twitter
    For Quick Alerts
    ALLOW NOTIFICATIONS  
    For Daily Alerts

    ಕ್ಷಮೆ ಕೇಳಿದರೆ ಚಿತ್ರರಂಗದ ಘನತೆ ಹೆಚ್ಚಿಸುತ್ತೆ: ಬಿ.ಎಸ್.ಲಿಂಗದೇವರು

    |

    #ಮೀಟೂ ಅಭಿಯಾನದಿಂದ ಸ್ಯಾಂಡಲ್ ವುಡ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ನಡುವಿನ #ಮೀಟೂ ಫೈಟ್ ತಾರಕಕ್ಕೆ ಏರಿದ್ಮೇಲೆ ಫಿಲ್ಮ್ ಚೇಂಬರ್ ನಲ್ಲಿ ಸಭೆ ನಡೆಯಿತು. ಆದ್ರೆ, ಇಬ್ಬರ ನಡುವೆ ಒಮ್ಮತ ಮೂಡಿಬರದ ಕಾರಣ ಸಂಧಾನ ಸಭೆ ವಿಫಲಗೊಂಡಿತು.

    ''ಕಾಂಪ್ರೊಮೈಸ್ ಬಗ್ಗೆ ಮಾತೇ ಇಲ್ಲ'' ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅರ್ಜುನ್ ಸರ್ಜಾ ಹೇಳಿದರು. ಇನ್ನೂ ''ನಾನು ತಪ್ಪು ಮಾಡಿಲ್ಲ. ಯಾವುದೇ ಕಾರಣಕ್ಕೂ ನಾನು ಕ್ಷಮೆ ಕೇಳಲ್ಲ'' ಅಂತ ಶ್ರುತಿ ಹರಿಹರನ್ ಕೂಡ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದರು.

    ಆದ್ರೆ, ಇವರಿಬ್ಬರು ಕೇಳುವ ಕ್ಷಮೆ ಕನ್ನಡ ಚಿತ್ರರಂಗದ ಘನತೆ ಹೆಚ್ಚಿಸುತ್ತೆ ಎಂದು ಎರಡು ರಾಷ್ಟ್ರ ಪ್ರಶಸ್ತಿ ಪಡೆದ 'ನಾನು ಅವನಲ್ಲ ಅವಳು' ಚಿತ್ರದ ನಿರ್ದೇಶಕ ಬಿ.ಎಸ್.ಲಿಂಗದೇವರು ಅಭಿಪ್ರಾಯ ಪಟ್ಟಿದ್ದಾರೆ. ಮುಂದೆ ಓದಿರಿ...

    ಕುಟುಂಬಗಳ ಘನತೆ ಬೀದಿಯಲ್ಲಿ...

    ಕುಟುಂಬಗಳ ಘನತೆ ಬೀದಿಯಲ್ಲಿ...

    ''I support the Actress, Actor and Director - who is a victim

    #MeTooಸಿನಿಮಾ ಉದ್ಯಮದ ಘನತೆ ಮತ್ತು ಸದರಿ ಉದ್ಯಮದಲ್ಲಿ ತೊಡಗಿಕೊಂಡಿರುವ ಹಲವಾರು ಕುಟುಂಬಗಳ ಘನತೆಯನ್ನ ಬೀದಿಗೆ ತಂದು ಸಂಭ್ರಮಿಸುತ್ತಿದ್ದಾರಾ ಅನ್ನಿಸ್ತಾ ಇದೆ'' - ಬಿ.ಎಸ್.ಲಿಂಗದೇವರು, ನಿರ್ದೇಶಕ

    ಅರ್ಜುನ್ ಸರ್ಜಾ ರಾಜಿ ಆಗಲ್ಲ: ಶ್ರುತಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು.!ಅರ್ಜುನ್ ಸರ್ಜಾ ರಾಜಿ ಆಗಲ್ಲ: ಶ್ರುತಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು.!

    ಲಿಂಗದೇವರು ಕೊಟ್ಟ ಉದಾಹರಣೆ

    ಲಿಂಗದೇವರು ಕೊಟ್ಟ ಉದಾಹರಣೆ

    ''ಉದಾ: ನಾನು ನಟಿಸಬೇಕಿದ್ದ ಒಂದು ಸಿನಿಮಾಕ್ಕೆ ಎರಡು ಕಂತುಗಳಲ್ಲಿ ಸಂಭಾವನೆ ನೀಡಲಾಗುವುದು ಅಂತ ಒಪ್ಪಂದ ಆಗಿತ್ತು ಮತ್ತು ಆ ಎರಡನೇ ಕಂತಿನ ಹಣ ಸಂದಾಯ ಆಗೋದು ಯಾವಾಗ ಅಂದ್ರೆ, ವೈಯುಕ್ತಿಕವಾಗಿ ನಾನು ಅವರ ಜೊತೆ ಕಾಲ ಕಳೆದಾಗ. ಇದು ಗೊತ್ತಾದಾಗ ನಾನು ಹೊರಬಂದೆ. ಇನ್ನೂ ಮುಂದೆ ಹೋಗುವ ಅವರು "ನಾ ಮಾಡಬೇಕಾದ ಪಾತ್ರವನ್ನ ಬೇರೆಯವರ ನಿರ್ವಹಿಸಿದರು ಮತ್ತು ಆ ಎರಡನೇ ಕರಾರಿಗೆ ಒಪ್ಪಿಯೇ ಆ ಪಾತ್ರ ಮಾಡಿರುತ್ತಾರೆ" ಅನ್ನೋ ಮಾತು ಚಿತ್ರರಂಗದವರನ್ನ ಬೀದಿಗೆ ತಂದದ್ದಕ್ಕೆ ಸಾಕ್ಷ್ಯ. ಇದನ್ನ ನಾನು ಖಂಡಿಸುತ್ತೇನೆ''

    ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ.. ವೇಸ್ಟ್ ಪ್ರಶ್ನೆಗೆ ಉತ್ತರ ಕೊಡಲ್ಲ ಎಂದ ಶ್ರುತಿ ಹರಿಹರನ್.!ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ.. ವೇಸ್ಟ್ ಪ್ರಶ್ನೆಗೆ ಉತ್ತರ ಕೊಡಲ್ಲ ಎಂದ ಶ್ರುತಿ ಹರಿಹರನ್.!

    ನ್ಯಾಯ ಎಲ್ಲಿ ಸಿಗುತ್ತೆ.?

    ನ್ಯಾಯ ಎಲ್ಲಿ ಸಿಗುತ್ತೆ.?

    ''ಸೂಕ್ಷ್ಮವಾದದನ್ನ ಕೇವಲ ತಮ್ಮ ತಮ್ಮ ದೃಷ್ಟಿಕೋನಕ್ಕೆ ಸೀಮಿತ ಮಾಡಿಕೊಂಡು, ನಮ್ಮ ದೇಶದ ಕಾನೂನಿನ ಅನ್ವಯ ಈ ರೀತಿಯ ಅಪರಾಧಗಳನ್ನ ಹೇಗೆ ಪ್ರತಿಕ್ರಿಯೆ ಮಾಡಬೇಕು ಅನ್ನುವುದನ್ನ ಗಮನಿಸಿಲ್ಲ ಎಂಬ ಭಾವನೆ ನನ್ನದು. ಉದಾಹರಣೆಗೆ ನ್ಯಾಯಕ್ಕಾಗಿ ಈ ಹೋರಾಟ ಅನ್ನೋದೇ ಇದ್ದರೆ, ನ್ಯಾಯ ಎಲ್ಲಿ ಸಿಗುತ್ತೆ.? ಸಾಮಾಜಿಕ ಜಾಲತಾಣ.? ಮಾಧ್ಯಮದಲ್ಲಿ.? ಎಲ್ಲಿ.?''

    ಅರ್ಜುನ್ ಸರ್ಜಾ-ಶ್ರುತಿ ಹರಿಹರನ್ ಸಂಧಾನ ವಿಫಲ: ಅಂಬಿ ಪ್ರಯತ್ನ ಫೇಲ್.!ಅರ್ಜುನ್ ಸರ್ಜಾ-ಶ್ರುತಿ ಹರಿಹರನ್ ಸಂಧಾನ ವಿಫಲ: ಅಂಬಿ ಪ್ರಯತ್ನ ಫೇಲ್.!

    ಅಪರಾಧಿಗಳಿಗೆ ಶಿಕ್ಷೆ

    ಅಪರಾಧಿಗಳಿಗೆ ಶಿಕ್ಷೆ

    ''ಈ ಸದರಿ ಅಪರಾಧಗಳಿಗೆ IPC sec 354, 354 A B C ಮತ್ತು 509ರ ಅನ್ವಯ ಆಗುತ್ತೆ. (ಪೋಲಿಸ್ ಅಧಿಕಾರಿಯ ಪ್ರಕಾರ) ಸದರಿ IPC Section ಗಳಲ್ಲಿ ವಿವರಿಸಿರುವಂತೆ ನ್ಯಾಯ ಸಿಗೋದು ಕಷ್ಟ ಎಂಬ ಅನಿಸಿಕೆ ನನ್ನದು. ಇಲ್ಲಿ ಇನ್ನೊಂದು ಜ್ಞಾಪಕ ಇಟ್ಕೋಬೇಕಾಗಿರೋದು Justice delayed itself is a injustice''

    ಸಂಧಾನದ ಮಾತೇ ಇಲ್ಲ, ಮನಸ್ಸಿನ ನೋವು ತೋಡಿಕೊಂಡ ಸರ್ಜಾಸಂಧಾನದ ಮಾತೇ ಇಲ್ಲ, ಮನಸ್ಸಿನ ನೋವು ತೋಡಿಕೊಂಡ ಸರ್ಜಾ

    ಜವಾಬ್ದಾರಿಯಿಂದ ನಡೆದುಕೊಳ್ಳಬೇಕು

    ಜವಾಬ್ದಾರಿಯಿಂದ ನಡೆದುಕೊಳ್ಳಬೇಕು

    ''ಇವತ್ತಿನ TV ಮಾಧ್ಯಮ ಪ್ರಸಿದ್ಧ ವ್ಯಕ್ತಿಗಳ ವೈಯಕ್ತಿಕ ಬದುಕಿನಲ್ಲಿ ಪ್ರವೇಶ ಮಾಡಿರುವ ಹಿನ್ನೆಲೆಯಲ್ಲಿ ಸಿನಿಮಾದಲ್ಲಿ ದುಡಿಯುವ ಎಲ್ಲರೂ ಸ್ವಲ್ಪ ಸಂಯಮದಿಂದ ಮತ್ತು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ ಅನ್ನುವ ಭಾವನೆ ನನ್ನದು. TV ಮಾಧ್ಯಮದವರಿಗೆ ವ್ಯಾಪಾರ, ಹಾಗಾಗಿ ಅದನ್ನ ನಾವು ಪ್ರಶ್ನಿಸಿದ್ದೇ ನಾವು ನಮ್ಮಲ್ಲೇ ಮಾರ್ಪಾಡು ಮಾಡುವ ಮೂಲಕ ಮಾದರಿ ಆಗಬೇಕಿದೆ''

