ಜಯಶ್ರೀಯ ದೇಹ-ಮನಸ್ಸುಗಳ ಮೇಲಾಗಿದೆ ಅತ್ಯಾಚಾರ: ನಿರ್ದೇಶಕಿ ರೇಖಾರಾಣಿ ಪೋಸ್ಟ್

ನಟಿ, ರೂಪದರ್ಶಿ ಮತ್ತು ಬಿಗ್ ಬಾಸ್ ನ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯ ಪ್ರಗತಿ ಲೇ ಔಟ್ ನಲ್ಲಿರುವ ಸಂಧ್ಯಾಕಿರಣ ಪುನರ್ವಸತಿ ಕೇಂದ್ರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಜಯಶ್ರೀ ರಾಮಯ್ಯ ಶವ ಪತ್ತೆಯಾಗಿದೆ.

Recommended Video

Jayashree ಮಾಡಿದ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಂಡ Rekha Rani | Filmibeat Kannada

ಜಯಶ್ರೀ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಜಯಶ್ರೀ ಆತ್ಮಹತ್ಯೆಗೆ ಖಿನ್ನತೆಯೇ ಕಾರಣ ಎನ್ನಲಾಗುತ್ತಿದೆ. ಎರಡು ವರ್ಷಗಳಿಂದ ಜಯಶ್ರೀ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಈಗಾಗಲೇ ಅನೇಕ ಭಾರಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದರು ಎನ್ನಲಾಗುತ್ತಿದೆ. ಜಯಶ್ರೀ ಬಗ್ಗೆ ನಿರ್ದೇಶಕಿ ಮತ್ತು ಲೇಖಕಿ ರೇಖಾರಾಣಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಮತ್ತೆಂದೂ ಬರಬೇಡ ಮಗಳೆ-ರೇಖಾರಾಣಿ

ಮತ್ತೆಂದೂ ಬರಬೇಡ ಮಗಳೆ-ರೇಖಾರಾಣಿ

ನಟಿ ಜಯಶ್ರೀ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಲೇಖಕಿ ಮತ್ತು ನಿರ್ದೇಶಕಿ ರೇಖಾರಾಣಿ 'ಮತ್ತೆಂದೂ ಬರಬೇಡ ಮಗಳೆ' ಎಂದು ಹೇಳಿದ್ದಾರೆ. ಅಲ್ಲದೆ ಆಘಾತಕಾರಿ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. 'ಈ ಹುಡುಗಿಯ ದೇಹ ಮತ್ತು ಮನಸ್ಸುಗಳ ಮೇಲಾಗಿರುವ ಅತ್ಯಾಚಾರಗಳ ಬಗ್ಗೆ ತಿಳಿದಾಗ ಈ ಮನುಷ್ಯನೆಂಬ ಪ್ರಾಣಿಯ ಬಗ್ಗೆ ಅಸಹ್ಯ ಹುಟ್ಟುತ್ತದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮನುಷ್ಯನೆಂಬ ಪ್ರಾಣಿಯ ಬಗ್ಗೆ ಅಸಹ್ಯ ಹುಟ್ಟುತ್ತದೆ

ಮನುಷ್ಯನೆಂಬ ಪ್ರಾಣಿಯ ಬಗ್ಗೆ ಅಸಹ್ಯ ಹುಟ್ಟುತ್ತದೆ

'ಹೋಗಿದ್ದೀಯ. ಮತ್ತೆಂದೂ ಬರಬೇಡ ಮಗಳೆ. ಜಯಶ್ರೀ ರಾಮಯ್ಯ. ಸಣ್ಣ ವಯಸ್ಸಿನಲ್ಲಿ ನೊಂದು ಬೆಂದು, ಎಲ್ಲರಿಗೂ ಮಸಾಲೆಯಾಗಿ ಹುರಿದುರಿದು, ಉರಿದುರಿದು ಸತ್ತ ಸಣ್ಣ ತರುಣಿಯೆಂಬ ಮಗು. ನನ್ನ ಕರೆಗೆ ಓಗೊಟ್ಟು ಮನೆಗೆ ಬರಲಾರಂಭಿಸಿದ ಈ ಹುಡುಗಿಯ ದೇಹ ಮತ್ತು ಮನಸ್ಸುಗಳ ಮೇಲಾಗಿರುವ ಅತ್ಯಾಚಾರಗಳ ಬಗ್ಗೆ ತಿಳಿದಾಗ ಈ ಮನುಷ್ಯನೆಂಬ ಪ್ರಾಣಿಯ ಬಗ್ಗೆ ಅಸಹ್ಯ ಹುಟ್ಟುತ್ತದೆ' ಎಂದು ಹೇಳಿದ್ದಾರೆ.

ಜಯಶ್ರೀ ಧೈರ್ಯ ತುಂಬಿದ್ದರು ರೇಖಾರಾಣಿ

ಜಯಶ್ರೀ ಧೈರ್ಯ ತುಂಬಿದ್ದರು ರೇಖಾರಾಣಿ

ಈ ಹಿಂದೆ ಜಯಶ್ರೀ ಆತ್ಮಹತ್ಯೆಗೆ ಪ್ರಯತ್ನ ಪಟ್ಟ ಸಮಯದಲ್ಲಿ ರೇಖಾರಾಣಿ ಜಯಶ್ರೀಗೆ ಧೈರ್ಯ ತುಂಬಿ ಸಂದೇಶ ಕಳುಹಿಸಿರುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಜುಲೈ 27, 2020ರಲ್ಲಿ ರೇಖಾರಾಣಿ, 'ನಿನಗೆ ಮಾತನಾಡಬೇಕಿನ್ನಿಸಿದಾಗ. ಅದಷ್ಟು ಹೊತ್ತಾದ್ದರೂ ಪರವಾಗಿಲ್ಲ ಕರೆಮಾಡಿ ಮಾತನಾಡು' ಎಂದು ಹೇಳಿದ್ದರು

ಚಿಕ್ಕ ವಯಸ್ಸಿನಲ್ಲಿ ಆಗಬಾರದ ಘಟನೆ ಆಗಿದೆ ಎಂದಿದ್ದ ಜಯಶ್ರೀ

ಚಿಕ್ಕ ವಯಸ್ಸಿನಲ್ಲಿ ಆಗಬಾರದ ಘಟನೆ ಆಗಿದೆ ಎಂದಿದ್ದ ಜಯಶ್ರೀ

ರೇಖಾರಾಣಿ ಮಾತಿಗೆ ಜಯಶ್ರೀ ಸರಿ ಅಮ್ಮ, ಧನ್ಯವಾದಗಳು ಎಂದು ಹೇಳಿದ್ದರು. ಸಂದೇಶ ಕಳುಹಿಸಿದ ಸ್ಕ್ರೀನ್ ಶಾಟ್ ಅನ್ನು ಶೇರ್ ಮಾಡಿದ್ದಾರೆ.

ಈ ಹಿಂದೆ ಫೇಸ್ ಬುಕ್ ಲೈವ್ ಬಂದಿದ್ದ ಜಯಶ್ರೀ 'ನನಗೆಲ್ಲ ಮೋಸ ನಡೆದಿದೆ. ಚಿಕ್ಕ ವಯಸ್ಸಿನಲ್ಲಿ ನನಗೆ ಆಗಬಾರದ ಘಟನೆ ಆಗಿದೆ. ಅದನ್ನು ಮರೆಯಲು ಆಗುತ್ತಿಲ್ಲ' ಎಂದಿದ್ದರು.

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

More from Filmibeat

English summary
Director and writer Rekha Rani reaction about Jayashree Ramaiah death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X