For Quick Alerts
  ALLOW NOTIFICATIONS  
  For Daily Alerts

  ಹೊಸ ಪ್ರತಿಭೆಗಳ ಹುಡುಕಾಟದಲ್ಲಿರುವ ಎ.ಪಿ ಅರ್ಜುನ್ ಏನಂತಾರೆ

  By Suneetha
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹಿಟ್ ಸಿನಿಮಾ 'Mr.ಐರಾವತ' ನಿರ್ದೇಶನ ಮಾಡಿದ್ದ ನಿರ್ದೇಶಕ ಎ.ಪಿ ಅರ್ಜುನ್ ಅವರು ತಮ್ಮ ಮುಂದಿನ ಪ್ರಾಜೆಕ್ಟ್ ಕಡೆ ಹೆಜ್ಜೆ ಹಾಕಿದ್ದು, ಇದೀಗ ಮತ್ತೊಮ್ಮೆ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

  ಸ್ಟಾರ್ ನಟ ದರ್ಶನ್ ಅವರಿಗೆ ಒಬ್ಬರಿಗೆ ಬಿಟ್ಟರೆ ಮಿಕ್ಕಂತೆ ಎಲ್ಲಾ ಹೊಸಬರನ್ನು ಹಾಕಿಕೊಂಡು ಅರ್ಜುನ್ ಅವರು ಸಿನಿಮಾ ಮಾಡಿದ್ದರು. ಅಂತೆಯೇ ಇದೀಗ ತಮ್ಮ ಮುಂದಿನ ಹೊಸ ಪ್ರಾಜೆಕ್ಟ್ ಗೆ ಹೊಸಬರಿಗೆ ಅವಕಾಶ ಕೊಡಲು ಸಿದ್ಧರಾಗಿದ್ದು, ನವ ಪ್ರತಿಭೆಗಳ ಹುಡುಕಾಟದಲ್ಲಿ ತೊಡಗಿದ್ದಾರೆ.[ದರ್ಶನ್ ಮತ್ತು ಎ.ಪಿ.ಅರ್ಜುನ್ ಮಧ್ಯೆ ತಂದಿಟ್ಟವರಾರು?]

  ಈ ಮೊದಲು ಲೂಸ್ ಮಾದ ಯೋಗೇಶ್ ಅವರಿಗೆ 'ಅಂಬಾರಿ' ಸಿನಿಮಾದ ಮೂಲಕ ಅವಕಾಶ ಕೊಟ್ಟಿದ್ದು, ತದನಂತರ 'ಅದ್ಧೂರಿ' ಸಿನಿಮಾದ ಮೂಲಕ ಧ್ರುವ ಸರ್ಜಾ ಅವರಿಗೆ ಅವಕಾಶ ನೀಡಿದ್ದರು.

  ಸದ್ಯಕ್ಕೆ ಹೊಸ ಪ್ರತಿಭೆಗಳ ಹುಡುಕಾಟದಲ್ಲಿರುವ ನಿರ್ದೇಶಕ ಎ.ಪಿ ಅರ್ಜುನ್ ಅವರನ್ನು ನಿಮ್ಮ ಫಿಲ್ಮಿಬೀಟ್ ಕನ್ನಡ ಈ ವಿಚಾರದ ಬಗ್ಗೆ ಮಾತಿಗೆಳೆದಾಗ ಅವರು ಏನಂದ್ರು ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

  ಫಿಲ್ಮಿಬೀಟ್: ಆಡಿಶನ್ ಯಾವಾಗ?

  ಫಿಲ್ಮಿಬೀಟ್: ಆಡಿಶನ್ ಯಾವಾಗ?

