'ಬಿಲ್ಲ ರಂಗ ಬಾಷಾ'ಗೂ ಮುನ್ನ ಪ್ರಾರಂಭವಾದ ಕಿಚ್ಚನ ಅದ್ದೂರಿ ಸಿನಿಮಾದ ಬಗ್ಗೆ ಅನೂಪ್ ಹೇಳಿದ್ದೇನು?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ 'ಬಿಲ್ಲ ರಂಗ ಬಾಷಾ' ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಟೈಟಲ್ ಮೂಲಕವೆ ಭಾರಿ ಕುತೂಹಲ ಮೂಡಿಸಿದ್ದ 'ಬಿಲ್ಲ ರಂಗ ಬಾಷಾ' ಸೆಟ್ಟೇರುವುದು ಇನ್ನೂ ತಡವಾಗಲಿದೆ. ಈ ಬಗ್ಗೆ ಸ್ವತಹ ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದಾರೆ.

'ಬಿಲ್ಲ ರಂಗ ಬಾಷಾ' ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್ ಆಗಿ ಅನೇಕ ದಿನಗಳೆ ಅಗಿವೆ. ಇನ್ನೇನು ಪೈಲ್ವಾನ್ ಚಿತ್ರೀಕರಣ ಮುಗಿಯುತ್ತಿದ್ದಂತೆ ಕಿಚ್ಚ 'ಬಿಲ್ಲ ರಂಗ ಬಾಷಾ'ನ ಅವತಾರ ತಾಳಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದ್ರೀಗ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದೆ. 'ಬಿಲ್ಲ ರಂಗ ಬಾಷಾ' ಸೆಟ್ಟೇರದಿದ್ದರು ಇಬ್ಬರ ಕಾಂಬಿನೇಶನ್ ನಲ್ಲಿ ಮತ್ತೊಂದು ಅದ್ದೂರಿ ಸಿನಿಮಾ ಬರುತ್ತಿದೆ ಎನ್ನುವುದು ಈಗಾಗಲೆ ಗೊತ್ತಿರುವ ವಿಚಾರ ಈ ವಿಚಾರವಾಗಿ ನಿರ್ದೇಶಕ ಅನೂಪ್ ಭಂಡಾರಿ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಅದ್ದೂರಿ ಸಿನಿಮಾ ಕೈಗೆತ್ತಿಕೊಂಡಿದ್ದೇವೆ

ಮತ್ತೊಂದು ಅದ್ದೂರಿ ಸಿನಿಮಾ ಕೈಗೆತ್ತಿಕೊಂಡಿದ್ದೇವೆ

ಸುದೀಪ್ ಮತ್ತು ಅನೂಪ್ ಕಾಂಬಿನೇಷನ್ ನಲ್ಲಿ ಮತ್ತೊಂದು ಅದ್ದೂರಿ ಸಿನಿಮಾ ಬರುತ್ತಿದೆ. ಈ ಬಗ್ಗೆ ಅನೂಪ್ "ಸುದೀಪ್ ಹಾಗೂ ನಾನು 'ಬಿಲ್ಲ ರಂಗ ಬಾಷಾ' ಚಿತ್ರಕ್ಕು ಮುನ್ನ ಶಾಲಿನಿ ಆರ್ಟ್ಸ್ ನಿರ್ಮಾಣದಲ್ಲಿ ಮತ್ತೊಂದು ಅದ್ದೂರಿ ಸಿನಿಮಾ ಕೈಗೆತ್ತಿಕೊಳ್ಳುತ್ತಿದ್ದೇವೆ. ಈ ಚಿತ್ರದ ಶೀರ್ಷಿಕೆ, ತಾರಾಗಣ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ. ನಿಮ್ಮ ಪ್ರೋತ್ಸಾಹ ಸದಾ ಇರಲಿ" ಎಂದು ಸಾಮಾಜಿಕ ಜಾಲಾತಾಣದಲ್ಲಿ ಬರೆದುಕೊಂಡಿದ್ದಾರೆ.

