ಪುನೀತ್ ಜಿಮ್ ವರ್ಕ್‌ಔಟ್‌ಗು ಸಾವಿಗೂ ಸಂಬಂಧ ಇಲ್ಲ; ಸುಳ್ಳು ಸುದ್ದಿ ಹಬ್ಬಿಸಬೇಡಿ-ಚಕ್ರವರ್ತಿ

ಪುನೀತ್ ಧಿಡೀರ್ ಅಂತ ಮೃತರಾಗಲು ಕಾರಣ ಏನು? ಅಷ್ಟಕ್ಕೂ ಪುನೀತ್‌ ರಾಜ್‌ಕುಮಾರ್ ಮಾಡುತ್ತಿದ್ದ ವರ್ಕ್‌ಔಟ್ ಹೇಗಿತ್ತು? ಯಾವ ರೀತಿಯಾಗಿ ಜಿಮ್‌ ವರ್ಕ್‌ಔಟ್ ಮಾಡುತ್ತಿದ್ದರು ಅನ್ನುವ ಬಗ್ಗೆ ಪುನೀತ್‌ ಅವರ ಸ್ನೇಹಿತ ಮತ್ತು ಹತ್ತಿರದಿಂದ ಅಪ್ಪು ಬೆಳವಣಿಗೆಯನ್ನು ಕಂಡಂತಹ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ವೈದ್ಯ ಲೋಕಕ್ಕೆ ಪ್ರಶ್ನೆಯನ್ನು ಮಾಡಿದ್ದಾರೆ.

ಆರೋಗ್ಯ ಚೆನ್ನಾಗಿರಬೇಕು ಅಂದರೆ ವ್ಯಾಯಾಮ ಕೂಡ ಅಷ್ಟೆ ಅವಶ್ಯಕ. ಉತ್ತಮ ಆಹಾರದ ಜೊತೆಗೆ ದೇಹಕ್ಕೆ ವ್ಯಾಯಾಮ ಕೂಡ ಅಗತ್ಯ ಅಂತ ವೈದ್ಯರು ಹೇಳುತ್ತಲೇ ಇರುತ್ತಾರೆ. ಈಗ ಪುನೀತ್ ರಾಜ್‌ಕುಮಾರ್ ಸಾವಿನ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸುತ್ತಿದೆ. ಇಷ್ಟೆಲ್ಲ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರೂ, ವ್ಯಾಯಾಮ ಮಾಡುತ್ತಿದ್ದರು, ನಿತ್ಯವೂ ಜಾಗಿಂಗ್ ಲೈಟ್ ಫುಡ್‌ಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಫ್ಯಾಮಿಲಿ ಡಾಕ್ಟರ್ ಕೂಡ ಅಪ್ಪು ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ತಿಳಿಸಿದ್ದರು. ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಜೊತೆಗೆ ವೈದ್ಯ ಲೋಕಕ್ಕೆ ಪ್ರಶ್ನೆಯನ್ನು ಮಾಡಿದ್ದಾರೆ.

ಪುನೀತ್ ಅವರ ಸಾವಿನ ಸುತ್ತ ಸಾಕಷ್ಟು ಪ್ರಶ್ನೆಗಳು ಈಗ ಎದ್ದಿವೆ. ಅದರಲ್ಲೂ ಪುನೀತ್ ಜಿಮ್ ವರ್ಕ್‌ಔಟ್‌ ನಿಂದಲೇ ಹೀಗೆ ಆಗಿದೆ ಅನ್ನುವಂತಹ ಒಂದಷ್ಟು ಚರ್ಚೆಗಳು ಈಗ ಎದ್ದಿವೆ. ಅಷ್ಟಕ್ಕೂ ಇದು ಸತ್ಯಾನಾ? ಅಪ್ಪು ಸಾವಿಗೂ ಅವರು ಮಾಡುತ್ತಿದ ಜಿಮ್‌ ವರ್ಕ್‌ಔಟ್‌ಗೂ ಸಂಬಂಧ ಇದೆಯಾ? ಖಂಡಿತಾ ಇಲ್ಲ ಎನ್ನುತ್ತಾರೆ ನಿರ್ದೇಶಕ ಚಂದ್ರಚೂಡ್.

