ಯಶ್ ಭೇಟಿ ಮಾಡಿ 'ಸಲಾಮ್ ರಾಕಿ ಭಾಯ್' ಎಂದ ಕ್ರಿಕೆಟಿಗ ದಿನೇಶ್ ಕಾರ್ತಿಕ್!

ಸಿನಿಮಾ ಕ್ಷೇತ್ರಕ್ಕೂ ಕ್ರೀಡಾ ಕ್ಷೇತ್ರಕ್ಕೂ ಅದೇನೋ ಅವಿನಾಭಾವ ಸಂಬಂಧವಿದೆ. ಅದರಲ್ಲೂ ವಿಶೇಷವಾಗಿ ಕ್ರಿಕೆಟ್ ಹಾಗೂ ಸಿನಿಮಾಗೆ. ಕ್ರಿಕೆಟ್ ಟೂರ್ನಿಗಳ ಕಾರ್ಯಕ್ರಮ ನಡೆದ ಬಹುತೇಕ ಸಂದರ್ಭಗಳಲ್ಲಿ ಅಲ್ಲಿಗೆ ಸಿನಿಮಾ ಸೆಲೆಬ್ರಿಟಿಗಳನ್ನು ಕರೆಸಿದ ಹಲವು ಉದಾಹರಣೆಗಳಿವೆ.

ಇತ್ತ ಸಿನಿಮಾಗಳ‌ ಕೆಲ ಕಾರ್ಯಕ್ರಮಗಳಿಗೆ ಕ್ರಿಕೆಟಿಗರು ಮುಖ್ಯ ಅತಿಥಿಯಾಗಿ ಆಗಮಿಸಿದ್ದೂ ಇದೆ. ಇನ್ನು ಕಾರ್ಯಕ್ರಮ ಮಾತ್ರವಲ್ಲದೇ ವೈಯಕ್ತಿಕವಾಗಿಯೂ ಸಹ ಕ್ರಿಕೆಟಿಗರು ಹಾಗೂ ಸಿನಿಮಾ ನಟರು ಭೇಟಿಯಾದ ಹಲವು ಸಂದರ್ಭಗಳಿವೆ.

Dinesh Karthik met Rocking Star Yash and shared the pic on social media

ಇದೀಗ ಈ ಸಾಲಿಗೆ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಹಾಗೂ ಡಿಕೆ ಸಾಹೇಬ ದಿನೇಶ್ ಕಾರ್ತಿಕ್ ಸೇರ್ಪಡೆಯಾಗಿದ್ದಾರೆ‌. ಹೌದು, ಯಶ್ ಅವರನ್ನು ಭೇಟಿಯಾದ ಫೋಟೊವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಹಾಗೂ ಉಳಿದ ಸಾಮಾಜಿಕ‌ ಜಾಲತಾಣದ ಖಾತೆಗಳಲ್ಲಿ ಸಹ ಹಂಚಿಕೊಂಡಿದ್ದು, 'ಸಲಾಮ್ ರಾಕಿ ಭಾಯ್' ಎಂದು ಬರೆದುಕೊಂಡಿದ್ದಾರೆ.

ಸದ್ಯ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕನ್ನಡದ ನಟನೊಬ್ಬನ್ನು ಭೇಟಿಯಾದ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟಿಗ ಫೋಟೊ ಹಾಕಿ ಪೋಸ್ಟ್ ‌ಮಾಡುವುದು ತಮಾಷೆಯಲ್ಲ, ಅದು ರಾಕಿಂಗ್ ಸ್ಟಾರ್ ಯಶ್ ಮಾಡಿರುವ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

ಇನ್ನು ಕಳೆದ ವಾರವಷ್ಟೇ ಇದೇ ರೀತಿ ಸಚಿನ್ ತೆಂಡೂಲ್ಕರ್ ಹಾಗೂ ತಮಿಳಿನ ನಟ ಸೂರ್ಯ ಭೇಟಿಯಾಗಿದ್ದರು. ಈ ಸಂದರ್ಭದ ಫೋಟೊವನ್ನು ಇಬ್ಬರೂ ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು‌. ಸೂರ್ಯ ಭೇಟಿಯಾದದ್ದರ ಬಗ್ಗೆ ಸಚಿನ್ ತೆಂಡೂಲ್ಕರ್ ತಮಿಳಿನಲ್ಲಿಯೇ ಬರೆದುಕೊಂಡಿದ್ದದ್ದು ವಿಶೇಷವಾಗಿತ್ತು.

More from Filmibeat

English summary
Dinesh Karthik met Rocking Star Yash and shared the pic on social media. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X