For Quick Alerts
  ALLOW NOTIFICATIONS  
  For Daily Alerts

  ತಂದೆಯಾದ ಸಂಭ್ರಮದಲ್ಲಿ 'ಅದ್ದೂರಿ' ನಿರ್ದೇಶಕ ಎ.ಪಿ ಅರ್ಜುನ್

  |

  ಸ್ಯಾಂಡಲ್ ವುಡ್ ನ ಅದ್ದೂರಿ ಖ್ಯಾತಿಯ ನಿರ್ದೇಶಕ ಎ.ಪಿ ಅರ್ಜುನ್ ಸದ್ಯ ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ. ಅರ್ಜುನ್ ತಂದೆಯಾದ ಸಂಭ್ರಮದಲ್ಲಿದ್ದಾರೆ. ಅರ್ಜುನ್ ಪತ್ನಿ ಅನ್ನಪೂರ್ಣ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗು ಜನಿಸಿದ್ದು, ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  ನಾನು ಸಂತಸದ ಸುದ್ದಿಯನ್ನುಹಂಚಿಕೊಳ್ಳುತ್ತಿದ್ದೇನೆ. ನನ್ನ ಜೀವನದ ತುಂಬ ಸಂತಸದ ಸುದ್ದಿ. ಗಂಡು ಮಗುವಿಗೆ ತಂದೆಯಾಗಿದ್ದೀನಿ. ದೇವರ ದಯೇ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿ ಇದ್ದಾರೆ. ನಿಮ್ಮಲ್ಲರ ಪ್ರೀತಿ, ಆಶೀರ್ವಾದಕ್ಕೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

  ಪತ್ನಿಯ ಸೀಮಂತ ಸಂಭ್ರಮದಲ್ಲಿ 'ಅದ್ಧೂರಿ' ನಿರ್ದೇಶಕ ಎ.ಪಿ ಅರ್ಜುನ್ಪತ್ನಿಯ ಸೀಮಂತ ಸಂಭ್ರಮದಲ್ಲಿ 'ಅದ್ಧೂರಿ' ನಿರ್ದೇಶಕ ಎ.ಪಿ ಅರ್ಜುನ್

  ಅರ್ಜುನ್ ದಂಪತಿಗೆ ಕಿಚ್ಚ ಸುದೀಪ್ ಅಭನಂದನೆ ತಿಳಿಸಿದ್ದಾರೆ. ಟ್ವೀಟ್ ಮಾಡಿರುವ ಸುದೀಪ್ 'ಕೆಲವು ಸುದ್ದಿ ಕೇಳಲು ಸಂತೋಷವಾಗುತ್ತೆ. ಅಭಿನಂದನೆಗಳು ಅರ್ಜುನ್. ನಿಮ್ಮ ಕುಟುಂಬ ಸಂತೋಷ ಮತ್ತು ಆರೋಗ್ಯವಾಗಿರಲಿ ಎಂದು ಹಾರೈಸುತ್ತೇನೆ' ಎಂದಿದ್ದಾರೆ.

  ಇತ್ತೀಚಿಗಷ್ಟೆ ಅರ್ಜುನ್ ಪತ್ನಿಯ ಸೀಮಂತ ಸಂಭ್ರಮದ ಫೋಟೋವನ್ನು ಹಂಚಿಕೊಂಡಿದ್ದರು. ಕೊರೊನಾ ಕಾರಣ ತೀರ ಸರಳವಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದರು. ಮನೆಯರು ಮಾತ್ರ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಫೋಟೋಗಳನ್ನು ಹಂಚಿಕೊಂಡು ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಇರಲಿ ಎಂದು ಅರ್ಜುನ್ ಕೇಳಿಕೊಂಡಿದ್ದರು

  ಅಂದಹಾಗೆ ಎ.ಪಿ ಅರ್ಜುನ್ ಕಳೆದ ವರ್ಷ ಲಾಕ್ ಡೌನ್ ನಲ್ಲಿ ಹಸೆಮಣೆ ಏರಿದ್ದರು. ಮೇ 10 ರಂದು ನಡೆದ ಸರಳ ಮದುವೆ ಸಮಾರಂಭದಲ್ಲಿ ಅನ್ನಪೂರ್ಣ ಅವರಿಗೆ ಮಾಂಗಲ್ಯಧಾರಣೆ ಮಾಡಿದ್ದರು. ಮದುವೆಯಾಗಿ ಒಂದು ವರ್ಷ ಕಳೆಯುವುದರೊಳಗೆ ಅರ್ಜುನ್ ತಂದೆಯಾದ ಖುಷಿಯಲ್ಲಿದ್ದಾರೆ.

  ಕನ್ನಡ ಚಿತ್ರರಂಗಕ್ಕೆ ಬಹಿರಂಗ ಪತ್ರ ಬರೆದ ಮಾಲಾಶ್ರೀ | Filmibeat Kannada

  ಅಂಬಾರಿ ಸಿನಿಮಾ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಎ.ಪಿ ಅರ್ಜುನ್ ಗೆ ಅದ್ದೂರಿ ಸಿನಿಮಾ ದೊಡ್ಡ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿದೆ. ಧ್ರುವ ಸರ್ಜಾ ಮತ್ತು ಅರ್ಜುನ್ ಕಾಂಬಿನೇಷನ್ ಅಭಿಮಾನಿಗಳ ಹೃದಯ ಗೆದ್ದಿತ್ತು. ಬಳಿಕ ರಾಟೆ, ಚಾಲೆಂಜಿಂಗ್ ಸ್ಟಾರ್ ಜೊತೆ ಐರಾವತ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Director A.P Arjun and his wife Annapurna welcome baby boy. Sudeep wishes AP Arjun and his wife.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X