For Quick Alerts
  ALLOW NOTIFICATIONS  
  For Daily Alerts

  'ರಂಗಿತರಂಗ ಪಾರ್ಟ್-2'ಗೆ ನಡಿತಿದೆಯಾ ತಯಾರಿ?

  |

  ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದ ರಂಗಿರಂತರಗ ಸಿನಿಮಾ ಇತ್ತೀಚಿಗಷ್ಟೆ ನಾಲ್ಕು ವರ್ಷದ ವರ್ಷಾಚರಣೆಯನ್ನು ಮಾಡಿಕೊಂಡಿದ್ದಾರೆ. ಸಿನಿಮಾ ರಿಲೀಸ್ ಆಗಿ ನಾಲ್ಕು ವರ್ಷಗಳೆ ಕಳೆದಿವೆ ಆದ್ರಿನ್ನು ರಂಗಿತಂರಗದ ಗುಂಗಿನಿಂದ ಹೊರಬಂದಿಲ್ಲ ಚಿತ್ರಾಭಿಮಾನಿಗಳು.

  ವಿಭಿನ್ನವಾದ ಕಾನ್ಸೆಪ್ಟ್ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಹೊಸ ತಂಡವೊಂದು ಪರಭಾಷ ಸಿನಿಮಾ ಹಾವಳಿಯ ಎದುರು ನಿಂತು ಗೆದ್ದು ಬೀಗಿತ್ತು. ಈ ಅಭೂತ ಪೂರ್ವ ಗೆಲುವಿಗೆ ಕಾರಣವಾಗಿದ್ದು ಕನ್ನಡ ಚಿತ್ರಪ್ರಿಯರು. ಒಂದೊಳ್ಳೆ ಸಿನಿಮಾವನ್ನು ಪ್ರೇಕ್ಷಕರು ಕೈಬಿಡುವುದಿಲ್ಲ ಎನ್ನುವದಕ್ಕೆ ರಂಗಿತರಂಗ ಉತ್ತಮ ಉದಾಹರಣೆ ಆಗಿತ್ತು.

  4 ವರ್ಷದ ಸಂಭ್ರಮದಲ್ಲಿ 'ರಂಗಿತರಂಗ' ಚಿತ್ರ 4 ವರ್ಷದ ಸಂಭ್ರಮದಲ್ಲಿ 'ರಂಗಿತರಂಗ' ಚಿತ್ರ

  ಅನೂಪ್ ಭಂಡಾರಿ ಮೊದಲ ನಿರ್ದೇಶನ, ನಿರೂಪ್ ಭಂಡಾರಿ ಚೊಚ್ಚಲ ಅಭಿನಯ ಮತ್ತು ಸಂಗೀತ ಚಿತ್ರಪ್ರಿಯರನ್ನು ಹುಚ್ಚುಹಿಡಿಸಿತ್ತು. ಹೊಸ ತಂಡವೊಂದರ ಪ್ರಯತ್ನ ಕಂಡು ಇಡೀ ಚಿತ್ರರಂಗ ಭೇಷ್ ಎಂದಿತ್ತು. ಮತ್ಯಾಕೆ ರಂಗಿತರಂಗ ಸದ್ದು ಮಾಡುತ್ತಿದೆ ಅಂತ ಅಂದ್ಕೋತ್ತಿದ್ದೀರಾ. ರಂಗಿತರಂಗ ಪಾರ್ಟ್-2 ಪ್ಲಾನ್ ನಡೆಯುತ್ತಿದೆ.

  'ರಂಗಿತರಂಗ ಪಾರ್ಟ-2'

  'ರಂಗಿತರಂಗ ಪಾರ್ಟ-2'

  ರಂಗಿತರಂಗ ಪಾರ್ಟ-2 ಗಾಗಿ ಪ್ಲಾನ್ ಮಾಡಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ಚಿತ್ರರಂಗದಲ್ಲಿ ದೊಡ್ಡಮಟ್ಟಕ್ಕೆ ಖ್ಯಾತಿ ತಂದುಕೊಟ್ಟ ರಂಗಿತರಂಗ ಚಿತ್ರದ ಸೀಕ್ವೆಲ್ ಮಾಡುವ ಆಸೆ ವ್ಯಕ್ತಡಿಸಿದ್ದಾರೆ ಅನೂಪ್. ನಾಲ್ಕು ವರ್ಷದ ಸಂಭ್ರಮದಲ್ಲಿರುವ ರಂಗಿತರಂಗ ಟೀಂ ಈ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದೆ.

