ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ ನಿಧನ
ಕನ್ನಡ ಸಿನಿಮಾರಂಗದ ಮತ್ತೊಂದು ಕೊಂಡಿ ಕಳಚಿದೆ. ಇತ್ತೀಚೆಗೆ ಸಾಲು ಸಾಲಾಗಿ ಕನ್ನಡದ ಸಿನಿಮಾರಂಗದ ಹಲವರು ಇಹಲೋಕ ತ್ಯಜಿಸಿದ್ದಾರೆ. ಈಗ ಕನ್ನಡದ ಹಿರಿಯ ನಿರ್ದೇಶಕ, ರಂಗ ಕರ್ಮಿ, ನಿರ್ಮಾಪಕ, ಕಲಾವಿದ ಕಟ್ಟೆ ರಾಮಚಂದ್ರ ನಿದನ ಹೊಂದಿದ್ದಾರೆ. ವಯೋಸಹಜ ಖಾಯಿಲೆ ಇಂದು ಅವರು ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಕಟ್ಟೆ ರಾಮಚಂದ್ರ ಇಂದು ಬೆಳಗಿನ ಜಾವ 5 ಗಂಟಗೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ರಾಮಚಂದ್ರ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ, ಚಿಕಿತ್ಸೆ ಫಲಕಾರಿ ಆಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಚಾಮರಾಜಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ವ್ಯವಸ್ಥೆ ಆಗಿದೆ.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ ಅವರು ನಟ ಡಾ.ವಿಷ್ಣುವರ್ಧನ್ ಕುಟುಂಬಕ್ಕೆ ಆತ್ಮೀಯರು. ವಿಷ್ಣು ವರ್ಧನ್ ಅವರ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅರಿವು ಹಾಗೂ ವೈಶಾಖದ ದಿನಗಳು ಸಿನಿಮಾಗಳಿಂದ ಪ್ರಖ್ಯಾತಿ ಪಡೆದುಕೊಂಡಿದ್ದರು. ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಎಂಬ ಹೆಗ್ಗಳಿಕೆ ಇವರಿಗಿದೆ.

ಕಟ್ಟೆ ರಾಮಚಂದ್ರ ಅವರು ಜನಿಸಿದ್ದು 1947ರಲ್ಲಿ. ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಸ್ಯಾಂಡಲ್ವುಡ್ನಲ್ಲಿ ಸೇವೆ ಸಲ್ಲಿಸಿದ್ದರು. ವೈಶಾಖದ ದಿನಗಳು ಹಾಗೂ ಅರಿವು ಚಿತ್ರಗಳಿಂದ ಖ್ಯಾತಿ ಪಡೆದಿದ್ದಾರೆ. ಕಟ್ಟೆ ರಾಮಚಂದ್ರ ಅವರು ನಟನೆಯಲ್ಲೂ ತೊಡಗಿಸಿಕೊಂಡಿದ್ದರು. 'ಒಂದು ಪ್ರೇಮದ ಕಥೆ', 'ಪ್ರೇಮ ಮತ್ಸರ', 'ಗ್ರಹಣ', 'ನಮ್ಮಮ್ಮ ತಾಯಿ ಅಣ್ಣಮ್ಮ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮನೆ ಮನೆ ಕಥೆಯಲ್ಲಿ, ಅಲೆಗಳು ಸೇರಿದಂತೆ ಕೆಲವು ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗ ಹಲವು ಕಲಾವಿದರ ನಿಧನದಿಂದ ಕನ್ನಡ ಸಿನಿಮಾರಂಗ ಕಂಗಾಲಾಗಿದೆ. ಇದೀಗ ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ ಅವರ ನಿಧನ ಕೂಡ ಮತ್ತಷ್ಟು ನೋವು ತಂದಿದೆ.


Click it and Unblock the Notifications