  ಅರ್ಜುನ್: ಸದ್ಯಕ್ಕೆ ಆಡಿಶನ್ ಶುರು ಮಾಡಿಲ್ಲ, ಮುಂದಿನ ತಿಂಗಳು ಫೆಬ್ರವರಿಯಲ್ಲಿ ಆಡಿಶನ್ ಶುರು ಮಾಡುತ್ತಿದ್ದೇವೆ. ಈವರೆಗೂ ನಮಗೆ ಯಾರೂ ಸಿಕ್ಕಿಲ್ಲ. ನೋಡ್ಬೇಕು ಮುಂದಿನ ತಿಂಗಳು ಬಹುತೇಕ ಹೀರೋ ಮತ್ತು ಹಿರೋಯಿನ್ ಅನ್ನು ಸೆಲೆಕ್ಟ್ ಮಾಡ್ತೀವಿ.[ಎ.ಪಿ.ಅರ್ಜುನ್ ವಿರುದ್ಧ ತಿರುಗಿಬಿದ್ದ ದರ್ಶನ್ ಕಂಪನಿ]

  ಸ್ಟಾರ್ ಗಳಿಗೆ ಬಿಟ್ಟು ಹೊಸಬರಿಗೆ ಅವಕಾಶ ಯಾಕೆ?

  ಸ್ಟಾರ್ ಗಳಿಗೆ ಬಿಟ್ಟು ಹೊಸಬರಿಗೆ ಅವಕಾಶ ಯಾಕೆ?

  ನಾನು ಸ್ಟಾರ್ ನಟರಿಗೆ ಅಂತ ಸಿನಿಮಾ ಮಾಡಿದ್ದು ದರ್ಶನ್ ಅವರಿಗೆ 'ಐರಾವತ' ಮಾತ್ರ. ಮಿಕ್ಕಿದ್ದೆಲ್ಲಾ ನನ್ನ ಸಿನಿಮಾಗಳು ಹೊಸಬರ ಜೊತೆನೇ. ನಾನು 'ಅಂಬಾರಿ' ಸಿನಿಮಾ ಮಾಡಿದ್ದಾಗ ಲೂಸ್ ಮಾದ ಯೋಗೇಶ್ ಹೊಸಬರೇ, ಆಮೇಲೆ 'ಅದ್ಧೂರಿ' ಗೂ ಧ್ರುವ ಸರ್ಜಾನ ಹಾಕಿಕೊಂಡೆ ಅವರೂ ಸ್ಯಾಂಡಲ್ ವುಡ್ ಗೆ ಹೊಸಬರೇ 'ರಾಟೆ'ಗೆ ಧನಂಜಯ್ ಕೂಡ ಇಂಡಸ್ಟ್ರಿಗೆ ಹೊಸಬ. ಆದ್ರಿಂದ ನಾನು ಹೊಸಬರಿಗೆ ಅವಕಾಶ ಕೊಡಲು ಇಷ್ಟಪಡುತ್ತೇನೆ.

  ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲು ಕಾರಣ

  ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲು ಕಾರಣ

  ನಾನು ಯಾವಾಗಲೂ ಹೊಸಬರಿಗೆ ಸಿನಿಮಾ ಮಾಡಲು ಇಷ್ಟಪಡುತ್ತೇನೆ. ಅದು ಬಿಟ್ಟರೆ ಅದರಲ್ಲಿ ಹೊಸತನ ಏನೂ ಇಲ್ಲ. ಹೊಸಬರನ್ನು ಗುರುತಿಸಲು ನಾನು ಆಗಾಗ ಪ್ರಯತ್ನಿಸ್ತಾ ಇರುತ್ತೇನೆ. ನನ್ನ ಮೊದಲ ನಿರ್ದೇಶನದ ಮೂರು ಚಿತ್ರಗಳು ಹೊಸಬರ ಜೊತೆ ಮಾಡಿದ್ದು. ಅದು ಹಿಟ್ ಆಯ್ತು ಆದ್ರಿಂದ ನನಗೆ ಹೊಸ ಪ್ರತಿಭೆಗಳನ್ನು ಗುರುತಿಸೋದು ಅಂದ್ರೆ ಇಷ್ಟ.

