'ಯುವರತ್ನ'ನ ಅಡ್ಡದಲ್ಲಿ ಕಾಣಿಸಿಕೊಂಡ ವಿಶೇಷ ಅತಿಥಿ

Recommended Video

Yuvaratna Movie: ಮತ್ತೆ ಧಾರವಾಡದ ಕಡೆ ಪಯಣ ಬೆಳೆಸಿದೆ 'ಯುವರತ್ನ ಚಿತ್ರತಂಡ | FILMIBEAT KANNADA

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈಗಾಗಲೆ ಅನೇಕ ದಿನಗಳ ಕಾಲ ಮೈಸೂರಿನಲ್ಲಿ ಚಿತ್ರೀಕರಣ ನಡೆಸಲಾಗುತ್ತಿತ್ತು. ಆದ್ರೀಗ ಮೈಸೂರು ಭಾಗದ ಚಿತ್ರೀಕರಣ ಮುಗಿಸಿ ಮತ್ತೆ ಧಾರವಾಡದ ಕಡೆ ಪಯಣ ಬೆಳೆಸಿದೆ ಚಿತ್ರತಂಡ.

ಸದ್ಯ 'ಯುವರತ್ನ' ಟೀಂ 30 ರಿಂದ 40 ಭಾಗದಷ್ಟು ಚಿತ್ರೀಕರಣ ಮಾಡಿ ಮುಗಿಸಿದೆ. ಈಗಾಗಲೆ ಚಿತ್ರಕ್ಕೆ ಸಾಕಷ್ಟು ಮಂದಿ ಸೇರ್ಪಡೆಯಾಗಿದ್ದಾರೆ ಅಷ್ಟೆಯ ಇನ್ನು ಯುವರತ್ನನ ಟೀಂ ಸೇರಿಕೊಳ್ಳುತ್ತಿದ್ದಾರೆ. ಇದರ ನಡುವೆ ಈಗ 'ಯುವರತ್ನ' ಅಡ್ಡದಲ್ಲಿ ವಿಶೇಷವಾದ ಅತಿಥಿ ಎಲ್ಲರ ಗಮನ ಸಳೆಯುತ್ತಿದೆ. ಹೌದು, 'ಯುವರತ್ನ' ಅಡ್ಡದಲ್ಲಿ ಡೈನೋಸರ್ ಒಂದು ಕಾಣಿಸಿಕೊಂಡಿದ್ದಾರೆ. ಈ ಡೈನೋಸರ್ ಅನ್ನು ಕಲಾನಿರ್ದೇಶಕ ಶಿವಕುಮಾರ್ ನಿರ್ಮಿಸಿದ್ದಾರೆ.

ವಿಶೇಷ ಅಂದ್ರೆ ಚಿತ್ರದಲ್ಲಿ ಈ ಡೈನೋಸರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದೆಯಂತೆ. ಡೈನೋಸರ್ ಇದೆ ಅಂತ ಅಂದ್ಮೇಲೆ ಪುನೀತ್ ಚಿತ್ರದಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳಲಿದ್ದಾರಾ ಎಂದು ಮೇಲ್ನೋಟಕ್ಕೆ ಎನಿಸುತ್ತೆ. 'ಯುವರತ್ನ' ಅಡ್ಡಗೆ ಡೈನೋಸರ್ ಎಂಟ್ರಿ ಕೊಟ್ಟಿರುವ ಬಗ್ಗೆ ಸ್ವತಹ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

 Dinosaur will play a special role in Puneeth Rajkumar starrer Yuvaratna film

ಮೊನ್ನೆ ಮೊನ್ನೆಯಷ್ಟೆ ಚಿತ್ರಕ್ಕೆ 'ಟಗರು' ಚಿತ್ರದ ಖ್ಯಾತಿಯ ಕಾನ್ಸ್ಟೇಬಲ್ ಸರೋಜ ಮತ್ತು ಲೇಡಿ ಬಾಡಿ ಬಿಲ್ಡರ್ ಮಮತಾ ಎಂಟ್ರಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲೆ ಡೈನೋಸರ್ ಕಾಣಿಸಿಕೊಂಡಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇನ್ನು ಚಿತ್ರದಲ್ಲಿ ಡಾಲಿ ಧನಂಜಯ್ ಕೂಡ ಬಣ್ಣ ಹಚ್ಚಿದ್ದಾರೆ. ಪುನೀತ್ ಗೆ ನಾಯಕಿಯಾಗಿ ಸಾಯೇಷಾ ಸೈಗಲ್ ಕಾಣಿಸಿಕೊಂಡಿದ್ದಾರೆ.

More from Filmibeat

English summary
Dinosaur will play a special role in Puneeth Rajkumar starrer Yuvaratna film. Director Santhosh Ananddram reveal the dinosaur information.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X