For Quick Alerts
  ALLOW NOTIFICATIONS  
  For Daily Alerts

  ರಾಜ್ಯ ಪ್ರಶಸ್ತಿ ವಿರುದ್ಧ ಅಸಮಾಧಾನ: 'ಸಿನಿಮಾ ತರಬೇತಿಗಿಂತ ಲಾಬಿ ಮಾಡುವುದು ಕಲಿಯಬೇಕು'

  |

  2018ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾದ ಬೆನ್ನಲ್ಲೆ ಅಸಮಾಧಾನದ ಹೊಗೆ ಭುಗಿಲೆದ್ದಿದೆ. ವಿಮರ್ಶಾತ್ಮಕವಾಗಿ ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದ್ದ 'ಅಮ್ಮಚ್ಚಿಯೆಂಬ ನೆನಪು' ಚಿತ್ರವನ್ನು ಕಡೆಗಣಿಸಲಾಗಿದೆ ಎಂದು ನಿರ್ದೇಶಕಿ ಚಂಪಾ ಶೆಟ್ಟಿ ಬೇಸರ ಹೊರಹಾಕಿದ್ದಾರೆ.

  ಹಿರಿಯ ನಿರ್ದೇಶಕ ಜೋಸೈಮನ್ ನೇತೃತ್ವದ ಸಮಿತಿ ಆ ಸಲ ಪ್ರಶಸ್ತಿಗಾಗಿ ಚಿತ್ರಗಳನ್ನು ಆಯ್ಕೆ ಮಾಡಿದ್ದು, ಈ ಸಮಿತಿ ವಿರುದ್ಧ ಚಂಪಾ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಮಾಣಿಕವಾಗಿ ಸಿನಿಮಾ ಮಾಡಿದವರಿಗೆ ಬೆಲೆ ಇಲ್ಲ, ಮುಂದಿನ ದಿನಗಳಲ್ಲಿ ಸಿನಿಮಾ ತರಬೇತಿ ಪಡೆಯವುದಕ್ಕಿಂತ ಲಾಬಿ ಮಾಡುವುದು ಹೇಗೆ ಎಂದು ಕಲಿಯುವುದು ಉತ್ತಮ ಎಂದು ತಮ್ಮ ಫೇಸ್ ಬುಕ್ ನಲ್ಲಿ ಕಿಡಿಕಾರಿದ್ದಾರೆ.

  2018ನೇ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ರಾಘಣ್ಣ ಅತ್ಯುತ್ತಮ ನಟ, ಮೇಘನಾ ರಾಜ್ ಉತ್ತಮ ನಟಿ2018ನೇ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ರಾಘಣ್ಣ ಅತ್ಯುತ್ತಮ ನಟ, ಮೇಘನಾ ರಾಜ್ ಉತ್ತಮ ನಟಿ

  ಚಂಪಾ ಶೆಟ್ಟಿ ಅವರು ಬರೆದುಕೊಂಡಿರುವ ಫೇಸ್ ಬುಕ್ ಪೋಸ್ಟ್ ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದ್ದು, ಇದೆಲ್ಲವೂ ಈಗ ಚರ್ಚೆಗೆ ಕಾರಣವಾಗಿದೆ. ಏನಿದೆ ಆ ಪೋಸ್ಟ್ ನಲ್ಲಿ? ಮುಂದೆ ಓದಿ....