ಚಿತ್ರೀಕರಣ ಪ್ರಾರಂಭ

ಚಿತ್ರೀಕರಣ ಪ್ರಾರಂಭ

ಸುದೀಪ್ ಸದ್ಯ ಕೋಟಿಗೊಬ್ಬ-3 ಚಿತ್ರೀಕರಣದಲ್ಲಿ ಇದ್ದಾರೆ. ಹಾಗಾಗಿ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸುದೀಪ್ ಬಿಟ್ಟು ಉಳಿದ ಪಾತ್ರಗಳನ್ನು ಸೆರೆ ಹಿಡಿಯಲಾಗುತ್ತಿದೆಯಂತೆ. ಚಿತ್ರದಲ್ಲಿ ಸುದೀಪ್ ಮತ್ತು ಅನೂಪ್ ಭಂಡಾರಿ ಬಿಟ್ಟರೆ ಬೇರೆ ಯಾವ ಮಾಹಿತಿಯೂ ಬಹಿರಂಗವಾಗಿಲ್ಲ. ಆದ್ರೆ ಸಧ್ಯದಲ್ಲೇ ಎಲ್ಲಾ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

ಅಲ್ಲು ಅರ್ಜುನ್ ಭೇಟಿಯಾದ ಅನೂಪ್

ಅಲ್ಲು ಅರ್ಜುನ್ ಭೇಟಿಯಾದ ಅನೂಪ್

ಸುದೀಪ್ ಚಿತ್ರದ ಒತ್ತಡ ನಡುವೆಯು ಅನೂಪ್ ಭಂಡಾರಿ ತೆಲುಗು ನಟ ಅಲ್ಲು ಅರ್ಜುನ್ ಭೇಟಿಯಾಗಿದ್ದಾರೆ. ಅಲ್ಲು ಅರ್ಜುನ್ ಭೇಟಿಯಾಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ದಿಢೀರನೆ ಅಲ್ಲು ಅರ್ಜುನ್ ಭೇಟಿಯಾದ ರಹಸ್ಯವೇನು ಎನ್ನುವುದನ್ನು ಅನೂಪ್ ಬಿಟ್ಟುಕೊಟ್ಟಿಲ್ಲ. ಸಿನಿಮಾ ಪ್ರಾರಂಭವಾದ ಸಮಯದಲ್ಲಿ ಭೇಟಿಯಾಗಿರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಕೋಟಿಗೊಬ್ಬ-3 ಮುಕ್ತಾಯ

ಕೋಟಿಗೊಬ್ಬ-3 ಮುಕ್ತಾಯ

ಕೋಟಿಗೊಬ್ಬ-3 ಚಿತ್ರೀಕರಣಕ್ಕೆಂದು ಸುದೀಪ್ ಪೋಲ್ಯಾಂಡ್ ಗೆ ತೆರಳಿದ್ದರು. ಕಳೆದ ಒಂದು ವಾರದಿಂದ ಪೋಲ್ಯಾಂಡ್ ನಲ್ಲಿ ಬೀಡುಬಿಟ್ಟಿದ್ದ ಚಿತ್ರತಂಡ ಈಗ ಚಿತ್ರೀಕರಣ ಮುಗಿಸಿ ಭಾರತಕ್ಕೆ ವಾಪಾಸ್ ಆಗುತ್ತಿದ್ದಾರೆ. ಚಿತ್ರದ ಹೈ ವೋಲ್ಟೇಜ್ ಚೇಸಿಂಗ್ ದೃಶ್ಯ ಸೆರೆಹಿಡಿಯಲು ಪ್ಯೊಲ್ಯಾಂಡ್ ಗೆ ತೆರಳಿತ್ತು ಚಿತ್ರತಂಡ. ಇನ್ನೇನು ಕೋಟಿಗೊಬ್ಬ-3 ಮುಗಿಯುತ್ತಿದ್ದಂತೆ ಅನೂಪ್ ಜೊತೆ ಸಿನಿಮಾ ಪ್ರಾರಂಭಿಸಲಿದ್ದಾರೆ ಸುದೀಪ್.

More from Filmibeat

English summary
Kannada director Anup Bhandari revealed about first movie with Sudeep and his.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X