For Quick Alerts
  ALLOW NOTIFICATIONS  
  For Daily Alerts

  ಪತ್ನಿಯ ಸೀಮಂತ ಸಂಭ್ರಮದಲ್ಲಿ 'ಅದ್ಧೂರಿ' ನಿರ್ದೇಶಕ ಎ.ಪಿ ಅರ್ಜುನ್

  |

  ಸ್ಯಾಂಡಲ್ ವುಡ್ ನ ಅದ್ದೂರಿ ನಿರ್ದೇಶಕ ಅಂತಾನೇ ಖ್ಯಾತಿಗಳಿಸಿರುವ ಎ.ಪಿ ಆರ್ಜನ್ ತಂದೆಯಾಗುತ್ತಿರುವ ಸಂತಸದಲ್ಲಿದ್ದಾರೆ. ಅರ್ಜುನ್ ಮತ್ತು ಪತ್ನಿ ಅನ್ನಪೂರ್ಣ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

  ಇತ್ತೀಚಿಗಷ್ಟೆ ಅನ್ನಪೂರ್ಣ ಅವರ ಸೀಮಂತ ಸಮಾರಂಭ ನಡೆದಿದ್ದು, ಕುಟುಂಬದವರು ಮಾತ್ರ ಭಾಗಿಯಾಗಿದ್ದರು. ಭೀಕರವಾಗಿರುವ ಕೊರೊನಾ ಎರಡನೇ ಅಲೆ, ಲಾಕ್ ಡೌನ್ ನಿಂದ ಸರಳವಾಗಿ ಸೀಮಂತ ಸಮಾರಂಭ ಆಚರಿಸಲಾಗಿದೆ.

  ಖ್ಯಾತ ನಟ ಬಿ.ಸಿ ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್‌ಗೆ ಸೀಮಂತ ಸಂಭ್ರಮಖ್ಯಾತ ನಟ ಬಿ.ಸಿ ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್‌ಗೆ ಸೀಮಂತ ಸಂಭ್ರಮ

  ಈ ಸಂತಸದ ಕ್ಷಣಗಳ ಫೋಟೋಗಳನ್ನು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ 'ಮುದ್ದು ಮಡದಿಯ ಸೀಮಂತ. ಎಲ್ಲರ ಪ್ರೀತಿ, ಆಶೀರ್ವಾದ ಇರಲಿ' ಎಂದು ಕೇಳಿಕೊಂಡಿದ್ದಾರೆ. ಹಸಿರು ಸೀರೆಯಲ್ಲಿ ಕಂಗೊಳಿಸುತ್ತಿರುವ ತುಂಬು ಗರ್ಭಿಣಿ ಅನ್ನಪೂರ್ಣ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಅಂದಹಾಗೆ ಎ.ಪಿ ಅರ್ಜುನ್ ಕಳೆದ ವರ್ಷ ಲಾಕ್ ಡೌನ್ ನಲ್ಲಿ ಹಸೆಮಣೆ ಏರಿದ್ದರು. ಮೇ 10 ರಂದು ನಡೆದ ಸರಳ ಮದುವೆ ಸಮಾರಂಭದಲ್ಲಿ ಅನ್ನಪೂರ್ಣ ಅವರಿಗೆ ಮಾಂಗಲ್ಯಧಾರಣೆ ಮಾಡಿದ್ದರು. ಮದುವೆಯಾಗಿ ಒಂದು ವರ್ಷ ಕಳೆಯುವುದರೊಳಗೆ ಅರ್ಜುನ್ ತಂದೆಯಾಗುತ್ತಿದ್ದಾರೆ.

  ಇಪ್ಪತ್ತೊಂದು ದಿನ ಅನುಭವಿಸಿದ ಕೊರೊನಾ ಕರಾಳತೆ ಬಿಚ್ಚಿಟ್ಟ ಶ್ವೇತಾ ಚಂಗಪ್ಪ | Filmibeat Kannada

  ಅಂಬಾರಿ ಸಿನಿಮಾ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಎ.ಪಿ ಅರ್ಜುನ್ ಗೆ ಅದ್ದೂರಿ ಸಿನಿಮಾ ದೊಡ್ಡ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿದೆ. ಧ್ರುವ ಸರ್ಜಾ ಮತ್ತು ಅರ್ಜುನ್ ಕಾಂಬಿನೇಷನ್ ಅಭಿಮಾನಿಗಳ ಹೃದಯ ಗೆದ್ದಿತ್ತು. ಬಳಿಕ ರಾಟೆ, ಚಾಲೆಂಜಿಂಗ್ ಸ್ಟಾರ್ ಜೊತೆ ಐರಾವತ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Sandalwood Director A.P Arjun shares his wife Annapurna's baby shower ceremony photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X