ಪುನೀತ್ ಅವರ ಸಾವು ವೈದ್ಯ ಲೋಕಕ್ಕೆ ಸವಾಲಾಗಿದೆ. ಒಬ್ಬ ಉತ್ತಮ ಆರೋಗ್ಯವಂತ ಹೀಗೆ ಸಾಯೋದು ಅಂದರೆ ಸಾಮಾನ್ಯವಲ್ಲ. ಇದನ್ನು ಅರಗಿಸಿಕೊಳ್ಳದ ಚಕ್ರವರ್ತಿ ಚಂದ್ರಚೂಡ್ ವೈದ್ಯಲೋಕಕ್ಕೆ ಒಂದಷ್ಟು ಪ್ರಶ್ನೆ ಮಾಡಿದ್ದಾರೆ. ಫಿಲ್ಮಿಬೀಟ್‌ ಜೊತೆ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅವರು ಮಾಡಿರುವ ಪ್ರಶ್ನೆಗಳೇನು? ಮುಂದೆ ನೋಡಿ...

ಅಪ್ಪು ಪ್ರೋಟೀನ್ ತೆಗೆದುಕೊಂಡಿಲ್ಲ

ಅಪ್ಪು ಪ್ರೋಟೀನ್ ತೆಗೆದುಕೊಂಡಿಲ್ಲ

ಪ್ರಶ್ನೆ 1: ಅಪ್ಪು ವೇವ್ ಪ್ರೋಟೀನ್ ತಗೊತ್ತಿದ್ದರಾ?

ಇಲ್ಲ, ಅಪ್ಪು ಯಾವತ್ತು ವೇವ್ ಪ್ರೋಟೀನ್ ತೆಗೆದುಕೊಂಡಿಲ್ಲ. ಹೌದು, ಪುನೀತ್ ಫಿಟ್‌ನೆಸ್‌ ಫ್ರೀಕ್ ಆಗಿದ್ದರು. ಹಾಗಂತ ಯಾವತ್ತು 6 ಪ್ಯಾಕ್, ಬಾಡಿ ಬಿಲ್ಡ್ ಮಾಡಿಲ್ಲ. ಹಾಗೇ ಯಾವುದೇ ತರಹ ಜಿಮ್ಮರ್ಸ್‌ಗಳು ಬಳಸುವಂತೆ ಪ್ರೊಟೀನ್‌ ಕೂಡ ತೆಗೆದುಕೊಂಡಿಲ್ಲಾ ಅನ್ನುತ್ತಾರೆ ಚಂದ್ರಚೂಡ್

ಪ್ರಶ್ನೆ 2

ಮನೆಯಲ್ಲೆ ಉತ್ತಮ ಆರೋಗ್ಯಕರ ಆಹಾರದ ವ್ಯವಸ್ಥೆಗೆ ಮೂರು ಜನ ಸಹಾಯಕರಿದ್ದರು.

ಪುನೀತ್ ಉತ್ತಮವಾದ ಆಹಾರ ಸೇವನೆ ಮಾಡುತ್ತಿದ್ದರು. ಅದಕ್ಕಾಗಿಯೇ ಅವರ ಮನೆಯಲ್ಲಿ ಮೂವರು ಸಹಾಯಕರಿದ್ದರು. ಎಂದಿಗೂ ಅವರು ಹೊಟ್ಟೆ ಕೆಡಿಸಿಕೊಳ್ಳುವಂತ ಆಹಾರ ತಿಂದವರಲ್ಲ. ಹೀಗಿದ್ದರೂ ಇಂತಹ ಅವಘಡ ಯಾಕೆ ಆಯಿತು ಎಂದು ಪ್ರಶ್ನಿಸಿದ್ದಾರೆ.

ಪುನೀತ್ ಯಾವತ್ತು ವರ್ಕ್‌ಔಟ್ ಮಿಸ್ ಮಾಡುತ್ತಿರಲಿಲ್ಲ

ಪುನೀತ್ ಯಾವತ್ತು ವರ್ಕ್‌ಔಟ್ ಮಿಸ್ ಮಾಡುತ್ತಿರಲಿಲ್ಲ

ಪ್ರಶ್ನೆ 3: ಅಪ್ಪು ವೈಟ್ ಲಿಫ್ಟಿಂಗ್ ಮಾಡ್ತಾ ಇದ್ರಾ?

ವೈಟ್ ಲಿಫ್ಟಿಂಗ್ ಅಪ್ಪು ಮಾಡುತ್ತಿರಲಿಲ್ಲ

ಪುನೀತ್ ಯಾವತ್ತು ವರ್ಕ್‌ಔಟ್ ಮಿಸ್ ಮಾಡುತ್ತಿರಲಿಲ್ಲ. ಹಾಗಂತ ಯಾವತ್ತೂ ಅವರ ದೇಹ ದಂಡಿಸುವಂತೆ ವೈಟ್‌ ಲಿಫ್ಟ್ ಮಾಡೇ ಇಲ್ಲ. ಹೀಗಿದ್ದಾಗ ಅಪ್ಪು ಅವರಿಗೆ ವರ್ಕ್‌ಔಟ್ ಮುಳುವಾಯ್ತು ಅನ್ನುವವರು ಇದಕ್ಕೆ ಏನು ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.


