ಬೆಟ್ಟದ ಹೂವು-ನಗುವಿನ ಸರದಾರ 'ಅಪ್ಪು' ಎಂದ 'ದರ್ಶನ್' ತಮ್ಮ 'ದಿನಕರ್ '..!

By ಫಿಲ್ಮಿ ಬೀಟ್ ಡೆಸ್ಕ್

ಬೇರೆಯವರನ್ನ ಅಣಕಿಸಿವುದು ಅಭಿಮಾನ ಅಲ್ಲ. ಆದರೆ ಇದನ್ನ ಅರಿಯದ ಕೆಲವರು ಅಭಿಮಾನದ ಹೆಸರಿನಲ್ಲಿ ಅಭಿಮಾನಕ್ಕೆ ಕಳಂಕ ಮೆತ್ತುವ ಕೆಲಸವನ್ನ ಪ್ರಾಮಾಣಿಕವಾಗಿ ಮಾಡ್ತಾ ಬರ್ತಿದ್ದಾರೆ. ಅದು ಯಾರೆಂಬ ಪ್ರಶ್ನೆಗೆ ಉತ್ತರ ನಿಮಗೂ ಗೊತ್ತು. ಎಲ್ಲರಿಗೂ ಗೊತ್ತು. ಇರಲಿ ವಿಷಯ ಅದಲ್ಲ.

ನಿಮಗೆ ಗೊತ್ತು.. ಇವತ್ತು ಅಪ್ಪು ಹುಟ್ಟಿದ ಹಬ್ಬ. ನಮ್ಮ ನಡುವೆ ಅಪ್ಪು ಇವತ್ತು ಇದ್ದಿದ್ದರೆ 49 ವಸಂತಕ್ಕೆ‌ ಕಾಲಿಡ್ತಿದ್ದರು. ಆದರೆ. ವಿಧಿ ಲಿಖಿತ ಅಪ್ಪುನ ನಮ್ಮೆಲ್ಲರ ರಿಂದ ದೂರವಾಗಿದ್ದಾರೆ.

Dinkar Thoogudeepa s Heartfelt wishes On Puneeth s Birth annivesrary

ಹಾಗಂಥ ಅಭಿಮಾನ ಕಡಿಮೆ ಆಗಿಲ್ಲ. ನಿಜಾ ಅಪ್ಪು ಕಣ್ಣೆದುರು ಇಲ್ಲ. ಆದರೆ ಅನೇಕರ ಹೃದಯದಲ್ಲಿ ಅಪ್ಪು ಇವತ್ತು ಜೀವಂತ. ಕೇವಲ ಅಭಿಮಾನಿಗಳಷ್ಟೇ ಅಲ್ಲ. ಚಿತ್ರರಂಗಕ್ಕೆ ಸಂಬಂಧಿಸಿದ ಅನೇಕರು ಪವರ್ ಸ್ಟಾರ್ ಅವರನ್ನು ನೆನಸಿಕೊಳ್ತಾರೆ. ಆ ಪೈಕಿ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹೋದರ ದಿನಕರ್ ಕೂಡ ಒಬ್ಬರು.

ಹೌದು. ಅಭಿಮಾನದ ಹೆಸರಿನಲ್ಲಿ ಯಾರೇನೇ ಮಾಡಲಿ, ಯಾರೇನೇ ಅಂದುಕೊಳ್ಳಲಿ ದರ್ಶನ್ ಸಹೋದರ ದಿನಕರ್ ಅದ್ಯಾವದಕ್ಕೂ ತಲೆ‌ಕೆಡಿಸಿಕೊಂಡಿಲ್ಲ. ಅಪ್ಪು ಮೇಲೆ ತಮಗಿರುವ ಅಭಿಮಾನವನ್ನ ದಿನಕರ್ ತೂಗುದೀಪ ಶ್ರೀನಿವಾಸ್ ಕಾಲ ಕಾಲಕ್ಕೆ ವ್ಯಕ್ತಪಡಿಸುತ್ತಾನೇ ಬಂದಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಇವತ್ತು ದಿನಕರ್ ಅಪ್ಪು ಅವರ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯ

Dinkar Thoogudeepa s Heartfelt wishes On Puneeth s Birth annivesrary

ಕನ್ನಡಿಗರ ನೆಚ್ಚಿನ ಯುವರತ್ನ ಅವರ ಗುಣಗಾನವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ದಿನಕರ್ ತೂಗುದೀಪ, ಬೆಟ್ಟದ ಹೂವು, ನಗುವಿನ ಸರದಾರ ನಮ್ಮ ನೆಚ್ಚಿನ ನಟ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳು..ಅವರು ನಮ್ಮೊಂದಿಗೆ ಬಿಟ್ಟುಹೋದ ನೆನಪುಗಳು ಸದಾ ಜೀವಂತ ಎಂದಿದ್ದಾರೆ. ಅಪ್ಪು ಅವರನ್ನ ಹುಟ್ಟುಹಬ್ಬದ ಪ್ರಯುಕ್ತ ದಿನಕರ್ ನೆನೆದಿದ್ದಾರೆ

ಹಾಗೇ ನೋಡಿದರೆ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ರದರ್ ದಿನಕರ್ ತೂಗುದೀಪ ಪುನೀತ್ ರಾಜ್ ಕುಮಾರ್ ಅವರಿಗೆ ಆಕ್ಷನ್ ಕಟ್ ಹೇಳಬೇಕಿತ್ತು. ಜಯಣ್ಣ ಮತ್ತು ಭೋಗೇಂದ್ರ ಈ ಚಿತ್ರವನ್ನ ನಿರ್ಮಾಣ ಮಾಡಬೇಕಿತ್ತು. ಎಲ್ಲ ತಯಾರಿಯೂ ಸಂಪೂರ್ಣವಾಗಿತ್ತು. ಆದರೆ ಅದಕ್ಕೆ ವಿಧಿ ಅಡ್ಡಗಾಲು ಹಾಕಿತ್ತು. ರೆಕಾರ್ಡ್ ಬ್ರೇಕ್ ಮಾಡಬೇಕಿದ್ದ ಈ ಸಿನಿಮಾ ಟೇಕಾಫ್ ಆಗಲೇ ಇಲ್ಲ

ಒಟ್ಟಿನಲ್ಲಿ ಅಪ್ಪು ಹುಟ್ಟಿದ ಹಬ್ಬದ ಪ್ರಯಕ್ತ, ಇಂದು ಸಂತೋಷದ ಜೊತೆ ವಿಷಾದದ ವಾತಾವರಣ ಇದೆ. ಈ ವಾತಾವರಣದಲ್ಲಿ ದಿನಕರ್ ಅವರ ಈ ಶುಭಾಶಯದ ವಾಕ್ಯ, ಮತ್ತೊಂದು ಹಂತದ ಚರ್ಚೆಯನ್ನ ಹುಟ್ಟುಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ದಿನಕರ್ ಅವರ ಪೋಸ್ಟ್ ವೈರಲ್ ಆಗಿದೆ

More from Filmibeat

English summary
On the occasion of puneeth rajkumar birth anniversary, director dinakar thoogudeepa shared his memories
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X