  'ಅಮ್ಮಚ್ಚಿ' ಚಿತ್ರ ಕಡೆಗಣನೆ

  'ಅಮ್ಮಚ್ಚಿ' ಚಿತ್ರ ಕಡೆಗಣನೆ

  "ಅಮ್ಮಚ್ಚಿ" ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಎರಡರಲ್ಲಿಯೂ ವಂಚಿತಳಾಗಿದ್ದಾಳೆ..... ಪ್ರಶಸ್ತಿಗಳ ಮಾನದಂಡ ಏನು ?.. ಪತ್ರಿಕಾ ವಿಮರ್ಶಕರು, ಹಾಗೂ ಪ್ರೇಕ್ಷಕರ ಅಭಿಪ್ರಾಯದ ಪ್ರಕಾರ, "ಅಮ್ಮಚ್ಚಿ" ಸಿನೆಮಾ, ಆತ್ತುತ್ತಮ ಚಿತ್ರ, ಕತೆ, ಚಿತ್ರಕತೆ, ನಿರ್ದೇಶನ, ಸಾಹಿತ್ಯ, ಸಂಗೀತ, ಛಾಯಾಗ್ರಹಣ, ಸಂಕಲನ, ಕಲಾನಿರ್ದೇಶನ, ಹೀಗೆ ಎಲ್ಲ ವಿಭಾಗದಲ್ಲಿಯೂ ಪ್ರಶಸ್ತಿಗೆ ಅರ್ಹತೆ ಇರುವ ಚಿತ್ರ. ಆದರೆ ತೀರ್ಪುಗಾರರು ಛಾಯಾಗ್ರಹಣ ಒಂದು ಬಿಟ್ಟು ಬೇರೆ ಯಾವ ವಿಭಾಗವನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂಬುದೇ ದುರಂತ..''

  'ನನಗೆ ಬಂದ ಮೊದಲ ಪ್ರಶಸ್ತಿ': ಸಂತಸ ಹಂಚಿಕೊಂಡ ರಾಘವೇಂದ್ರ ರಾಜ್ ಕುಮಾರ್'ನನಗೆ ಬಂದ ಮೊದಲ ಪ್ರಶಸ್ತಿ': ಸಂತಸ ಹಂಚಿಕೊಂಡ ರಾಘವೇಂದ್ರ ರಾಜ್ ಕುಮಾರ್

  ತೀರ್ಪುಗಾರರ ಕಣ್ಣಿಗೂ ಬೀಳಲಿಲ್ಲ ಏಕೆ?

  ತೀರ್ಪುಗಾರರ ಕಣ್ಣಿಗೂ ಬೀಳಲಿಲ್ಲ ಏಕೆ?

  ''ಅದ್ಭುತವಾಗಿ "ಪುಟ್ಟಮ್ಮತ್ತೆ " ಪಾತ್ರ ಮಾಡಿದ ಉರಾಳ ಅವರು ಯಾವ ತೀರ್ಪುಗಾರರ ಕಣ್ಣಿಗೂ ಬೀಳಲಿಲ್ಲ ಏಕೆ? ವೈದೇಹಿ ಅವರ ಸೂಕ್ಷ ಸಂವೇದನೆ ಉಳ್ಳ ಸಾಹಿತ್ಯ ಇವರಿಗೆ ಅರ್ಥವಾಗಲಿಲ್ಲ ಏಕೆ? ರಾಷ್ಟ್ರ ಪ್ರಶಸ್ತಿಯ ತೀರ್ಪುಗಾರರಲ್ಲಿ ಒಬ್ಬರು ಹಿಂದೂ ಪತ್ರಿಕೆ ಯಲ್ಲಿ ನೀಡಿರುವ ಹೇಳಿಕೆಯ ಪ್ರಕಾರ, ಕೊನೆಯ ಹಂತದವರೆಗೂ ಇದ್ದ "ಅಮ್ಮಚ್ಚಿ" ಹೆಸರು ಕಡೆಯಲ್ಲಿ ತಪ್ಪಿ ಹೋಯಿತು' ಎಂದಿದ್ದರು. ರಾಜ್ಯ ಪ್ರಶಸ್ತಿಯಲ್ಲಿ ಏನಾಯಿತು ದೇವರೇ ಬಲ್ಲ...''