    ಬೆಂಬಲಿಸುವರು ಬದುಕನ್ನು ರೂಪಿಸಲು ಬರಲ್ಲ

    ಬೆಂಬಲಿಸುವರು ಬದುಕನ್ನು ರೂಪಿಸಲು ಬರಲ್ಲ

    ''ಶೃತಿ ಹರಿಹರನ್ ರವರೇ ನೀವು ಅದ್ಭುತ ನಟಿ, ಚಲನಚಿತ್ರ ರಂಗಕ್ಕೆ ಬೇಕು. ವೈಯಕ್ತಿಕ ಹೋರಾಟದ ತೀವ್ರತೆ ಕಾಲ ಕಳೆದಂತೆ ಇರಲ್ಲ. ಈಗ ನಿಮ್ಮ ಈ ಆಂದೋಲನ/ಹೋರಾಟಕ್ಕೆ ಬೆಂಬಲಿಸುತ್ತಿರುವವರು ನಿಮ್ಮ ಬದುಕನ್ನ ರೂಪಿಸಲು ಬರಲ್ಲ. ನಾನು ನನ್ನ ಸ್ವ-ಅನುಭವದಿಂದ ನಿಮ್ಮಲ್ಲಿ ಈ ಮಾತನ್ನ ಹೇಳ್ತಾ ಇದ್ದೇನೆ. Dont carried away with the 'temporary' support you are getting''

    ಶೃತಿ ಕೂಡ ಕ್ಷಮೆ ಕೇಳಲಿ

    ಶೃತಿ ಕೂಡ ಕ್ಷಮೆ ಕೇಳಲಿ

    ''ಒಂದು ಕ್ಷಮೆ ಕೇಳಿ ದಯವಿಟ್ಟು. ಹಾಗೆ, ಅರ್ಜುನ್ ಸರ್ಜಾ ರವರು ಮತ್ತು ಅವರ ಕುಟುಂಬ ಚಲನಚಿತ್ರ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಹಿರಿಯರು ಇರುವ ನಿಮ್ಮ ಕುಟುಂಬ ಕೂಡ ಕ್ಷಮಿಸಿ ಮತ್ತು ಆಗ ನಡೆದ ಘಟನೆ ಶೃತಿ ಹರಿಹರನ್ ಅವರನ್ನ ಘಾಸಿಗೊಳಿಸಿದೆ. ಹಾಗಾಗಿ ನೀವು ಕೂಡ ಕ್ಷಮೆ ಕೇಳುವ ಮೂಲಕ ಸಮಾಜಕ್ಕೆ ಕ್ಷಮಾದಾನದ ಶಕ್ತಿಯನ್ನ ಹೇಳಿ ಎಂಬ ಮನವಿ ನನ್ನದು''

    ಚಿತ್ರರಂಗದ ಘನತೆ ಹೆಚ್ಚಿಸುತ್ತೆ

    ಚಿತ್ರರಂಗದ ಘನತೆ ಹೆಚ್ಚಿಸುತ್ತೆ

    ''ಯೋಚಿಸಿ ನೋಡಿ, ತುಂಬ ಸಲಹೆಗಳನ್ನ ತೆಗೆದುಕೊಳ್ಳಲು ಹೋಗಬೇಡಿ. ಇದು ನಿಮ್ಮ ನಿರ್ಧಾರ ಆಗಬೇಕೇ ವಿನಃ ಬೇರೆಯವರ ಮಾತುಗಳು ಪ್ರೇರಣೆ ಆಗಬಾರದು. ನೀವಿಬ್ಬರೂ ಕೇಳುವ ಒಂದು ಕ್ಷಮೆ ಚಲನಚಿತ್ರ ರಂಗದ ಘನತೆಯನ್ನ ಹೆಚ್ಚಿಸುತ್ತೆ ಎಂಬ ಭಾವನೆ ನನ್ನದು'' - ಬಿ.ಎಸ್.ಲಿಂಗದೇವರು, ನಿರ್ದೇಶಕ

    English summary
    Director BS Lingadevaru expresses his opinion about #MeToo.
    Friday, October 26, 2018, 14:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X