ಪ್ರಶ್ನೆ 4: ಬೂಟ್ ಕ್ಯಾಂಪ್ ವರ್ಕ್‌ಔಟ್ ಬಗ್ಗೆ ಹೇಳಿ

ಪುನೀತ್ ಅವರದ್ದು ಬೂಟ್ ಕ್ಯಾಂಪ್ ವರ್ಕ್‌ಔಟ್

ಚಕ್ರವರ್ತಿ ಅವರು ಹೇಳುವಂತೆ ಪುನೀತ್ ಯಾವತ್ತೂ ಮಾಡುತ್ತಿದ್ದದ್ದು, ಬೂಟ್ ಕ್ಯಾಂಪ್ ಟ್ರೈನಿಂಗ್ ಅಂದರೆ ಮಿಲಿಟರಿಯಲ್ಲಿ ಮಾಡುವಂತಹ ವ್ಯಾಯಾಮಗಳು. ಇದನ್ನು ಮಾಡುವುದರಿಂದ ರಕ್ತದೊತ್ತಡ, ಹೃದಯ ಬಡಿತ, ಬ್ಯಾಡ್ ಕೊಲೆಸ್ಟ್ರಾಲ್ ಸಮತೋಲನದಲ್ಲಿ ಇರುತ್ತದೆ. ಇದನ್ನು ಬಿಟ್ಟು ಅಪ್ಪು ಬೇರೆ ವರ್ಕ್‌ಔಟ್‌ಗಳನ್ನು ಮಾಡುತ್ತಿರಲಿಲ್ಲ. ಇದನ್ನು ಎಲ್ಲರೂ ಗಮನಿಸಬೇಕು ಅನ್ನೋದು ಚಂದ್ರಚೂಡ್ ಅಭಿಪ್ರಾಯ.

ಯಾವ ಕೆಟ್ಟ ಹವ್ಯಾಸವು ವಿಪರೀತ ಇರಲಿಲ್ಲ

ಯಾವ ಕೆಟ್ಟ ಹವ್ಯಾಸವು ವಿಪರೀತ ಇರಲಿಲ್ಲ

ಪ್ರಶ್ನೆ 5: ಆರೋಗ್ಯದ ಸಮತೋಲನಕ್ಕೆ ಏನು ಬೇಕು

ಯಾವ ಕೆಟ್ಟ ಹವ್ಯಾಸವು ವಿಪರೀತ ಇರಲಿಲ್ಲ. ದೈವಭಕ್ತ ಮತ್ತು ಶಾಂತ ಮನಸ್ಸು

ಪುನೀತ್ ಯಾವತ್ತು ಕೆಟ್ಟ ಅಭ್ಯಾಸಗಳನ್ನು ಕಲಿತಿರಲಿಲ್ಲ. ಆರೋಗ್ಯದ ಸಮತೋಲನಕ್ಕೆ ಏನು ಬೇಕು ಅದನ್ನಷ್ಟೆ ಮಾಡುತ್ತಿದ್ದರು. ಹಾಗೇ ದೇವರನ್ನು ಹೆಚ್ಚಾಗಿ ಆರಾಧನೆ ಮಾಡುತ್ತಿದ್ದರು. ತಂದೆಯಂತೆಯೇ ದೈವ ಭಕ್ತ ಅಪ್ಪು. ಇದರಿಂದ ಅವರ ಮನಸ್ಸು ಕೂಡ ಶಾಂತವಾಗಿ ಇರುತ್ತಿತ್ತು.


ಪ್ರಶ್ನೆ 6: ಪುನೀತ್ ಒತ್ತಡಕ್ಕೆ ಸಿಲುಕಿದ್ರಾ

ಯಾವ ಒತ್ತಡವು ಇರಲಿಲ್ಲ, ತುಂಬು ಕುಟುಂಬ ಇರುವ ಯಶಸ್ವಿ ಪುರುಷ ಅಪ್ಪು

ಪುನೀತ್ ಯಾವತ್ತು ಒತ್ತಡಕ್ಕೆ ಸಿಲುಕಿದವರು ಅಲ್ಲ. ಜೀವನದಲ್ಲಿ ಸ್ಟ್ರೇಸ್ ಅನ್ನಿಸುವಂತದ್ದನ್ನ ಯಾವುದು ಮಾಡುತ್ತಿರಲಿಲ್ಲ. ಕುಟುಂಬದ ಜೊತೆಗೂ ಖುಷಿ ಖುಷಿ ಇಂದ ಇರುತ್ತಿದ್ದರು ಹೀಗಾಗಿ ಅಪ್ಪುಗೆ ಇದ್ದ ಸಮಸ್ಯೆ ಏನು ಇಲ್ಲಿ ಎಂದು ವೈದ್ಯಲೋಕಕ್ಕೆ ಪ್ರಶ್ನಿಸಿದ್ದಾರೆ.