  ರಾಜ್ಯ ಪ್ರಶಸ್ತಿ ಪ್ರಕಟ: 'ಕೆಜಿಎಫ್' ಹಾಗೂ 'ಟಗರು' ಸಿನಿಮಾಗಳಿಗೆ ಭಾರಿ ನಿರಾಸೆರಾಜ್ಯ ಪ್ರಶಸ್ತಿ ಪ್ರಕಟ: 'ಕೆಜಿಎಫ್' ಹಾಗೂ 'ಟಗರು' ಸಿನಿಮಾಗಳಿಗೆ ಭಾರಿ ನಿರಾಸೆ

  ಅರ್ಹತೆ ಇದ್ದರೂ ಪ್ರಶಸ್ತಿ ತಪ್ಪಿ ಹೋಗಿದೆ

  ಅರ್ಹತೆ ಇದ್ದರೂ ಪ್ರಶಸ್ತಿ ತಪ್ಪಿ ಹೋಗಿದೆ

  ''ಸಿನೆಮಾ ಮಾಡುವುದು ಪ್ರಶಸ್ತಿಗಾಗಿ ಅಲ್ಲ ನಿಜ 31 ದಿನ ಚಿತ್ರಮಂದಿರಗಳಲ್ಲಿ ಮತ್ತು ಅನೇಕ ಸಿನಿಮೊತ್ಸವಗಳಲ್ಲಿ ಅಮ್ಮಚ್ಚಿಯನ್ನು ನೋಡಿದ ಪ್ರೇಕ್ಷಕರು ಈಗಾಗಲೇ ಎಲ್ಲ ಪ್ರಶಸ್ತಿಗಳನ್ನು ನೀಡಿ ಆಗಿದೆ.. ಎಷ್ಟೋ ಜನ ಕನ್ನಡದಲ್ಲಿ ಇಂತ ಒಂದು ಸಿನೆಮಾ ಆಗಿರುವುದು ನಮ್ಮ ಹೆಮ್ಮೆ ಅಂತ ಹೇಳಿದ್ದಾರೆ, ಇದರಿಂದ ಸಿನೆಮಾ ಮಾಡಿದ ಸಾರ್ಥಕ್ಯ ಸಿಕ್ಕಿದೆ, ಆದರೆ ಇಷ್ಟೆಲ್ಲಾ ಅರ್ಹತೆ ಇದ್ದರೂ ಪ್ರಶಸ್ತಿ ತಪ್ಪಿ ಹೋಗುವ ಇಂತಹ ಸಮಯದಲ್ಲಿ ಬೇಡವೆಂದರೂ ವ್ಯವಸ್ಥೆಯ ಬಗ್ಗೆ ಬೇಸರ, ಸಿಟ್ಟು ಎರಡು ಬರುತ್ತದೆ..... ಇದಕ್ಕೆ. ಪರಿಹಾರವೇನು?''

  ಲಾಬಿ ಮಾಡುವುದನ್ನು ಕಲಿಸುವ ಶಾಲೆ ಇರಲಿ

  ಲಾಬಿ ಮಾಡುವುದನ್ನು ಕಲಿಸುವ ಶಾಲೆ ಇರಲಿ

  ''ಮಲಯಾಳಿ, ತಮಿಳು, ಬಂಗಾಳಿ ಮರಾಠಿ ಮುಂತಾದ ಭಾಷೆಗಳಲ್ಲಿ ಹೊಸಬರಿಗೆ, ಹೊಸ ಪ್ರಯತ್ನಗಳಿಗೆ ನೀಡುವ ಪ್ರೋತ್ಸಾಹ, ಸದಭಿರುಚಿಯ ಸಿನೆಮಾಗಳಿಗೆ ಸಿಕ್ಕುವ ಮಾನ್ಯತೆ, ಕನ್ನಡದಲ್ಲಿ ಏಕೆ ಸಿಗುತ್ತಿಲ್ಲ? (ವಿ.ಸೂ..ಇನ್ನು ಮುಂದೆ ಸಿನೆಮಾ ಮಾಡುವ ತರಬೇತಿ ಶಾಲೆಗಳಿಗಿಂತ ಲಾಬಿ ಮಾಡುವುದನ್ನು ಕಲಿಸುವ ಶಾಲೆಗಳನ್ನು ತೆರೆದರೆ ಒಳ್ಳೆಯದೆನೋ)'' ಎಂದು ತಮ್ಮ ಬೇಸರ ಹೊರಹಾಕಿದ್ದಾರೆ.

  English summary
  'Ammachi Yemba nenapu' director champa shetty expressed displeasure against state film award selection committee

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X