  ಈ ಬಾರಿ ಯಾವ ಥರ ಪ್ರಾಜೆಕ್ಟ್

  ಈ ಬಾರಿ ಯಾವ ಥರ ಪ್ರಾಜೆಕ್ಟ್

  ಈ ಬಾರಿ ಒಂದು ಪಕ್ಕಾ ಲವ್ ಸ್ಟೋರಿ ಅದೂ ಬೇರೆ ಥರದ ಲವ್ ಸ್ಟೋರಿ ಹೇಳೋಕೆ ಹೊರಟಿದ್ದೀನಿ. ಇನ್ನು ಲವ್ ಸ್ಟೋರಿ ಅಂತ ಬಂದಾಗ ಹೊಸ ಮುಖಗಳು ತೆರೆ ಮೇಲೆ ಇದ್ರೆ ತುಂಬಾ ಇಂಪಾಕ್ಟ್ ಆಗುತ್ತೆ. ಸೋ ಅದಿಕ್ಕೆ ಹೊಸ ಮುಖಗಳಿಗೆ ನನ್ನ ಆದ್ಯತೆ.

  ಹೀರೋ ಮತ್ತು ಹಿರೋಯಿನ್ ಹೇಗಿರಬೇಕು

  ಹೀರೋ ಮತ್ತು ಹಿರೋಯಿನ್ ಹೇಗಿರಬೇಕು

  ಹಿರೋಯಿನ್ ತುಂಬಾ ಕ್ಯೂಟ್ ಆಗಿ ಬಬ್ಲಿ ಬಬ್ಲಿ ಆಗಿರಬೇಕು. ಹೀರೋ ಕೂಡ ಅಷ್ಟೆ ಕ್ಯೂಟ್ ಆಗಿ ಚಾಕ್ಲೇಟ್ ಹೀರೋ ತರ ಇರಬೇಕು. ಸೂಪರ್ ಹಿಟ್ ಜೋಡಿ ಥರ ಇರಬೇಕು. ಸುಮಾರು 23 ವರ್ಷದ ಹೀರೋ ಮತ್ತು 20 ವರ್ಷದ ಹಿರೋಯಿನ್ ಹುಡುಕಾಟದಲ್ಲಿದ್ದೇನೆ.

  ಚಿತ್ರಕ್ಕೆ ನಿರ್ಮಾಪಕರು ಯಾರು

  ಚಿತ್ರಕ್ಕೆ ನಿರ್ಮಾಪಕರು ಯಾರು

  ರಾಷ್ಟ್ರಕೂಟ ಪಿಕ್ಚರ್ಸ್, ಪಿ.ರವಿಕುಮಾರ್ ಅಂತ ಅವರಿಗೆ ಈ ಸಿನಿಮಾ ಮೊದಲನೇ ಸಿನಿಮಾ.

  ಯಾವಾಗ ಶೂಟಿಂಗ್ ಆರಂಭ

  ಯಾವಾಗ ಶೂಟಿಂಗ್ ಆರಂಭ

  ಮುಂದಿನ ತಿಂಗಳು ಆಡಿಶನ್ ಮುಗಿಸಿ ಮಾರ್ಚ್ ಕೊನೆಗೆ ಶೂಟಿಂಗ್ ಮಾಡಲು ಪ್ಲಾನ್ ಮಾಡಿದ್ದೇವೆ. ಆದಷ್ಟು ಬೇಗ ಎಲ್ಲ ಮುಗಿಸಿ ಚಿತ್ರೀಕರಣಕ್ಕೆ ತೊಡಗುತ್ತೇವೆ.

  English summary
  Director A P Arjun after having worked with a star like Darshan in Airavata is back to helm a romance, for which he plans to cast only newcomers. Considering that Arjun has worked well with actors such as Yogi (Ambaari) and Dhruva Sarja (Addhuri), who started their career with him, he now intends to recreate the magic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X