ಪುನೀತ್ ತಿರುಪತಿ ಬೆಟ್ಟಕ್ಕೆ ನಡೆದುಕೊಂಡೆ ಹೋಗುತ್ತಿದ್ದರು

ಪುನೀತ್ ತಿರುಪತಿ ಬೆಟ್ಟಕ್ಕೆ ನಡೆದುಕೊಂಡೆ ಹೋಗುತ್ತಿದ್ದರು

ಹಾಗೇ ಮಾತುಮುಂದುವರೆಸಿ ಮಾತನಾಡಿದ ಅವರು. ಪುನೀತ್ ಸೈಕ್ಲಿಂಗ್ ಹೆಚ್ಚಾಗಿ ಮಾಡುತ್ತಿದ್ದರು. ದಿನಕ್ಕೆ 5 ಕಿ.ಮೀ ಸೈಕ್ಲಿಂಗ್ ಹೋಗುತ್ತಿದ್ದರು. ವೈದ್ಯರೇ ತಿಳಿಸುವಂತೆ ಸೈಕ್ಲಿಂಗ್ ಮಾಡುವವರಿಗೆ ಹೃದಯ ಸಂಬಂಧಿ ಖಾಯಿಲೆ ಬರುವುದಿಲ್ಲ ಎಂದು. ಹಾಗಾದ್ರೆ ಪುನೀತ್ಗೆ ಹೀಗೆ ಯಾಕೆ ಆಯಿತು? ಪುನೀತ್ ಆರೋಗ್ಯ ಎಡವಿದ್ದು ಎಲ್ಲಿ ಎಂದು ಪ್ರಶ್ನಿಸಿದ್ದಾರೆ.


ಪುನೀತ್ ತಿರುಪತಿ ಬೆಟ್ಟಕ್ಕೆ ನಡೆದುಕೊಂಡೆ ಹೋಗುತ್ತಿದ್ದರು. 82 ನಿಮಿಷದಲ್ಲಿ ಕೆಳಗಿನಿಂದ ಬೆಟ್ಟ ಹತ್ತಿ ಮೇಲೆ ತಲುಪುತ್ತಿದ್ದರು. ಯಾವತ್ತು ಅವರು ತಿರುಪತಿ ಬೆಟ್ಟಕ್ಕೆ ಕಾರಿನಲ್ಲಿ ಹೋದವರಲ್ಲ. ಎನರ್ಜಿ ಇಂದ ಕಾಲ್ನಡಿಗೆಯಲ್ಲೆ ಚಲಿಸುತ್ತಿದ್ದರು. ಹೀಗೆ ಇಷ್ಟೆಲ್ಲ ಆಕ್ಟಿವ್ ಇದ್ದ ಪುನೀತ್, ಆರೋಗ್ಯದಲ್ಲಿ ಸಮತೋಲನಾ, ಮಿತ ಆಹಾರ ಪದ್ಧತಿ , ಒತ್ತಡ ಇಲ್ಲದ ಬದುಕು ನಿರ್ವಹಿಸುತ್ತಿದ್ದ ಅಪ್ಪು ಅವರಿಗೆ ಹೀಗೆ ಆಗಲು ಕಾರಣ ಏನು ಅನ್ನೋದು ಇವರ ಒಂದಷ್ಟು ಪ್ರಶ್ನೆಗಳು. ಇದನ್ನು ಅರಿತಿರುವ ವೈಧ್ಯರು ಇದಕ್ಕೆ ಉತ್ತರಿಸಬೇಕು. ಜನರಲ್ಲಿ ಏನು ತಪ್ಪು ಕಲ್ಪನೆಗಳು ಓಡಾಡುತ್ತಿವೆ, ಪುನೀತ್ ವರ್ಕ್‌ಔಟ್ ಮಾಡಿ ಹೀಗೆ ಆಯ್ತು ಅಂತ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಅವರಿಗೆ ಉತ್ತರಿಸಬೇಕಾಗಿರೊ ಕರ್ತವ್ಯ ವೈದ್ಯರದ್ದು ಹೀಗಾಗಿ ಈ ಬಗ್ಗೆ ಮಾಹಿತಿ ನೀಡಬೇಕು ಅನ್ನೋದು ಅವರ ಮಾತಿನ ಉದ್ದೇಶ.

More from Filmibeat

English summary
Director Chakravarthy Chandrachud asked questions to the doctor regarding Puneeth's death. Here is exclusive chit chat with Filmibeat Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X