ಫೇಕ್ ಅಕೌಂಟ್ ನೋಡಿ ಬೆಚ್ಚಿ ಬಿದ್ದ ಎ.ಪಿ.ಅರ್ಜುನ್: ಚಿತ್ರರಂಗದಲ್ಲೇ ಇದ್ದಾರೆ ದುರುಳರು!

ಸಿನಿಮಾ ತಾರೆಯರಿಗೆ ಹತ್ತು ಹಲವು ಸವಾಲುಗಳು ಇರುತ್ತವೆ. ಅದರಲ್ಲಿ ಈ ಟ್ರೋಲ್ ಮತ್ತು ನಕಲಿ ಸಾಮಾಜಿಕ ಜಾಲತಾಣದ ಖಾತೆಗಳು ಕೂಡ ಒಂದು. ಸಿನಿಮಾ ನಟ, ನಟಿ ನಿರ್ದೇಶಕರು ಕಲಾವಿದರು ಹೀಗೆ ಕೊಂಚ ಹೆಸರುವಾಸಿ ಆದರೆ ಸಾಕು ಅವರ ಹೆಸರಿನಲ್ಲಿ ಫೇಕ್ ಅಕೌಂಟ್‌ಗಳು ಸೃಷ್ಟಿ ಆಗಿ ಬಿಡುತ್ತವೆ. ಇಂಥದೊಂದು ಸಮಸ್ಯೆ ನಿರ್ದೇಶಕ ಎಪಿ ಅರ್ಜುನ್‌ಗೂ ಕೂಡ ಕಾಡಿತ್ತು.

Recommended Video

ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡ್ತಾರೆ ಇವರು

ಹೆಚ್ಚಿನ ತಾರೆಯರು ಈ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಫೇಕ್ ಆದರೆ ಕೆಲವೊಮ್ಮೆ ನಕಲಿ ಖಾತೆಗಳನ್ನು ಬಳಸಿಕೊಂಡು ಅವರ ತೇಜೋವಧೆ ಮಾಡಲಾಗುತ್ತದೆ. ಅಥವಾ ಸೆಲೆಬ್ರೆಟಿಗಳ ಹೆಸರಲ್ಲಿ ಇನ್ಯಾರದೋ ತೇಜೋವಧೆ ಮಾಡಲಾಗುತ್ತದೆ.

ಹೀಗೆ ಎಪಿ.ಅರ್ಜುನ್ ಅವರ ನಕಲಿ ಖಾತೆ ಮೂಲಕ ಸಂದೇಶ ಒಂದನ್ನು ಅಪ್ಲೋಡ್‌ ಮಾಡಲಾಗಿತ್ತು. ನಟ ರಕ್ಷಿತ್ ಶೆಟ್ಟಿ ಅವರ ಸಪ್ತ ಸಾಗರದಾಚೆ ಚಿತ್ರದ ಫೊಟೋ ಒಂದನ್ನು ಹಾಕಿ ಸಲ್ಲದ, ಸಾಲುಗಳನ್ನು ಬರೆಯಲಾಗಿತ್ತು. ಹಾಗಾಗಿ ಇದು ವೈರಲ್‌ ಆಗಿತ್ತು.

ಎ.ಪಿ ಅರ್ಜುನ್‌ಗೆ ಶಾಕ್ ನೀಡಿತ್ತು ಈ ನಕಲಿ ಖಾತೆ!

ಈ ನಕಲಿ ಖಾತೆ ಥೇಟ್ ಅರ್ಜುನ್ ಅವರ ಟ್ವಿಟ್ಟರ್ ಖಾತೆಯ ಮಾದರಿಯಲ್ಲಿಯೇ ಇದೆ. ಈ ಖಾತೆಯನ್ನು ನೋಡಿದರೆ ಇದು ಎ.ಪಿ ಅರ್ಜುನ್ ಅವರೇ ಎಂದು ಅಂದುಕೊಳ್ಳ ಬೇಕು ಹಾಗೆ ಇದೆ. ಹಾಗಾಗಿ ಇದನ್ನು ನೋಡಿ ಸ್ವತಃ ನಿರ್ದೇಶಕ ಎಪಿ ಅವರಿಗೆ ಶಾಕ್‌ ಆಗಿತ್ತಂತೆ. ಹಾಗಾಗಿ ಕೂಡಲೇ ಅವರು ಇದು ಒಂದು ನಕಲಿ ಖಾತೆ ಎಂದು ಬರೆದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಫೇಕ್ ಅಕೌಂಟ್ ಮಾಡುದೇ ಕೆಟ್ಟ ಉದ್ದೇಶಕ್ಕೆ: ಎ.ಪಿ ಅರ್ಜುನ್!

ಫೇಕ್ ಅಕೌಂಟ್ ಮಾಡುದೇ ಕೆಟ್ಟ ಉದ್ದೇಶಕ್ಕೆ: ಎ.ಪಿ ಅರ್ಜುನ್!

ಇನ್ನೂ ಈ ಬಗ್ಗೆ ಫಿಲ್ಮಿಬೀಟ್‌ ಜೊತೆಗೆ ಮಾತನಾಡಿದ ಎ.ಪಿ ಅರ್ಜುನ್ ಅವರು "ಈ ರಿಯಲಿ ಫೇಕ್‌ ಅಕೌಂಟ್‌ಗಳನ್ನು ಮಾಡುವುದೇ ಕೆಟ್ಟ ಉದ್ದೇಶಕ್ಕೆ. ಮತ್ತೊಬ್ಬರ ಮುಖಕ್ಕೆ ಮಸಿ ಬಳಿಯಲೆಂದು ಹೀಗೆ ಮಾಡುತ್ತಾರೆ. ಆದರೆ ಯಾವುದೂ ಫೇಕ್ ಎನ್ನುವುದು ಬೇಗ ಗೊತ್ತಾಗುತ್ತದೆ. ಹಾಗೆ ಎಲ್ಲರಿಗೂ ಯಾವುದು ಫೇಕ್ ಎನ್ನುವುದು ಅಷ್ಟು ಸುಲಭಕ್ಕೆ ತಿಳಿಯುವುದಿಲ್ಲ. ನ್ಮಮ ಹೆಸರು ಇದ್ದರೆ ಅದು ನಾವೇ ಎಂದು ನಂಬಿ ಬಿಡುತ್ತಾರೆ. ಹಾಗಾಗಿ ತಪ್ಪು ಸಂದೇಶಗಳು ಜನರಿಗೆ ರವಾನೆ ಆಗುತ್ತವೆ". ಎಂದು ಹೇಳಿದ್ದಾರೆ.

ಫೇಕ್ ಅಕೌಂಟ್‌ಗಳಿಗೆ ಚಿತ್ರದವರೇ ರೂವಾರಿಗಳು!

ಫೇಕ್ ಅಕೌಂಟ್‌ಗಳಿಗೆ ಚಿತ್ರದವರೇ ರೂವಾರಿಗಳು!

ಇನ್ನು ಮತ್ತೊಂದು ಮೂಲದ ಪ್ರಕಾರ ಈ ರೀತಿ ಫೇಕ್ ಅಕೌಂಟ್‌ಗಳನ್ನು ಮಾಡುವವರು ಚಿತ್ರ ರಂಗದವರೇ ಎನ್ನಲಾಗಿದೆ. ಅಂದರೆ ತಮಗೆ ಯಾರನ್ನು ಕಂಡರೆ ಆಗವುದಿಲ್ಲವೋ ಅವರ ತೇಜೋವಧೆ ಮಾಡಲೆಂದೆ ನಕಲಿ ಖಾತೆಗಳನ್ನು ಸೃಷ್ಟಿ ಮಾಡಲಾಗುತ್ತದೆಯಂತೆ. ಹೀಗೆ ಸ್ಟಾರ್‌ ನಟರ ಸಾಕಷ್ಟು ಅಭಿಮಾನಿಗಳ ನಕಲಿ ಖಾತೆಗಳು ಇವೆಯಂತೆ. ಅಂದರೆ ತಾವು ಯಾರನ್ನು ದ್ವೇಷಿಸುತ್ತಾರೋ ಅವರ ಹೆಸರಲ್ಲೇ ಅಕೌಂಟ್ ಹುಟ್ಟು ಹಾಕಿ, ಸಾಮಾಜಿಕ ಜಾಲತಾಣದಲ್ಲಿ ಅವರ ಮುಖಕ್ಕೆ ಮಸಿ ಬಳಿಯುವ ಹಾಗೆ ಪೋಸ್ಟ್‌ಗಳನ್ನು ಹಾಕುತ್ತಾರಂತೆ.

ಎರಡು ಚಿತ್ರಗಳಲ್ಲಿ ಎ.ಪಿ ಅರ್ಜುನ್ ಬ್ಯೂಸಿ!

ಎರಡು ಚಿತ್ರಗಳಲ್ಲಿ ಎ.ಪಿ ಅರ್ಜುನ್ ಬ್ಯೂಸಿ!

ನಿರ್ದೇಶಕ ಎ.ಪಿ ಅರ್ಜುನ್ ಅವರು ಸದ್ಯ ಎರಡು ಚಿತ್ರಗಳಲ್ಲಿ ಬ್ಯೂಸಿ ಆಗಿದ್ದಾರೆ. ಒಂದು ಕಡೆ ಮಾರ್ಟಿನ್ ಮತ್ತೊಂದು ಕಡೆ ಅದ್ಧೂರಿ ಲವ್ವರ್. ಎರಡೂ ಚಿತ್ರಗಳನ್ನು ಹಂತ ಹಂತವಾಗಿ ಚಿತ್ರೀಕರಣ ಮಾಡುತ್ತಿದ್ದಾರೆ. ಎರಡೂ ಚಿತ್ರದ ಶೂಟಿಂಗ್ ಭರ್ಜರಿ ಅಗಿ ಸಾಗುತ್ತಿದೆ. ಆದರೆ ಕೊರೊನಾ ಕಾರಣಕ್ಕೆ ಮಾರ್ಟಿನ್ ಚಿತ್ರೀಕರಣಕ್ಕೆ ಬ್ರೇಕ್‌ ಹಾಕಲಾಗಿದೆ.

More from Filmibeat

English summary
Director A.P.Arjun Shocked to see The Fake Twitter Account, And Share His View
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X