  ಮತ್ತದೆ ಟೀಂ ಮುಂದುವರೆಯಲಿದೆ

  ಮತ್ತದೆ ಟೀಂ ಮುಂದುವರೆಯಲಿದೆ

  'ರಂಗಿತರಂಗ' ಚಿತ್ರದ ನಿರ್ಮಾಪಕ ಹೆಚ್ ಕೆ ಪ್ರಕಾಶ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಇಬ್ಬರು ಈಗಾಗಲೆ ಪಾರ್ಟ್-2 ಬಗ್ಗೆ ಮಾತುಕತೆ ನಡೆಸಿದ್ದಾರೆ. ಒಂದು ವೇಳೆ ಈ ಮಾತುಕತೆ ವರ್ಕೌಟ್ ಆಗಿದ್ದೆ ಆದ್ರೆ ಮತ್ತದೆ ತಂತ್ರಜ್ಞರನ್ನು ಸೇರಿಸಿಕೊಂಡು ರಂಗಿತರಂಗ ಪಾರ್ಟ್-2 ಸಿನಿಮಾ ಮಾಡಲಿದ್ದಾರಂತೆ. ಆದ್ರೀಗ ನಿರ್ಮಾಪಕ ಪ್ರಕಾಶ್ ಮತ್ತು ನಿರ್ದೇಶಕ ಅನೂಪ್ ಇಬ್ಬರು ಬ್ಯುಸಿ ಇರುವ ಕಾರಣ ಇಬ್ಬರ ಪ್ರಾಜೆಕ್ಟ್ ಮುಗಿದ ಬಳಿಕ ರಂಗಿತರಂಗ ಪಾರ್ಟ್-2 ಸೆಟ್ಟೇರುವ ಸಾಧ್ಯತೆ ಇದೆ.

  'ಬಿಲ್ಲ ರಂಗ ಬಾಷಾ' ಚಿತ್ರದಲ್ಲಿ ಸುದೀಪ್ ಗೆ ನಾಯಕಿ ಆಗುವ ಅವಕಾಶ ಯಾರಿಗೆ? 'ಬಿಲ್ಲ ರಂಗ ಬಾಷಾ' ಚಿತ್ರದಲ್ಲಿ ಸುದೀಪ್ ಗೆ ನಾಯಕಿ ಆಗುವ ಅವಕಾಶ ಯಾರಿಗೆ?

  ರಂಗಿತರಂಗ-2 ಅಂತನೆ ಟೈಟಲ್

  ರಂಗಿತರಂಗ-2 ಅಂತನೆ ಟೈಟಲ್

  ಒಂದುವೇಳೆ ರಂಗಿತರಂಗ ಪಾರ್ಟ್-2 ಸೆಟ್ಟೇರಿದ್ರೆ, ರಂಗಿತರಂಗ ಟೈಟಲ್ ಅನ್ನೆ ಬಳಸಿಕೊಳ್ಳಲಿದ್ದಾರಂತೆ. ಆದ್ರೆ ಕಥೆ ಮಾತ್ರ ಸಂಪೂರ್ಣವಾಗಿ ಭಿನ್ನವಾಗಿರಲಿದೆಯಂತೆ. 2015ರಲ್ಲಿ ಜುಲೈ ನಲ್ಲಿ ರಿಲೀಸ್ ಆಗಿದ್ದ 'ರಂಗಿತರಂಗ' ಸೂಪರ್ ಡೂಪರ್ ಹಿಟ್ ಸಿನಿಮಾವಾಗಿದ್ದು. ಇಲ್ಲಿ ನಿರೂಪ್ ಭಂಡಾರಿಗೆ ಆವಂತಿಕಾ ಶೆಟ್ಟಿ ಮತ್ತು ರಾಧಿಕಾ ಚೇತನ್ ನಾಯಕಿಯಾಗಿ ಬಣ್ಣಹಚ್ಚಿದ್ದರು. ಪಾರ್ಟ್-2ನಲ್ಲೂ ಇವರೆ ಇರ್ತಾರ ಕಾದು ನೋಡಬೇಕು.

  'ಬಿಲ್ಲ ರಂಗ ಭಾಷಾ' ಚಿತ್ರದಲ್ಲಿ ಅನೂಪ್

  'ಬಿಲ್ಲ ರಂಗ ಭಾಷಾ' ಚಿತ್ರದಲ್ಲಿ ಅನೂಪ್

  ನಿರ್ದೇಶಕ ಅನೂಪ್ ಭಂಡಾರಿ ಈಗ ಬಿಲ್ಲ ರಂಗ ಭಾಷ ಚಿತ್ರದ ತಯಾರಿಯಲ್ಲಿದ್ದಾರೆ. ಕಿಚ್ಚ ಸುದೀಪ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾ ಸುದೀಪ್ ಅವರ ಬ್ಯಾನರ್ ನಲ್ಲಿ ಮೂಡಿ ಬರಲಿದೆ. ಅತೀ ದೊಡ್ಡ ಮಟ್ಟದಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು ಚಿತ್ರಕ್ಕಾಗಿ ಈಗಾಗಲೆ ಸಾಕಷ್ಟು ಸಿದ್ಧತೆಗಳು ನಡೆಯುತ್ತಿವೆ. ಸುದೀಪ್ ಸದ್ಯ ಕೋಟಿಗೊಬ್ಬ-3 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕೋಟಿಗೊಬ್ಬ-3 ಮುಗಿದ ಬಳಿಕ ಅಭಿನಯ ಚಕ್ರವರ್ತಿ ಬಿಲ್ಲ ರಂಗ ಭಾಷಾನಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

  English summary
  Rangitaranga Fame director Anup Bhandari is planing to super hit Rangitaranga part-2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X