For Quick Alerts
  ALLOW NOTIFICATIONS  
  For Daily Alerts

  1988ರಲ್ಲೇ ಮೀಟೂ ಆರೋಪ ಎದುರಿಸಿದ್ದ ನಿರ್ದೇಶಕ ಲಿಂಗದೇವರು

  |

  ಎಲ್ಲೇಲ್ಲೂ ಮೀಟೂ ಆರೋಪವೇ ಸದ್ದು ಮಾಡುತ್ತಿದೆ. ಸ್ಯಾಂಡಲ್ ವುಡ್ ನಲ್ಲಂತೂ ಈ ಮೀಟೂ ಆರೋಪ ಕೋರ್ಟ್, ಪೊಲೀಸ್ ಸ್ಟೇಷನ್ನು ಅಂತ ದೊಡ್ಡ ಸಂಚಲನ ಸೃಷ್ಟಿಸಿದೆ. ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡಿದ್ರೆ, ನಟಿ ಸಂಜನಾ ಗಲ್ರಾನಿ ನಿರ್ದೇಶಕ ರವಿಶ್ರೀವತ್ಸ ವಿರುದ್ಧ ಮೀಟೂ ಆರೋಪ ವರಿಸಿದ್ದರು.

  ಸಾಮಾನ್ಯವಾಗಿ ಇಷ್ಟು ದಿನ ಯುವತಿಯರು ಮೀಟೂ ಆರೋಪ ಮಾಡ್ತಿದ್ರು. ಈಗ ಕನ್ನಡದ ಖ್ಯಾತ ನಿರ್ದೇಶಕ ಲಿಂಗದೇವರು ತಮ್ಮ ಮೇಲೆ 30 ವರ್ಷದ ಹಿಂದೆಯೇ ಮೀಟೂ ಆರೋಪ ಕೇಳಿಬಂದಿತ್ತು ಎಂದು ಬಹಿರಂಗಪಡಿಸಿದ್ದಾರೆ. ಇದು ಗಂಭೀರ ವಿಷ್ಯವಲ್ಲವಾದರೂ, ತಮಗಾಗಿದ್ದ ಅನುಭವವನ್ನ ಈ ಕ್ಷಣಕ್ಕೆ ಹೇಳಿಕೊಂಡಿದ್ದಾರೆ.

  ಕ್ಷಮೆ ಕೇಳಿದರೆ ಚಿತ್ರರಂಗದ ಘನತೆ ಹೆಚ್ಚಿಸುತ್ತೆ: ಬಿ.ಎಸ್.ಲಿಂಗದೇವರು ಕ್ಷಮೆ ಕೇಳಿದರೆ ಚಿತ್ರರಂಗದ ಘನತೆ ಹೆಚ್ಚಿಸುತ್ತೆ: ಬಿ.ಎಸ್.ಲಿಂಗದೇವರು

  ತಮ್ಮ ಕಾಲೇಜ್ ದಿನಗಳಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಹುಡುಗಿಯೊಬ್ಬಳು ಲಿಂಗದೇವರು ಹಾಗೂ ಅವರ ಸ್ನೇಹಿತನ ವಿರುದ್ಧ ಮೀಟೂ ಆರೋಪ ಮಾಡಿದ್ದರಂತೆ. ಈ ಬಗ್ಗೆ ನಿರ್ದೇಶಕ ಲಿಂಗದೇವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಯಥಾವತ್ ಸಾಲುಗಳನ್ನ ಇಲ್ಲಿ ಪ್ರಕಟಿಸಲಾಗಿದೆ. ಮುಂದೆ ಓದಿ.....

  ಅದು 1988ರಲ್ಲಿ ನಡೆದ ಘಟನೆ

  ಅದು 1988ರಲ್ಲಿ ನಡೆದ ಘಟನೆ

  1988......ನಾನು ಫಾರ್ಮಸಿ ಓದುತ್ತಿದ್ದ ದಿನಗಳವು. ಒಂದು ದಿನ ನಾನು ಮತ್ತು ನನ್ನ ಗಳೆಯ ಇಕ್ಬಾಲ್ ಬೈಕಿನಲ್ಲಿ ಪ್ಯಾಲೇಸ್ ರಸ್ತೆಯ ಕಡೆಯಿಂದ ಬ್ರಿಗೇಡ್ ರೋಡ್ ಕಡೆಗೆ ಹೋಗುತ್ತಿದ್ದೆವು. ಅಲ್ಲೊಂದು ಕಡೆ ಸಿಗ್ನಲ್ ನಲ್ಲಿ ನಿಂತಿದ್ದಾಗ ಪಕ್ಕದಲ್ಲೊಂದು ಆಟೋ ನಿಂತಿತು. ಒಳಗೊಬ್ಬಳು ಮಾಡೆಲ್ (ತರ) ಅಧುನಿಕ ದಿರಿಸು ಧರಿಸಿದ್ದಳು.

  ಅವಳು ನಮ್ಮನ್ನೇ ನೋಡಿದಳು, ನಾವು....

  ಅವಳು ನಮ್ಮನ್ನೇ ನೋಡಿದಳು, ನಾವು....

  ಸ್ಕರ್ಟ್ ಧರಿಸಿ ಚೆಂದ ಕಾಣುತ್ತಿದ್ದಳು. ನಾವು ಅವಳನ್ನೇ ನೋಡಿದೆವು. ಆಮೇಲೆ ನಾವಿಬ್ಬರೇ ಮಾತನಾಡಿಕೊಳ್ಳುತ್ತಾ ಜೋರಾಗಿ ನಕ್ಕೆವು. ಆಗ ಅವಳಿಗೆ ಏನನ್ನಿಸಿತೋ ನಮ್ಮನ್ನೇ ಗುರಾಯಿಸತೊಡಗಿದಳು. ನಾವು ಅವಳನ್ನು ನೋಡಿದ್ದು ಅವಳಿಗೆ ಗೊತ್ತಾಯಿತು ಅನ್ನಿಸುತ್ತದೆ. ಸಿಗ್ನಲ್ ಬಿಟ್ಟಿತು. ನಾವು ಮುಂದೆ ಹೋದೆವು. ಮುಂದಿನ ಸಿಗ್ನಲ್ ನಲ್ಲೂ ಭೇಟಿ ಆಯಿತು.

  ಚಲನಚಿತ್ರ ಅಕಾಡೆಮಿ ನಡೆಗೆ 'ಛೀ! ಅಸಹ್ಯ' ಎಂದ ಬಿ.ಎಸ್.ಲಿಂಗದೇವರು ಚಲನಚಿತ್ರ ಅಕಾಡೆಮಿ ನಡೆಗೆ 'ಛೀ! ಅಸಹ್ಯ' ಎಂದ ಬಿ.ಎಸ್.ಲಿಂಗದೇವರು

  ಆಕೆ ಹಿಂಬಾಲಿಸಿದಳು

  ಆಕೆ ಹಿಂಬಾಲಿಸಿದಳು

  ಒಂದ್ಸಲ ನೋಡಿ ಸುಮ್ಮನಾದೆವು. ಮುಂದೆ ಕ್ವೀನ್ಸ್ ರಸ್ತೆ ದಾಟಿ ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ನಾವು ಮುಂದೆ ಹೋದೆವು. ಅಲ್ಲಿ ಒಂದು ಎಡಕ್ಕೆ ಹೋಗಬಹುದು, ಇನ್ನೊಂದು ಬಲಕ್ಕೆ ಹೋಗಬಹುದು. ನಾವು ವೇಗವಾಗಿ ಮುಂದೆ ಹೋದಂತೆ ಆಕೆ ಆಟೋದಲ್ಲಿ ನಮ್ಮನ್ನು ಹಿಂಬಾಲಿಸಿದಳು. ಮುಂದಿನ ಸಿಗ್ನಲ್ ಗೆ ನಾವು ಬೇಗ ತಲುಪಿದರೆ, ನಮ್ಮ ಹಿಂದೆಯೇ ಬಂದ ಅವಳು ನಮ್ಮ ಬೈಕಿನ ಪಕ್ಕದಲ್ಲೇ ಆಟೋ ನಿಲ್ಲಿಸಿದಳು, ಮತ್ತೆ ನೋಟಗಳ ವಿನಿಮಯ ಆಗಿ ಮಾತಿಗೆ ಮಾತು ಬೆಳೆಯಿತು.

  ನಟಿ ಪಾರ್ವತಿ ಬಿಚ್ಚಿಟ್ಟ ಆಘಾತದ ಸುದ್ದಿ : 12 ವರ್ಷದ ಬಳಿಕ ತಿಳಿದ ಸತ್ಯ! ನಟಿ ಪಾರ್ವತಿ ಬಿಚ್ಚಿಟ್ಟ ಆಘಾತದ ಸುದ್ದಿ : 12 ವರ್ಷದ ಬಳಿಕ ತಿಳಿದ ಸತ್ಯ!

  ಪೊಲೀಸ್ ಸ್ಟೇಷನ್ ಗೆ ಹೋದೆವು

  ಪೊಲೀಸ್ ಸ್ಟೇಷನ್ ಗೆ ಹೋದೆವು

  ನಾವು ಮುಂದೆ ಬಂದಿದ್ದೇವೆ, ಅದು ಹೇಗೆ ಹಿಂಬಾಲಿಸಲು ಸಾಧ್ಯ ಅನ್ನುವುದು ನಮ್ಮ ವಾದ. ಆಗ ಸಿಗ್ನಲ್ ನಲ್ಲೇ ಇದ್ದ ಪೋಲೀಸ್ ಹಾಜರು, ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋದರು. ಆಕೆ ದೂರು ಕೊಟ್ಟಳು. ಅವಳ ದೂರು ಏನಾಗಿತ್ತು ಅಂದರೆ ನಾವು ಅವಳನ್ನು ಹಿಂಬಾಲಿಸುತ್ತಿದ್ದೇವೆ ಎನ್ನುವುದಾಗಿತ್ತು.

  ಸೆಟ್ ನಲ್ಲಿ ಶ್ರುತಿ ಹೇಳಿದ ಹಾಗೆ ಏನೂ ನಡೆದಿಲ್ಲ: ಪೊಲೀಸರ ಮುಂದೆ ನಿರ್ದೇಶಕ ಹೇಳಿಕೆ.! ಸೆಟ್ ನಲ್ಲಿ ಶ್ರುತಿ ಹೇಳಿದ ಹಾಗೆ ಏನೂ ನಡೆದಿಲ್ಲ: ಪೊಲೀಸರ ಮುಂದೆ ನಿರ್ದೇಶಕ ಹೇಳಿಕೆ.!

  ಬುದ್ಧಿವಾದ ಹೇಳಿದ್ದರು

  ಬುದ್ಧಿವಾದ ಹೇಳಿದ್ದರು

  ನಮ್ಮದು ತಾರುಣ್ಯದ ದಿನಗಳು. ನಾವು ಸ್ವಲ್ಪ ಜೋರಾಗಿಯೇ ವಾದ ಮಾಡುತ್ತಿದ್ದೆವು. ಆದರೆ ಆ ಪೋಲೀಸ್ ನಮ್ಮನ್ನು ಕೂರಿಸಿ ಬುದ್ಧಿವಾದ ಹೇಳಿದರು. ನೀವಿನ್ನೂ ಓದುತ್ತಿದ್ದೀರಿ, ಎಫ್ ಐ ಆರ್ ಆದರೆ ಹುಡುಗಿಯರ ವಾದಕ್ಕೆ ಬಲ ಬರುತ್ತದೆ, ನಿಮಗೆ ತೊಂದರೆಯಾಗುತ್ತದೆ, ಕಷ್ಟಕ್ಕೆ ಬೀಳುತ್ತೀರಿ ಎಂದರು. ಆರಂಭದಲ್ಲಿ ಜೋರಾಗಿ ಮಾತನಾಡುತ್ತಿದ್ದ ನಾವು ನಿಧಾನಕ್ಕೆತಣ್ಣಗಾದೆವು. ಅವರು ಜೇಬಲ್ಲಿ ಎಷ್ಟು ದುಡ್ಡಿದೆ ಎಂದು ಕೇಳಿದರು. ಹತ್ತೋ- ಹದಿನೈದು ರೂಪಾಯಿ ಇತ್ತು.

  ಅರ್ಜುನ್ ಸರ್ಜಾ-ಶ್ರುತಿ ಕೇಸ್ ಗೆ ಟ್ವಿಸ್ಟ್: ಪೊಲೀಸರ ಮುಂದೆ 'ವಿಸ್ಮಯ' ನಿರ್ಮಾಪಕ ಹೇಳಿದ್ದೇನು.? ಅರ್ಜುನ್ ಸರ್ಜಾ-ಶ್ರುತಿ ಕೇಸ್ ಗೆ ಟ್ವಿಸ್ಟ್: ಪೊಲೀಸರ ಮುಂದೆ 'ವಿಸ್ಮಯ' ನಿರ್ಮಾಪಕ ಹೇಳಿದ್ದೇನು.?

  ಆಗಲೇ ಮೀಟೂ ಆಗಿತ್ತು

  ಆಗಲೇ ಮೀಟೂ ಆಗಿತ್ತು

  ಆಗ ಆ ಫೋಲೀಸ್ ಹೇಳಿದ್ದು ಹತ್ತು ರೂಪಾಯಿ ಬಿಳಿ ಆಳೆ ತಂದು ಕೊಟ್ಟು ಮನೆಗೆ ಹೋಗ್ತಿಯಾ ಅಥವಾ ಕೋರ್ಟ್ ಹೋಗಿ ಫೈನ್ ಕಟ್ಟುತ್ತೀಯೋ ಎಂಬ ಎರಡು ಆಯ್ಕೆ. ನಾವು ಹತ್ತು ರೂಪಾಯಿಗೆ ಬಿಳಿ ಆಳೆ ತಂದು ಕೊಟ್ಟು ಬಂದೆವು. ಇದು ನನ್ನ ಜೀವನದ ಮೊದಲ ಮತ್ತು ಕೊನೆಯ ಮೀಟೂ. ಅದೂ1988ರಲ್ಲಿ. ಕಾಕತಾಳೀಯವೇನೆಂದರೆ ಈಗಿನ Me Too ಕೇಂದ್ರ ಬಿಂದುವಾದ ಕಬ್ಬನ್ ಪಾರ್ಕ್ ಪೋಲೀಸ್ ಸ್ಟೇಷನ್ನಿನ ಸರಹದ್ದಿನಲ್ಲೇ ನಡೆದಿದ್ದು.

  #ಮೀಟೂ ಆರೋಪ: ಹೈಕೋರ್ಟ್ ಮೊರೆ ಹೋದ ಅರ್ಜುನ್ ಸರ್ಜಾ #ಮೀಟೂ ಆರೋಪ: ಹೈಕೋರ್ಟ್ ಮೊರೆ ಹೋದ ಅರ್ಜುನ್ ಸರ್ಜಾ

  English summary
  Kannada director bs lingadevaru shares his me too experience on 1988.
  Wednesday, October 31, 2018, 18:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X