»   » 'ಕಿಸ್' ಕೊಡಲು ನೀವು ರೆಡಿಯಿದ್ದರೆ, ಹೀರೋಯಿನ್ ಆಗ್ಬಹುದು.!

'ಕಿಸ್' ಕೊಡಲು ನೀವು ರೆಡಿಯಿದ್ದರೆ, ಹೀರೋಯಿನ್ ಆಗ್ಬಹುದು.!

Posted By:
Subscribe to Filmibeat Kannada

'ಕಿಸ್' ಮಾಡಲು ಯಾರು ಸಿದ್ಧ ಇದ್ದೀರಾ ಎಂದು ಅಪ್ಪಟ ಕನ್ನಡದ ಹುಡುಗಿಯರಿಗೆ ಜನಪ್ರಿಯ ನಿರ್ದೇಶಕ ಎ.ಪಿ.ಅರ್ಜುನ್ ಕೇಳ್ತಿದ್ದಾರೆ.

'ಕಿಸ್' ಅಂದ ತಕ್ಷಣ ಮುಜುಗರ ಪಡಬೇಕಾಗಿಲ್ಲ. ಎ.ಪಿ.ಅರ್ಜುನ್ ಪ್ರಕಾರ, 'ಕಿಸ್' ಅಂದ್ರೆ ''ಕೀಪ್ ಇಟ್ ಸಿಂಪಲ್ ಅಂಡ್ ಶಾರ್ಟ್'' ಅಂತರ್ಥ.

Director AP Arjun in search of Bold Heroine for 'Kiss'

ಈ ವರ್ಷದ ಪ್ರೇಮಿಗಳ ದಿನ ಸೆಟ್ಟೇರಿದ 'ಕಿಸ್' ಚಿತ್ರಕ್ಕೆ ಜನಪ್ರಿಯ ಕಿರುತೆರೆ ನಟ 'ಜೊತೆ ಜೊತೆಯಲಿ' ಧಾರಾವಾಹಿ ಖ್ಯಾತಿಯ ವಿರಾಟ್ ಆಯ್ಕೆ ಆಗಿದ್ದಾರೆ. ಈಗ ನಿರ್ದೇಶಕರು ಬೋಲ್ಡ್ ಹೀರೋಯಿನ್ ಹುಡುಕಾಟದಲ್ಲಿದ್ದಾರೆ.[ಕಿಸ್ ಕೊಡೋಕೆ ಹುಡುಗ ರೆಡಿ, ಆದ್ರೆ ಹುಡುಗಿನೇ ಸಿಕ್ಕಿಲ್ಲಾ.!]

ಬರುವ ಆಗಸ್ಟ್ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭ ಮಾಡಲು 'ರಾಷ್ಟ್ರ ಕೂಟ ಪಿಕ್ಚರ್ಸ್' ನಿರ್ಮಾಪಕ ವಿ.ರವಿಕುಮಾರ್ ಸಿದ್ಧವಾಗಿದ್ದಾರೆ.

Director AP Arjun in search of Bold Heroine for 'Kiss'

'ಕಿಸ್'...ತುಂಟ ತುಟಿಗಳ ಆಟೋಗ್ರಾಫ್ ಅಡಿ ಬರಹ ಇರುವ ಚಿತ್ರದ ಚಿತ್ರೀಕರಣ ಬೆಂಗಳೂರು, ಮೈಸೂರು ಹಾಗೂ ಆಸ್ಟ್ರೇಲಿಯಾ ದೇಶದಲ್ಲಿ ನಡೆಯಲಿದೆ.

'ಕಿಸ್' ಕೊಡಲು ನೀವು (ಹುಡುಗಿಯರು ಮಾತ್ರ) ರೆಡಿಯಿದ್ದರೆ, ನಿಮ್ಮ ಫೋಟೋ ಹಾಗೂ ವಿವರಗಳನ್ನ kiss@gmail.com ಗೆ ಕಳುಹಿಸಿ....ಅದೃಷ್ಟ ಚೆನ್ನಾಗಿದ್ದರೆ ಹೀರೋಯಿನ್ ಆಗ್ಬಹುದು.

English summary
Kannada Director AP Arjun is looking for Bold Heroine for his directorial next 'Kiss'. If you are interested, mail your details to kissgmail.com.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada