಂಡಲವಾಗಿದೆ. ''ಟಾಕ್ಸಿಕ್'' ಟೀಸರ್ ಬ್ಯಾನ್ ಮಾಡುವಂತೆ ಮಹಿಳಾ ಆಯೋಗಕ್ಕೆ ದೂರನ್ನು ನೀಡಲಾಗಿದೆ. ''ಟಾಕ್ಸಿಕ್'' ಟೀಸರ್‌ನಲ್ಲಿ ಕೆಲವು ದೃಶ್ಯಗಳು ಅಶ್ಲೀಲವಾಗಿದ್ದು, ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿವೆ ಎಂದು ತನ್ನ ದೂರಿನಲ್ಲಿ AAP ಪಕ್ಷದ ಮಹಿಳಾ ಘಟಕ ಉಲ್ಲೇಖಿಸಿದೆ. ಮಹಿಳೆಯರ ಘನತೆಯನ್ನು ''ಟಾಕ್ಸಿಕ್‌''ನಲ್ಲಿನ ದೃಶ್ಯಗಳು ಕುಗ್ಗಿಸುತ್ತವೆ ಮತ್ತು ಕನ್ನಡ ಸಂಸ್ಕೃತಿಯನ್ನು ಅವಮಾನಿಸುತ್ತವೆ ಎಂದು ಕೂಡ ದೂರಿನಲ್ಲಿ ಹೇಳಲಾಗಿದೆ. ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಕೂಡ ಫಿಲ್ಮಿಬೀಟ್ ಕನ್ನಡ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಹೀಗಿರುವಾಗ ಇದೀಗ ''ಟಾಕ್ಸಿಕ್'' ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.

dinesh-kallahalli-vs-toxic-activist-files-cbfc-complaint-seeking-ban-on-yash-s-obscene-teaser

''ಟಾಕ್ಸಿಕ್'' ಚಿತ್ರದ ಟೀಸರ್‌ನಲ್ಲಿರುವ ಹಸಿ ಬಿಸಿ ದೃಶ್ಯಗಳಿಗೆ ಕೆಂಡ ಕಾರಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸೆನ್ಸಾರ್ ಮಂಡಳಿಗೆ ಈಗ ದೂರು ಸಲ್ಲಿಸಿದ್ದಾರೆ. ಟೀಸರ್‌ನಲ್ಲಿ ಲೈಂ*ಗಿಕವಾಗಿ ಪ್ರಚೋದಿಸುವ ಅಶ್ಲೀಲ ದೃಶ್ಯಗಳಿವೆ ಎಂದು ಹೇಳಿರುವ ದಿನೇಶ್ ಕಲ್ಲಹಳ್ಳಿ ಅಪ್ರಾಪ್ತರ ಮೇಲೆ ಈ ಟೀಸರ್ ತುಂಬಾನೇ ಕೆಟ್ಟ ಪರಿಣಾಮ ಬೀರುತ್ತೆ ಎಂದು ಹೇಳಿದ್ದಾರೆ. ಸಾಮಾಜಿಕ ನೈತಿಕತೆಯನ್ನು ಟೀಸರ್‌ ಮೀರಿದೆ, ಈ ಹಿನ್ನೆಲೆ ಚಿತ್ರದ ಟೀಸರ್‌ನಲ್ಲಿನ ದೃಶ್ಯಗಳನ್ನು ಕೂಡಲೇ ತೆಗೆದು ಹಾಕಬೇಕು ಮತ್ತು ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ''ಟಾಕ್ಸಿಕ್'' ಚಿತ್ರಕ್ಕೆ ಪ್ರಮಾಣ ಪತ್ರವನ್ನು ಕೂಡ ನೀಡಬಾರದೆಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನುಳಿದಂತೆ ಈ ವಾದ- ವಿವಾದದ ನಡುವೆ ಜನವರಿ 8ರಂದು ಯಶ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾದ ''ಟಾಕ್ಸಿಕ್'' ಟೀಸರ್ ಯೂಟ್ಯೂಬ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಚಿತ್ರದಲ್ಲಿ ನಯನತಾರಾ.. ರುಕ್ಮಿಣಿ ವಸಂತ್.. ತಾರಾ ಸುತಾರಿಯಾ.. ಕಿಯಾರಾ ಅಡ್ವಾಣಿ.. ಹುಮಾ ಖುರೇಶಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ವಿವಾದಕ್ಕೆ ಕಾರಣವಾದ ದೃಶ್ಯದಲ್ಲಿ ಬ್ರೆಜಿಲಿಯನ್ ನಟಿ ಹಾಗೂ ಮಾಡೆಲ್ ಬೀಟ್ರಿಜ್ ಟೌಫೆನ್‌ಬಾಚ್ ಅಭಿನಯಿಸಿದ್ದಾರೆ. ಸಿನಿಮಾ ಮಾರ್ಚ್ 19ರಂದು ತೆರೆಗೆ ಬರುತ್ತಿದೆ. ಅಂದೇ ''ಧುರಂಧರ್ 2'' ಕೂಡ ಬಿಡುಗಡೆಯಾಗುತ್ತಿದೆ.

More from Filmibeat

English summary
Will the "Toxic" teaser be removed? Dinesh Kallahalli moves the Censor Board over "obscene" visuals in Yash's birthday glimpse. Get the full legal update here.
Read more about: yash toxic filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X